Advertisement
ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದು, ರಾಜ್ಯದಲ್ಲಿ ಕೂಡ ಬಿಜೆಪಿಗೆ ಅಧಿಕಾರ ನೀಡಿದರೆ, ರಾಜ್ಯದ ಅಭಿವೃದ್ಧಿ ಸಂಪೂರ್ಣ ಸಾಧ್ಯ ಎಂದರು.
ಸಂಪೂರ್ಣ ನೀರಾವರಿಯಾಗಲು ನಿತ್ಯ ನಿರಂತರವಾಗಿ ಹೋರಾಟ ನಡೆಸುತ್ತಾ ಯಶಸ್ವಿಯಾಗಿದ್ದೇನೆ. ಎರಡು ವರ್ಷಗಳ ಸತತ ಹೋರಾಟದ ಫಲವಾಗಿ ರಾಜ್ಯ ಸರಕಾರ ಮತ್ತು ಕೇಂದ್ರ ಸರ್ಕಾರದಿಂದ 509 ಕೋಟಿ ರೂಪಾಯಿಗಳ ಮಂಜೂರಾತಿ ಸಿಕ್ಕಿದೆ. ಕ್ಷೇತ್ರದ 84 ಕೆರೆಗಳಿಗೆ ಭೀಮಾನದಿಯಿಂದ ನೀರು ತುಂಬಲ್ಪಡುತ್ತಿದೆ. ಇದರಿಂದ ರೈತರ ಸಂಕಷ್ಟದ ದಿನಗಳು ದೂರಾಗಲಿವೆ ಎಂದು ಹೇಳಿದರು. ಕ್ಷೇತ್ರದಲ್ಲಿನ 49 ಸಾವಿರ ಕುಟುಂಬಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಆ ಕುಟುಂಬದ ಸದಸ್ಯರ 75 ಸಾವಿರಕ್ಕೂ ಹೆಚ್ಚು ದೂರವಾಣಿ ಸಂಖ್ಯೆಗಳೊಂದಿಗೆ ಅವರೊಡನೆ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದಲ್ಲಿ ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಇವೆಲ್ಲವನ್ನು ಪರಿಗಣಿಸಿ ಪಕ್ಷ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತದೆ. 4 ದಶಕಗಳ ಕಾಂಗ್ರೆಸ್ ಆಡಳಿತವನ್ನು ಕಿತ್ತೂಗೆಯಲು ಜನರ ಜತೆ ನಿರಂತವಾಗಿ ಸಂಪರ್ಕದಲ್ಲಿರುವ ಮುಖಂಡನಿಂದ ಮಾತ್ರ ಈ ಕಾರ್ಯ ಸಾಧ್ಯವಾಗಲಿದೆ ಎಂದು ಹೇಳಿದರು.
Related Articles
Advertisement