Advertisement
ನನಗೆ ಸಿಕ್ಕಿರುವ ಮಾಹಿತಿಯಂತೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ, ಕೇವಲ ಮುಸ್ಲಿಮರ ಕಣ್ಣಿಗೆ ಮಣ್ಣೆರಚಲು ಮತ್ತು ಆ ಸಮುದಾಯವನ್ನು ಹಾದಿ ತಪ್ಪಿಸಲು ಮೀಸಲಾತಿಯ ವ್ಯವಸ್ಥೆ ಮಾಡಿತ್ತು. ಆದರೆ, ಅದನ್ನು ನ್ಯಾಯಾಲಯ ಸಾರಾಸಗಟವಾಗಿ ತಳ್ಳಿ ಹಾಕಿತು ಎಂದರು.
Related Articles
Advertisement
ಆಡಳಿತದ ಅಲ್ಲ, ವ್ಯವಸ್ಥೆಯ ಪರಿವರ್ತನೆ:ಬಿಜೆಪಿ ಪರಿವರ್ತನಾ ಯಾತ್ರೆಯ ಉದ್ದೇಶ ಕೇವಲ ಆಡಳಿತದ ಪರಿವರ್ತನೆ ಅಲ್ಲ, ಬದಲಾಗಿ ವ್ಯವಸ್ಥೆಯಲ್ಲಿ ಪರಿವರ್ತನೆಯಾಗಿ ಕರ್ನಾಟಕವನ್ನು ವೇಗವಾಗಿ ವಿಕಾಸಪಥದಲ್ಲಿ ಮುನ್ನೆಡಿಸಿಕೊಂಡು ಹೋಗಲು ಪರಿವರ್ತನೆ ತರಬೇಕಾಗಿದೆ. ಪರಿವರ್ತನಾ ಯಾತ್ರೆಗೆ ಸಿಗುತ್ತಿರುವ ಜನಬೆಂಬಲ ಹಾಗೂ ಕಾರ್ಯಕರ್ತರ ಉತ್ಸಾಹ ನೋಡಿದರೆ, ಮುಂದಿನ ಬಾರಿ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯದದಲ್ಲಿ ನಿರುದ್ಯೋಗ, ಮೂಲಸೌಕರ್ಯಗಳು, ಕಾನೂನು-ಸುವ್ಯವಸ್ಥೆ ಸೇರಿ ಸಾರ್ವಂಗೀಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಅವಶ್ಯಕವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ 46 ದಿನಗಳಲ್ಲಿ 112 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಕೈಗೊಂಡು, 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಇದೇ ವೇಳೆ ರಾಜನಾಥ್ ಸಿಂಗ್ ಹೇಳಿದರು. ಕೊಲೆಗಡುಕರನ್ನು ಜೈಲಿಗಟ್ಟುತ್ತೇವೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪತ್ರಕರ್ತೆ ಗೌರಿ ಲಂಕೇಶ್, ಹಿಂದೂ ಕಾರ್ಯಕರ್ತರಾದ ರುದ್ರೇಶ್, ಕುಟ್ಟಪ್ಪ, ಪರೇಶ ಮೇಸ್ತಾ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತರನ್ನು ಹತ್ಯೆ ಮಾಡಿದ ಕೊಲೆಗಡುಕರನ್ನು ಜೈಲಿಗಟ್ಟುತ್ತೇವೆ. ಈ ವಿಚಾರದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ, ಕ್ಷಮಿಸುವುದೂ ಇಲ್ಲ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅನೇಕ ಸಾಮಾಜಿಕ ಕಾರ್ಯಕರ್ಯರ ಕೊಲೆ ನಡೆದಿದೆ. ಆದರೆ. ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಆದರೆ, ಕರ್ನಾಟಕದ ಜನತೆಗೆ ನಾನು ಭರವಸೆ ನೀಡುತ್ತೇನೆ, ಬಿಜೆಪಿ ಅಧಿಕಾರಕ್ಕೆ ಬಂದರೆ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆಳಕ್ಕೆ ಹೋಗಿ ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಜೈಲಿಗೆ ಹಾಕುತ್ತೇವೆ. ಅದೇ ರೀತಿ ರುದ್ರೇಶ್, ಕುಟ್ಟಪ್ಪ, ಮೇಸ್ತ ಸೇರಿದಂತೆ ಉಳಿದ ಸಾಮಾಜಿಕ ಕಾರ್ಯಕರ್ತರ ಹತ್ಯಾಕೋರರಿಗೆ ಕಠಿಣ ಶಿಕ್ಷೆ ನೀಡುತ್ತೇವೆ ಎಂದರು. ದೇಶದ ಆರ್ಥಿಕ ವ್ಯವಸ್ಥೆಗೆ ಸಾಫ್ಟ್ವೇರ್ ರಫ್ತಿನ ದೊಡ್ಡ ಪಾತ್ರವಿದೆ. ದೇಶದ ಒಟ್ಟು ಸಾಫ್ಟ್ವೇರ್ ರಫ್ತಿನಲ್ಲಿ ಬೆಂಗಳೂರಿನ ಪಾಲು ಶೇ.98ರಷ್ಟಿದೆ. ಆದರೆ, ಇಂದು ಬೆಂಗಳೂರು ಕೊಲೆಗಡುಕರ ನಗರವಾಗಿದೆ. ಅಪರಾಧ ಪ್ರಕರಗಳನ್ನು ಹೆಚ್ಚುತ್ತಲೇ ಇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗೂಂಡಾಗಳು, ದುಷ್ಕರ್ಮಿಗಳ ವಾಸಸ್ಥಾನ ಜೈಲು ಆಗಲಿದೆ ಎಂದರು. “ಕರ್ನಾಟಕದಲ್ಲಿ ಬೆಂಕಿ ಹಚ್ಚುವ ಕೆಲಸ ಯಾರಾದರೂ ಮಾಡುತ್ತಿದ್ದರೆ, ಅದು ಕಾಂಗ್ರೆಸ್ ಪಕ್ಷ. ಈ ಮಧ್ಯೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೊಸ ಅಧ್ಯಕ್ಷರು. ಬಿಜೆಪಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದಿದ್ದಾರೆ. ದೇಶದಲ್ಲಿ ಮೂಲಭೂತವಾದ, ಕೋಮುವಾದ, ನಕ್ಸಲ್‌ವಾದ, ಉಗ್ರವಾದ, ಸಿಖVರ ಹತ್ಯೆ, ಕುಟುಂಬ ರಾಜಕಾರಣದ ಬೆಂಕಿ ಹತ್ತಿಕೊಂಡಿದ್ದು, ಬಿಜೆಪಿಯ ನೀತಿಗಳಿಂದಾಗಿ ಅಲ್ಲ. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಬೆಂಕಿ ಹಚ್ಚುತ್ತಿದ್ದರೆ, ಅದನ್ನು ಆರಿಸುವ ಕೆಲಸ ಬಿಜೆಪಿ ಮಾಡುತ್ತಿದೆ’.
– ರಾಜ್‌ನಾಥ್‌ಸಿಂಗ್, ಕೇಂದ್ರ ಗೃಹ ಸಚಿವ.