Advertisement

Mangaluru ಕರಸೇವಕರ ಬಂಧನ ಖಂಡಿಸಿ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ

10:50 PM Jan 03, 2024 | Team Udayavani |

ಮಂಗಳೂರು: ಹುಬ್ಬಳ್ಳಿಯಲ್ಲಿ ಅಯೋಧ್ಯೆ ಕರಸೇವಕ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಸುದೀರ್ಘ‌ ಕಾಲದ ತನ್ನ ದ್ವೇಷ ಭಾವನೆಯನ್ನು ಹೊರಗೆ ಹಾಕಿದೆ.

Advertisement

ಸರಕಾರಕ್ಕೆ ತಾಕತ್ತಿದ್ದರೆ ರಾಜ್ಯದಲ್ಲಿರುವ ಎಲ್ಲ ಕರಸೇವಕರ ಕೇಸ್‌ಗಳನ್ನು ಮರು ತನಿಖೆ ನಡೆಸಿ ಬಂಧಿಸಲಿ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದ್ದಾರೆ.

ಕರಸೇವಕರ ಬಂಧನ ಖಂಡಿಸಿ ಬುಧವಾರ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಮಾಜ ದಲ್ಲಿ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂ ಗಳನ್ನು ಇಷ್ಟು ತುತ್ಛವಾಗಿ ಕಾಣುವ ಮುಖ್ಯಮಂತ್ರಿ ಬೇರೆ ಯಾರೂ ಇಲ್ಲ. ಪಿಎಫ್‌ಐ ಕಾರ್ಯರ್ತರು ದೇಶ ದ್ರೋಹಿಗಳಲ್ಲ ಎಂದು ಸಿದ್ದರಾಮಯ್ಯ ತಾವೇ ನಿರ್ಧರಿಸಿ ಅವರನ್ನು ಬಿಡುಗಡೆಗೊಳಿಸಿದ್ದಾರೆ. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿ ದವನು ಅಮಾಯಕ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು.
ಅಯೋಧ್ಯೆ ವಿಚಾರವಾಗಿ ಕಾಂಗ್ರೆಸ್‌ನವರು ಹಲವು ರಾಜ್ಯ ಸರಕಾರಗಳನ್ನೇ ಬರ್ಖಾಸ್ತು ಮಾಡಿದ್ದರು. ಹಿಂದೂಗಳು ರೊಚ್ಚಿಗೆದ್ದರೆ ಒಂದೇ ವಾರದಲ್ಲಿ ಸರಕಾರ ಬೀಳುತ್ತದೆ. ಸರಕಾರ ಹಿಂದೂಗಳ ನಂಬಿಕೆ ಹೊಸಕಿ ಹಾಕುವ, ಕೆಣಕುವ ಪ್ರಯತ್ನ ಕೈಬಿಡಬೇಕು ಎಂದರು.

ಕಾಂಗ್ರೆಸ್‌ ಸಣ್ಣತನ
ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮಾತನಾಡಿ, ಇಡೀ ದೇಶ ರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆಯ ಸಂಭ್ರಮದ ಸಂದರ್ಭದಲ್ಲಿದೆ. ಆದರೆ ರಾಜ್ಯ ಸರಕಾರ ಹಿಂದಿನ ಪ್ರಕರಣಗಳನ್ನು ಕೆದಕುವ ಸಣ್ಣತನ ತೋರಿಸುತ್ತಿದೆ. ಇದು ಸಿದ್ದರಾಮಯ್ಯನವರ ತುಷ್ಟೀಕರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಸಾಕ್ಷಿ ಎಂದರು.

ವಾರಂಟ್‌ ಇಲ್ಲದೆ ಬಂಧನ
ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್‌ ಶೇಣವ ಮಾತನಾಡಿ, ಪೊಲೀಸರು ಬಂಧಿ ಸಿರುವ ಹಿಂದೂ ಕಾರ್ಯಕರ್ತ ಶ್ರೀಕಾಂತ  ಪೂಜಾರಿ ಹುಬ್ಬಳ್ಳಿಯಲ್ಲಿಯೇ ಆಟೋ ರಿûಾ ಓಡಿಸುತ್ತಿದ್ದರು. ಅವರು ಎಲ್ಲಿಗೂ ಓಡಿ ಹೋಗಿಲ್ಲ. ವಾರಂಟ್‌ ನೀಡದೆ ಪೊಲೀಸರು ಮಾರು ವೇಷದಲ್ಲಿ ಬಂದು ಬಾಡಿಗೆ ಹೆಸರಿನಲ್ಲಿ ಶ್ರೀಕಾಂತ್‌ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಬಂಧನಕ್ಕೊಳಪಡಿಸಿದ್ದಾರೆ. ಶ್ರೀರಾಮನ ವಿಚಾರದಲ್ಲಿ ತೊಂದರೆ ನೀಡಿದರೆ ಕಾಂಗ್ರೆಸ್‌ ನಿರ್ನಾಮ ವಾಗಲಿದೆ ಎಂದು ಹೇಳಿದರು.

Advertisement

ರಾಮ ಅಲ್ಲ, ರಾವಣ
ಮಂಗಳೂರು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, ಸಿದ್ದರಾಮಯ್ಯ ಸರಕಾರ ಬಂದ ಮೇಲೆ ತುಷ್ಟೀಕರಣ ನಡೆಯುತ್ತಿದೆ. ಬಹುಸಂಖ್ಯಾಕ ಹಿಂದೂಗಳ ಮೇಲೆ ದಮನ ನೀತಿ ಅನುಸರಿಸುತ್ತಿದೆ. ಇದೀಗ ರಾಮಮಂದಿರ ಕರಸೇವಕರನ್ನು ಬಂ ಧಿಸುವ ಹೇಯ ಕೃತ್ಯ ನಡೆಸಿದೆ. ಮಂಗಳೂರಿನಲ್ಲಿಯೂ ಹಿಂದೂ ಕಾರ್ಯಕರ್ತರು, ನಾಯಕರ ಮೇಲೆ ಕೇಸು ಹಾಕಲಾಗುತ್ತಿದೆ. ಗಡೀಪಾರು ಮಾಡಲಾಗುತ್ತಿದೆ. ಸಿದ್ದರಾಮಯ್ಯ ಹೆಸರಿನಲ್ಲಿರುವ ರಾಮಯ್ಯ ನಮ್ಮ ರಾಮ ಅಲ್ಲ, ಅದು ರಾವಣ ಎಂದು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ರಾಜ್ಯ ಕಾರ್ಯದರ್ಶಿ ಕ್ಯಾ| ಬೃಜೇಶ್‌ ಚೌಟ, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಹರಿಕೃಷ್ಣ ಬಂಟ್ವಾಳ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next