ಅಹಮದಾಬಾದ್: ಗುಜರಾತ್ ನಲ್ಲಿ ಮತ್ತೊಮ್ಮೆ ವಿಜಯ ಪತಾಕೆ ಹಾರಿಸಲು ಸಜ್ಜಾಗಿರುವ ಭಾರತೀಯ ಜನತಾ ಪಕ್ಷವು ಸದ್ಯ 22 ಕ್ಷೇತ್ರಗಳಲ್ಲಿ ಗೆದ್ದು 129 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಒಂದು ವೇಳೆ ಚುನಾವಣೋತ್ತರ ಸಮೀಕ್ಷೆಗಳು ನಿಜವಾದಲ್ಲಿ, ಇದೇ ಮುನ್ನಡೆ ಮುಂದುವರಿದಲ್ಲಿ ಬಿಜೆಪಿ ಹೊಸ ದಾಖಲೆ ಬರೆಯುವುದು ಖಚಿತವಾಗಿದೆ.
ಗುಜರಾತ್ ನಲ್ಲಿ ಬಿಜೆಪಿಯು ತನ್ನದೇ ದಾಖಲೆ ಮುರಿಯುತ್ತಾ ಹೆಜ್ಜೆ ಹಾಕಿದೆ. ಈ ಹಿಂದೆ 127 ಸ್ಥಾನಗಳನ್ನು ಗೆದ್ದುಕೊಂಡಿದ್ದು ಬಿಜೆಪಿಯ ದಾಖಲೆಯಾಗಿತ್ತು. ಈ ದಾಖಲೆ ಈ ಬಾರಿ ಪತನವಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಇದನ್ನೂ ಓದಿ:ಹಿಮಾಚಲ ಪ್ರದೇಶ: ಭರ್ಜರಿ ಗೆಲುವು ದಾಖಲಿಸಿದ ಮುಖ್ಯಮಂತ್ರಿ ಜೈರಾಮ್ ಠಾಕೂರ್
1985ರಲ್ಲಿ ಮಾಧವ ಸಿಂಗ್ ಸೋಲಂಕಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ 147 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದು ಇಂದಿಗೂ ದಾಖಲೆಯಾಗಿಯೇ ಉಳಿದಿದೆ. ಸತತ ಏಳನೇ ಬಾರಿಗೆ ಗುಜರಾತ್ ನಲ್ಲಿ ಅಧಿಕಾರ ಹಿಡಿಯುವತ್ತ ಕಣ್ಣಿಟ್ಟಿರುವ ಬಿಜೆಪಿಯು ಈ ಬಾರಿ ಮಾಧವ ಸಿಂಗ್ ಸೋಲಂಕಿ ದಾಖಲೆಯನ್ನೂ ಮುರಿಯಬಹುದು ಎನ್ನಲಾಗುತ್ತಿದೆ.
ಎರಡು ದಿನದ ಹಿಂದೆ ಬಂದ ಚುನಾವಣೋತ್ತರ ಸಮೀಕ್ಷೆಗಳು ಕೂಡಾ ಬಿಜೆಪಿ ಪ್ರಚಂಡ ಗೆಲುವಿನ ಬಗ್ಗೆ ಭವಿಷ್ಯ ನುಡಿದಿವೆ.