Advertisement

ಬಿಜೆಪಿಗೆ ಆಶೀರ್ವದಿಸಿ, ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ: ಕೊಪ್ಪಳದಲ್ಲಿ ಜೆ.ಪಿ.ನಡ್ಡಾ

04:46 PM Dec 15, 2022 | Team Udayavani |

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷ ಆಡಳಿತ ನಡೆಸಿ ಜನರ ಮನಸ್ಸಿನಲ್ಲಿದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಸರ್ಕಾರ ಜನಪರ ಆಡಳಿತ ನಡೆಸಿವೆ. ರಾಜ್ಯದ ಜನತೆ ಮತ್ತೆ ಬಿಜೆಪಿಗೆ ಆಶೀರ್ವಾದ ಮಾಡಿ ನಮಗೆ ಅಧಿಕಾರ ಕೊಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಮನವಿ ಮಾಡಿದರು.

Advertisement

ಕೊಪ್ಪಳದಲ್ಲಿ ಬಿಜೆಪಿ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ರಾಜ್ಯದ 10 ಜಿಲ್ಲೆಗಳ ಬಿಜೆಪಿ ಕಚೇರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇದು ಅಂಜನಿಪುತ್ರ ಆಂಜನೇಯ ಜನಿಸಿದ ನಾಡು, ಇಂಥ ಪುಣ್ಯ ಕ್ಷೇತ್ರಕ್ಕೆ ನಾನು ಆಗಮಿಸಿರುವುದು ನನ್ನ ಭಾಗ್ಯ. ಮಳೆ ಮಲ್ಲೇಶ್ವರ ದೇವಾಲಯ ಇರುವ ಐತಿಹಾಸಿಕ ಕ್ಷೇತ್ರವಾಗಿದೆ. ರಾಜ್ಯದಲ್ಲಿ ಇಂದು ಹತ್ತು ಕಚೇರಿ ಉದ್ಘಾಟನೆಯಾಗಿವೆ. ಮೂರಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ. ಯಡಿಯೂರಪ್ಪ ಅವರಂಥ ನಾಯಕರು ಶ್ರಮಪಟ್ಟು ಪಕ್ಷ ಕಟ್ಟಿದ ಫಲ ಇಂದು ನಾವು ಸ್ವಂತ ಕಟ್ಟಡ ಹೊಂದುವಂತಾಗಿದೆ. ಕಾರ್ಯಕರ್ತರು ಕಚೇರಿ‌ ಸದುಪಯೋಗ ಪಡೆಯಬೇಕು ಎಂದರು.

ರಾಷ್ಟ್ರೀಯತೆ, ದೇಶಕ್ಕಾಗಿ ಇರುವ ಏಕೈಕ ಪಕ್ಷ ಬಿಜೆಪಿ. ಕಾಶ್ಮೀರಕ್ಕೆ 370 ರದ್ಧತಿ ಮಾಡಿದ್ದು ನಾವು. ಒಂದೇ ರಾಷ್ಟ್ರದಲ್ಲಿ ಎರಡು ಧ್ವಜ ಹಾರಾಡುವುದು ಸರಿಯಲ್ಲ. ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ನಮಗೆ ಪಕ್ಷ ಕುಟುಂಬ ಇದ್ದಂತೆ. ಕಾಂಗ್ರೆಸ್ ಗೆ ಕುಟುಂಬವೇ ಪಕ್ಷವಾಗಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿಶ್ವದಲ್ಲಿ ಇಂದು ಜಿ 20 ಸಭೆ ಆಯೋಜನೆ ಅವಕಾಶ ಭಾರತಕ್ಕೆ ದೊರೆತಿದೆ. ಅದು ಮೋದಿ ಆಡಳಿತಕ್ಕೆ ಸಾಕ್ಷಿ. ಅತಿಥಿ ದೇವೋ ಭವ ಎಂಬುದು ನಮ್ಮ ಸಂಸ್ಕೃತಿ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಜಿ ಶೃಂಗ ಸಭೆ ಆಯೋಜಿಸಲಾಗಿದೆ. ಇಂದಿಗೂ ಯೂರೋಪ್ ಕೋವಿಡ್ ಮುಕ್ತವಾಗಿಲ್ಲ. ಆದರೆ ನಮ್ಮ ದೇಶ ಸುರಕ್ಷಿತವಾಗಿದೆ ಎಂದರು.

ಪಕ್ಷಕ್ಕಾಗಿ, ಜನರಿಗಾಗಿ ಬಿಎಸ್ ವೈ ಸ್ಥಾನ ತ್ಯಾಗ ಮಾಡಿದರು. ಸಿದ್ದರಾಮಯ್ಯ ಜಾತಿ ವ್ಯವಸ್ಥೆ ಬೆಳಸಿದರು. ಡಿಕೆಶಿ, ಸಿದ್ದು ಕಚ್ಚಾಡುತ್ತಿದ್ದಾರೆ. ಸಮೀಕ್ಷೆ ನೋಡಿದರೆ ಜನರ ಮನಸ್ಸಿನಲ್ಲಿ ಯಾರು‌ ಇದ್ದಾರೆಂದು ಗೊತ್ತಾಗುತ್ತದೆ ಎಂದರು.

Advertisement

ಇದನ್ನೂ ಓದಿ:ಕುರುಗೋಡು: ಲೋಕಾಯುಕ್ತರಿಂದ ಬಿಇಒ ವೆಂಕಟೇಶ್ ರಾಮಚಂದ್ರಪ್ಪ ತರಾಟೆಗೆ.!

ಕರ್ನಾಟಕದಿಂದ‌ ಕಾಶಿ ಯಾತ್ರೆಗೆ ಅನುಕೂಲವಾಗಲು ಒಂದೇ ಭಾರತ್ ರೈಲ್ವೆ ಯೋಜನೆ ಜಾರಿಗೊಳಿಸಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ, ಕೆಂಪೇಗೌಡ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಂಗಳೂರು ಬಂದರು ಉನ್ನತೀಕರಿಸಲಾಗಿದೆ. ರಾಜ್ಯದ ರೈಲ್ವೆ, ಹೆದ್ದಾರಿ, ಪಿಎಂ ಸಡಕ್ ಯೋಜನೆ ಸಮರ್ಪಕ ಅನುಷ್ಠಾನವಾಗಿದೆ.  ಬಿಎಸ್ ವೈ, ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಮಹಿಳೆ, ಮಕ್ಕಳ‌ ಅಭಿವೃದ್ಧಿ ಮಾಡಲಾಗಿದೆ. ಕೋಟ್ಯಂತರ ಶೌಚಗೃಹ ನಿರ್ಮಿಸಿ ಜನರು ಗೌರವದಿಂದ ಬದಕಲು ಅವಕಾಶ ಮಾಡಿಕೊಡಲಾಗಿದೆ. ಆಯುಷ್ಮಾನ್ ಭಾರತ್, ಬೇಡಿ ಬಚಾವೊ, ಬೇಟಿ ಪಡಾವೊ, ಉಜ್ವಲ್ ಯೋಜನೆ ದೇಶದ ಜನರಿಗೆ ನೀಡಿದ ಕೊಡುಗೆ. ರೈತರ ಮಕ್ಕಳಿಗೆ ಶಿಷ್ಯವೇತನ, ಮೀನುಗಾರಿಕೆ, ಎನ್ಇಪಿ ಜಾರಿ ಮಾಡಿದ ಮೊದಲ ರಾಜ್ಯ. ಗ್ರೀನ್ ಫಿಲ್ಡ್ ವಿಮಾನ ನಿಲ್ದಾಣ ಮಾಡಲಾಗಿದೆ.  ಇನ್ನೋವೇಶನ್ ಇಂಡಿಯಾದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಮ್ಮ ಕಾರ್ಯಕರ್ತರು ಈ ಎಲ್ಲ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ರೈತ, ದೀನ ದಲಿತ, ಬಡವರು, ಮಹಿಳೆ, ಮಕ್ಕಳಿಗಾಗಿ ಯೋಜನೆ ಮಾಡಿದ್ದನ್ನು ಪ್ರಚಾರ ಮಾಡಿ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದು, ಹಿಂದಿನ ಭ್ರಷ್ಟ ವ್ಯವಸ್ಥೆ ಕಿತ್ತು ಹಾಕಲಾಗಿದೆ ಎಂದರು.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದು, ಅದು ಜೋಡೋ ಯಾತ್ರೆಯಲ್ಲ ತೋಡೋ ಯಾತ್ರೆ. ಅದು ಪಶ್ಚಾತ್ತಾಪದ ಯಾತ್ರೆ. ಅವರ ಪೂರ್ವಜರು ದೇಶ ತೋಡೋ ಮಾಡಿದ್ದಾರೆ. ರಾಹುಲ್ ಜೀ ಯಾಕೆ ಕಾಶ್ಮೀರ ಪ್ರತ್ಯೇಕ ಮಾಡಿದಿರಿ, ಜೆಎನ್ ಯುನಲ್ಲಿ ತೆರಳಿದರೆ ದೇಶದ್ರೋಹಿಗಳ ಪರ ನಿಲ್ಲುತ್ತೀರಿ. ದೇಶ ತುಂಡು ತುಂಡು ಮಾಡುತ್ತೇನೆ ಅನ್ನುವ ವ್ಯಕ್ತಿಗಳ ಜತೆ ಯಾತ್ರೆ ಮಾಡುವ ಇವರು ಭಾರತ್ ಜೋಡಿಸುವುದಿಲ್ಲ. ತುಂಡು ತುಂಡು ಮಾಡುತ್ತಾರೆ. ಕೇವಲ‌ ಅಧಿಕಾರ, ಹಣ ಮಾಡಿಕೊಳ್ಳುವುದನ್ನು ಯೋಚಿಸುತ್ತದೆ. ಇದನ್ನೆಲ್ಲ‌ ಜನ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ಆಶೀರ್ವಾದ ಮಾಡಬೇಕು. ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next