Advertisement

ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?

12:29 AM Dec 06, 2020 | mahesh |

ಹೈದರಾಬಾದ್‌: ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆಯಲ್ಲಿ 55 ಸ್ಥಾನ ಗೆದ್ದು 12 ಪಟ್ಟು ಹಿಗ್ಗಿದ ಬಿಜೆಪಿಯ ಮಿಂಚಿನ ಯಶಸ್ಸಿಗೆ ಹಿಂದೂ ಮತಗಳು, ಆಡಳಿತ ವಿರೋಧಿ ಅಲೆ, ಹೈವೋಲ್ಟೆಜ್‌ ಪ್ರಚಾರಗಳೇ ಕಾರಣ!

Advertisement

ಹೌದು, ಜಿಎಚ್‌ಎಂಸಿ ಶೇ.36 ವಾರ್ಡ್‌ಗಳಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಈ ಮತಗಳೆಲ್ಲ ಎಐಎಂಐಎಂ, ಟಿಆರ್‌ಎಸ್‌ ಜತೆಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಿಜೆಪಿ, ಅವುಗಳ ಬಗ್ಗೆ ದೃಷ್ಟಿ ನೆಡದೆ, ಕೇವಲ ಹಿಂದೂ ಮತಗಳನ್ನು ಒಗ್ಗೂಡಿಸಲು ವ್ಯವಸ್ಥಿತ ರಣತಂತ್ರ ರೂಪಿಸಿತ್ತು. ಹಿಂದೂಗಳನ್ನು ಓಲೈಸಿಕೊಳ್ಳಲು ಅಗತ್ಯವಿರುವ ಎಲ್ಲ ಮಾರ್ಗಗಳನ್ನು ಬಿಜೆಪಿ ಇಲ್ಲಿ ಅನುಸರಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರವಾಹ ನಿರ್ವಹಿಸುವಲ್ಲಿ ಆಡಳಿತರೂಢ ಟಿಆರ್‌ಎಸ್‌ ಎಡವಿದ್ದು, ಕುಟುಂಬ ರಾಜಕಾರಣದ ಆರೋಪಗಳು ಜಿಎಚ್‌ಎಂಸಿ ಮತಪ್ರಭುಗಳನ್ನು ಬಿಜೆಪಿ ಪರ ವಾಲುವಂತೆ ಮಾಡಿವೆ. ಇದರೊಂದಿಗೆ ಪಾಲಿಕೆ ಚುನಾವಣೆಗೆ ಭಾರೀ ಮಹತ್ವ ನೀಡಿ, ದಿಲ್ಲಿಯಿಂದ ದೌಡಾಯಿಸಿದ ಕಮಲಪಾಳಯದ ಹೈಕಮಾಂಡ್‌ಗಳ ಹೈವೋಲ್ಟೆàಜ್‌ ಪ್ರಚಾರ ಬಿಜೆಪಿಗೆ ಬೋನಸ್‌ ಆಗಿತ್ತು. ಹಾಗೆ ಆಗಮಿಸಿದ ಎಲ್ಲ ನಾಯಕರೂ ಸಂಚಲನ ಸೃಷ್ಟಿಸುವಂಥ ಹೇಳಿಕೆಗಳನ್ನು ನೀಡಿದ್ದು ವರದಾನವಾಯಿತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. 2023ರ ವಿಧಾನಸಭೆ ಎದುರಿಸಲು ಬಿಜೆಪಿಗೆ ಜಿಎಚ್‌ಎಂಸಿ ಫ‌ಲಿತಾಂಶ ಭದ್ರಬುನಾದಿ ಹಾಕಿಕೊಟ್ಟಿದೆ.

ಕೂದಲೆಳೆ ಅಂತರದಿಂದ ಸೋಲುಂಡ ಟಿಆರ್‌ಎಸ್‌!
ಆಡಳಿತರೂಢ ಟಿಆರ್‌ಎಸ್‌ ಅನ್ನು ಬಿಜೆಪಿ 13 ಕಡೆಗಳಲ್ಲಿ ಭಾರೀ ಪೈಪೋಟಿ ನೀಡಿ ಸೋಲಿಸಿದೆ. ಬಿ.ಎನ್‌. ರೆಡ್ಡಿ ನಗರದಲ್ಲಿ ಕೇವಲ 32 ಮತಗಳಿಂದ ಟಿಆರ್‌ಎಸ್‌, ಕಮಲದ ವಿರುದ್ಧ ಸೋಲುಂಡಿದೆ. ಮಲ್ಕಜಿYರಿ- 178, ಅಡಿಕೆ¾ಟ್‌- 277, ಹಸ್ತಿನಾಪುರಂ -277, ವಿನಾಯಕ ನಗರದಲ್ಲಿ ಕೇವಲ 287 ಮತಗಳಿಂದ ಗೆಲುವು ಬಿಟ್ಟುಕೊಟ್ಟಿದೆ.

“ಮೇಯರ್‌’ ಹಾದಿ ಒಗಟು
150 ಜನಪ್ರತಿನಿಧಿಗಳು ಮತ್ತು 45 ಶಾಸಕ- ಸಂಸದ ಪ್ರತಿನಿಧಿಗಳ ಮತದೊಂದಿಗೆ ಜಿಎಚ್‌ಎಂಸಿ ಮಂಡಳಿಯ ಒಟ್ಟು ಬಲಾಬಲ 195. ಈ ಪ್ರಕಾರ, ಮೇಯರ್‌ ಹುದ್ದೆಗೆ ಕನಿಷ್ಠ 98 ಸ್ಥಾನಗಳ ಬೆಂಬಲ ಅತ್ಯಗತ್ಯ. ಮೇಯರ್‌ ಹುದ್ದೆಗೆ ಅಗತ್ಯವಿದ್ದ 65 ಸಂಖ್ಯೆ ತಲು ಪಲು ಟಿಆರ್‌ಎಸ್‌ ವಿಫ‌ಲವಾಗಿದ್ದು, ಕೇವಲ 55 ವಾರ್ಡ್‌ಗಳಲ್ಲಷ್ಟೇ ಅದು ಗೆದ್ದಿದೆ. ಇದರೊಂದಿಗೆ 31 ಶಾಸಕ-ಸಂಸದರ ಮತಗಳೂ ಟಿಆರ್‌ಎಸ್‌ ಜತೆಗಿದ್ದು, ಒಟ್ಟು ಸಂಖ್ಯೆ 86 ತಲುಪುತ್ತದೆ. ಮತ್ತೆ ಎಐಎಂಐಎಂ ಮತ್ತೆ ಮೈತ್ರಿ ಅನಿವಾರ್ಯ. ಟಿಆರ್‌ಎಸ್‌, ಒವೈಸಿ ಪಕ್ಷದೊಂದಿಗೆ ಮೈತ್ರಿಗೆ ಒಪ್ಪಿದರೂ ಅವರು ಮೇಯರ್‌ ಅಥವಾ ಉಪಮೇಯರ್‌ ಹುದ್ದೆಗೆ ಬೇಡಿಕೆ ಇಡುವ ಸಾಧ್ಯತೆಯೂ ದಟ್ಟವಾಗಿದೆ. ಮೇಯರ್‌ ಸ್ಥಾನವನ್ನು ಎಐಎಂಐಎಂಗೆ ಒಪ್ಪಿಸುವುದು ಸ್ವತಃ ಟಿಆರ್‌ಎಸ್‌ ಮುಖಂಡರಿಗೇ ಒಲವಿಲ್ಲ ಎನ್ನಲಾಗಿದೆ.

Advertisement

ಮೇಯರ್‌ ಹುದ್ದೆ “ಸಾಮಾನ್ಯ’ ಕೆಟಗರಿಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿರುವುದರಿಂದ ಟಿಆರ್‌ಎಸ್‌ ಕೊಂಚ ನಿರಾಳವಾಗಿದೆ.
ಮೇಯರ್‌ ಆಯ್ಕೆ ಕುರಿತು ಯೋಚಿಸಿ,  ಟಿಆರ್‌ಎಸ್‌ ನಿರ್ಧಾರ ಕೈಗೊಳ್ಳಲಿದೆ.

ಕೂದಲೆಳೆ ಅಂತರದಿಂದ ಸೋಲುಂಡ ಟಿಆರ್‌ಎಸ್‌!
ಆಡಳಿತರೂಢ ಟಿಆರ್‌ಎಸ್‌ ಅನ್ನು ಬಿಜೆಪಿ 13 ಕಡೆಗಳಲ್ಲಿ ಭಾರೀ ಪೈಪೋಟಿ ನೀಡಿ ಸೋಲಿಸಿದೆ. ಬಿ.ಎನ್‌. ರೆಡ್ಡಿ ನಗರದಲ್ಲಿ ಕೇವಲ 32 ಮತಗಳಿಂದ ಟಿಆರ್‌ಎಸ್‌, ಕಮಲದ ವಿರುದ್ಧ ಸೋಲುಂಡಿದೆ. ಮಲ್ಕಜಿYರಿ- 178, ಅಡಿಕೆ¾ಟ್‌- 277, ಹಸ್ತಿನಾಪುರಂ -277, ವಿನಾಯಕ ನಗರದಲ್ಲಿ ಕೇವಲ 287 ಮತಗಳಿಂದ ಗೆಲುವು ಬಿಟ್ಟುಕೊಟ್ಟಿದೆ.

ಬಿಜೆಪಿಯನ್ನು ಹೇಗೆ ಕಟ್ಟಿಹಾಕಬೇಕು ಎಂಬುದನ್ನು ಟಿಆರ್‌ಎಸ್‌ ತೋರಿಸಿಕೊಟ್ಟಿದೆ. ನಮ್ಮ ತಂತ್ರವನ್ನು ದೇಶದ ಇತರೆ ಭಾಗಗಳ ಪಕ್ಷಗಳೂ ಅನುಸರಿಸಬೇಕು.
ಕೆ. ಕವಿತಾ, ಟಿಆರ್‌ಎಸ್‌ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next