Advertisement

ಚುನಾವಣೆಯನ್ನು ರೆಫ‌ರೆಂಡಂ ಎಂದು ಬಿಜೆಪಿ ಘೋಷಿಸಲಿ : ಕಾಂಗ್ರೆಸ್‌

04:48 PM Jan 31, 2017 | udayavani editorial |

ಚಂಡೀಗಢ : ನೋಟು ಅಪನಗದೀಕರಣದ ಕ್ರಮವು ಭಯೋತ್ಪಾದನೆ, ಕಪ್ಪು ಹಣ, ನಕ್ಸಲ್‌ವಾದ ಮತ್ತು ಮಾದಕ ದ್ರವ್ಯ ಪಿಡುಗನ್ನು ತಡೆಯುವಲ್ಲಿ ನೆರವಾಗಿದೆ ಎಂಬ ಬಗ್ಗೆ ಬಿಜೆಪಿಗೆ ವಿಶ್ವಾಸವಿದ್ದರೆ ಅದು ಪಂಚರಾಜ್ಯ ವಿಧಾನಸಭಾ ಚುನಾವಣೆಗಳನ್ನು ಜನಮತಗಣನೆ (referendum) ಎಂಬುದಾಗಿ ಘೋಷಿಸಬೇಕು ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹೇಳಿದ್ದಾರೆ. 

Advertisement

ನೋಟು ನಿಷೇಧದ ಕ್ರಮದಿಂದ ದೇಶದಲ್ಲಿ ಅಭದ್ರತೆ ಉಂಟಾಗಿದೆ ಎಂದು ಆರೋಪಿಸಿದ ಸಚಿನ್‌, “ಕೆಲವು ಬಿಜೆಪಿ ನಾಯಕರು ಕೂಡ ನೋಟು ನಿಷೇಧವು ಒಂದು ವಿಫ‌ಲ ಕ್ರಮವಾಗಿರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು. 

ನೋಟು ನಿಷೇಧ ಕ್ರಮದಿಂದಾಗಿ ಬ್ಯಾಂಕುಗಳ ಮುಂದೆ ಮೈಲುದ್ದ ಕ್ಯೂನಲ್ಲಿ ನಿಂತ ಜನರಲ್ಲಿ 125 ಮಂದಿ ಮೃತಪಟ್ಟಿರುವುದಕ್ಕೆ ಯಾರು ಕಾರಣ ಎಂಬುದನ್ನು ಪ್ರಧಾನಿ ಮೋದಿ ಅವರು ಜನರಿಗೆ ಉತ್ತರಿಸಬೇಕು ಎಂದು ರಾಜಸ್ಥಾನ್‌ ಪಿಸಿಸಿ ಮುಖ್ಯಸ್ಥರೂ ಆಗಿರುವ ಸಚಿನ್‌ ಪೈಲಟ್‌ ಆಗ್ರಹಿಸಿದರು. 

ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ವಿರುದ್ಧ ಚಾಟಿ ಬೀಸಿದ ಸಚಿನ್‌, ದಿಲ್ಲಿ ಜನರು ಕೊಟ್ಟಿರುವ ಜನಾದೇಶದ ಪ್ರಕಾರ ಸಾಂವಿಧಾನಿಕ ಹೊಣೆಗಾರಿಕೆಯನ್ನು ಕೇಜ್ರಿವಾಲ್‌ ನಿಭಾಯಿಸುತ್ತಿಲ್ಲ; ದಿಲ್ಲಿ ಮುಖ್ಯಮಂತ್ರಿ ಹಾಗೂ ಎಲ್ಲ ಶಾಸಕರು ಪಂಜಾಬ್‌ ಮತ್ತು  ಗೋವೆಯಲ್ಲಿ ಚುನಾವಣಾ ಪ್ರಚಾರ ನಿರತರಾಗಿದ್ದಾರೆ; ರಾಷ್ಟ್ರ ರಾಜಧಾನಿಯನ್ನು ಅವರು ಕಡೆಗಣಿಸುತ್ತಿದ್ದಾರೆ; ದಿಲ್ಲಿಯ ಸಾರ್ವಜನಿಕರ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next