Advertisement

ಕಾಂಗ್ರೆಸ್‌ ವರ್ತನೆ ಖಂಡಿಸಿ ಬಿಜೆಪಿ ಪ್ರತಿಭಟನೆ

09:37 AM Mar 01, 2022 | Team Udayavani |

ಚಿತ್ತಾಪುರ: ಕಾಂಗ್ರೆಸ್‌ ಪಕ್ಷದ ಜನವಿರೋಧಿ ನೀತಿಗಳ ವಿರುದ್ಧ ಭಾರತೀಯ ಜನತಾ ಪಕ್ಷದ ಮುಖಂಡರು ಪಟ್ಟಣದ ಚಿತ್ತಾವಲಿ ವೃತ್ತದಿಂದ ನಡೆಸಿದ ಪ್ರತಿಭಟನೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಾಡ್ಜಿಂಗ್‌ ಕ್ರಾಸ್‌ ಹತ್ತಿರ ಜಮಾವಣೆಗೊಂಡು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ಸಚಿವ ಕೆ.ಎಸ್‌. ಈಶ್ವರಪ್ಪ ಅವರು ನೀಡಿದ ಹೇಳಿಕೆ ಮುಂದಿಟ್ಟುಕೊಂಡು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವ ಮೂಲಕ ಮಹತ್ವದ ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ ಗುಂಡಾವರ್ತನೆಗೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿ, ಕೆ.ಎಸ್‌. ಈಶ್ವರಪ್ಪ ಅಪ್ಪಟ್ಟ ದೇಶಪ್ರೇಮಿಯಾಗಿದ್ದಾರೆ. ಅವರ ಹೇಳಿಕೆಯನ್ನು ಅಪಾರ್ಥವಾಗಿ ತಿಳಿದುಕೊಂಡು ವಿನಾಕಾರಣ ಅವರ ರಾಜೀನಾಮೆಗಾಗಿ ಸದನದ ಕಲಾಪ ಹಾಳು ಮಾಡಿದ ಕಾಂಗ್ರೆಸ್‌ ನಾಯಕರಿಗೆ ರಾಜ್ಯದ ಅಭಿವೃದ್ಧಿ ಮತ್ತು ಜನರ ಹಿತ ಬೇಕಾಗಿಲ್ಲ ಬರೀ ಹೋರಾಟ ಪ್ರತಿಭಟನೆ ಮಾಡುವುರದಲ್ಲಿ ತೊಡಗಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕರು ಈಶ್ವರಪ್ಪ ಅವರಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿರುವುದು ಸರಿಯಲ್ಲ. ಹಿಂದು ಕಾರ್ಯಕರ್ತ ಹರ್ಷಾ ಹಿಂದು ಕೊಲೆಯಾಗಿ ಅನೇಕ ದಿನಗಳಾದರೂ ಸಹ ಇಲ್ಲಿವರೆಗೆ ಯಾವೋಬ್ಬ ಕಾಂಗ್ರೆಸ್‌ ನಾಯಕರು ಮನೆಗೆ ಭೇಟಿ ನೀಡಿ ಕನಿಷ್ಟ ಪಕ್ಷ ಸಾಂತ್ವನ ಹೇಳಿಲ್ಲ. ಇದೇ ಅವರಲ್ಲಿನ ದೇಶಭಕ್ತಿ ತೋರಿಸುತ್ತದೆ ಎಂದು ಕಿಡಿ ಕಾರಿದರು.

ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಅಂಬಿಗರ ಚೌಡಯ್ಯ ನಿಗಮದ ನಿದೇಶಕ ಶರಣಪ್ಪ ನಾಟೀಕಾರ, ಮುಖಂಡರಾದ ವಿಠಲ ನಾಯಕ, ಅರವಿಂದ ಚವ್ಹಾಣ, ಮಣಿಕಂಠ ರಾಠೊಡ, ಅಯ್ಯಪ್ಪ ರಾಮತೀರ್ಥ, ರಾಜು ಮುಕ್ಕಣ್ಣ, ಗೋಪಾಲ ರಾಠೊಡ, ಕವಿತಾ ಚವ್ಹಾಣ, ಭೀಮಣ್ಣ ಸೀಬಾ, ಗುಂಡು ಪಾಟೀಲ, ರಾಮದಾಸ ಚವ್ಹಾಣ, ನಾಗರಾಜ ಹೂಗಾರ, ಅಶ್ವಥ ರಾಠೊಡ, ಮಹೇಶ ಬಟಗೇರಿ, ಶಿವರಾಮ ಚವ್ಹಾಣ, ಮೈಪಾಲ್‌ ಹೊಸೂರ, ದಶರಥ ದೊಡ್ಡಮನಿ, ಸಿದ್ರಾಮಯ್ಯ ಗೊಂಬಿಮಠ, ಮೇಘನಾಥ ಯಾಗಾಪೂರ, ವಿನೋದ ಪವಾರ, ಆನಂದ ಪಾಟೀಲ, ಪಂಕಜಗೌಡ, ನಾಗುಬಾಯಿ ಜಿತುರೆ, ವೀರಣ್ಣ ಯಾರಿ, ಆನಂದ ಇಂಗಳಗಿ, ರಮೇಶ ಕಾಳನೂರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next