Advertisement

ಬಿಜೆಪಿ -ಶಿವಸೇನೆ: ಹೆಚ್ಚಿದ ಪರಸ್ಪರ ಟೀಕೆ

10:42 AM Apr 26, 2022 | Team Udayavani |

ಮುಂಬಯಿ: ಹನುಮಾನ್‌ ಚಾಲೀಸ ಪಠನ ವಿಚಾರ ಮತ್ತು ಧ್ವನಿವರ್ಧಕಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಟೀಕೆ ಮತ್ತಷ್ಟು ಹೆಚ್ಚಿದೆ. ಸಂಸದೆ ನವನೀತ್‌ ಕೌರ್‌, ಅವರ ಪತಿ-ಶಾಸಕ ರವಿ ರಾಣಾ ಬಂಧನವನ್ನು ಮಹಾರಾಷ್ಟ್ರ ವಿಕಾಸ್‌ ಅಘಾಡಿ ಸರಕಾರ ಸಮರ್ಥಿಸಿ ಕೊಂಡಿದ್ದರೆ, ಬಿಜೆಪಿ ಮುಖಂಡ ದೇವೇಂದ್ರ ಫ‌ಡ್ನವೀಸ್‌ ಅವರು “ರಾಜ್ಯ ಕಂಡ ಅತ್ಯಂತ ಅಸಹಿಷ್ಣು ಸರಕಾರ’ ಎಂದು ಟೀಕಿಸಿದ್ದಾರೆ.

Advertisement

ವಿವಾದ ಸಂಬಂಧ ಸರಕಾರ ಕರೆದಿದ್ದ ಸರ್ವಪಕ್ಷಗಳ ಸಭೆಯನ್ನು ವಿಪಕ್ಷ ನಾಯಕ ಫ‌ಡ್ನವೀಸ್‌ ಬಹಿಷ್ಕರಿಸಿದ್ದಾರೆ. ಬಳಿಕ ಬಿಜೆಪಿ ಮತ್ತು ಶಿವಸೇನೆ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿವೆ.

ಕೇಂದ್ರ ಕಾನೂನು ತರಲಿ: ಧ್ವನಿವರ್ಧಕಗಳಿಗೆ ಸಂಬಂಧಿಸಿ ಒಂದೊಂದು ಧರ್ಮಕ್ಕೆ ಒಂದೊಂದು ನಿಯಮ ತರಲು ಸಾಧ್ಯವಿಲ್ಲ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಬೇಕು. ಹಾಗಾಗಿ, ಕೇಂದ್ರ ಸರಕಾರವೇ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಒಂದು ಕಾನೂನು ಜಾರಿ ಮಾಡಲಿ ಎಂದು ಗೃಹ ಸಚಿವ ದಿಲೀಪ್‌ ವಲ್ಸೆ ಪಾಟೀಲ್‌ ಆಗ್ರಹಿಸಿದ್ದಾರೆ.

ಕೇಸು ದಾಖಲಿಸಿ: ಇನ್ನೊಂದೆಡೆ, ಸುದ್ದಿಗೋಷ್ಠಿ ನಡೆಸಿದ ಫ‌ಡ್ನವೀಸ್‌, ಹನುಮಾನ್‌ ಚಾಲೀಸ ಪಠನೆಯು ದೇಶ  ದ್ರೋಹ ವಾದರೆ, ನಾವೆಲ್ಲರೂ ಅದನ್ನೇ ಮಾಡುತ್ತೇನೆ. ನಮ್ಮ ವಿರುದ್ಧವೂ ಕೇಸು ಹಾಕಿ ಎಂದು ಸವಾಲೆಸೆದಿದ್ದಾರೆ.
ದಾದಾಗಿರಿ ಸಹಿಸಲ್ಲ: ಈ ಎಲ್ಲ ಬೆಳವಣಿಗೆಗಳ ನಡುವೆ ಮಾತನಾಡಿರುವ ಸಿಎಂ ಉದ್ಧವ್‌ ಠಾಕ್ರೆ, “ಹನು ಮಾನ್‌ ಚಾಲೀಸಾ ಪಠಿಸುವುದಿದ್ದರೆ ನಮ್ಮ ಮನೆಗೆ ಬಂದು ಪಠನ ಮಾಡಿ. ಆದರೆ, ಅದಕ್ಕೊಂದು ರೀತಿ ನೀತಿ ಇದೆ. ದಾದಾಗಿರಿ ಮಾಡಬೇಡಿ. ಮಾಡಿದರೆ, ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ನಮಗೆ ಬಾಳಾಸಾಹೇಬ್‌ ಕಲಿಸಿಕೊಟ್ಟಿದ್ದಾರೆ’ ಎಂದು ಎಚ್ಚರಿಕೆಭರಿತ ಸೂಚನೆ ನೀಡಿದ್ದಾರೆ.

ಈ ನಡುವೆ, ತಮ್ಮನ್ನು ಪೊಲೀಸರು ಅಮಾ ನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ, ಕುಡಿಯಲು ನೀರು ಕೊಡುತ್ತಿಲ್ಲ, ಜಾತಿನಿಂದನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಂಧಿತೆ ನವನೀತ್‌ ಅವರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾರಿಗೆ ಪತ್ರ ಬರೆದಿದ್ದಾರೆ.

Advertisement

ಸರಕಾರ ಮಾಡಿದ್ದು ಸರಿಯಿದೆ: ಹೈಕೋರ್ಟ್‌
ಸಿಎಂ ಉದ್ಧವ್‌ ಠಾಕ್ರೆ ನಿವಾಸದ ಮುಂದೆ ಹನುಮಾನ್‌ ಚಾಲೀಸಾ ಪಠನ ಮಾಡುವುದಾಗಿ ಘೋಷಿಸಿ, ಬಂಧನಕ್ಕೀಡಾಗಿರುವ ಸಂಸದೆ ನವನೀತ್‌ ಮತ್ತು ರವಿ ರಾಣಾ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ತಿರಸ್ಕರಿಸಿದೆ. ತಮ್ಮ ವಿರುದ್ಧದ ಎಫ್ಐಆರ್‌ ರದ್ದುಗೊಳಿಸುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌, “ಸರಕಾರ ಕೈಗೊಂಡ ಕ್ರಮ ಸರಿಯಾಗಿಯೇ ಇದೆ’ ಎಂದು ಹೇಳಿ ಅರ್ಜಿ ವಜಾ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next