Advertisement
ಪಟ್ನಾಯಕ್ ಮಂಚೂಣಿಯಲ್ಲಿ: ವ್ಯಕ್ತಿಗತ ಜಾಹೀರಾತಿನಲ್ಲಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಜಾಹೀರಾತು ನೀಡಿದ ವ್ಯಕ್ತಿ ಎನಿಸಿದ್ದಾರೆ. ಒಡಿಶಾ ಸಿಎಂ ಪುಟದ ಮೂಲಕ ಪಟ್ನಾಯಕ್ ಪರ ಬಂದಿರುವ 32 ಜಾಹೀರಾತುಗಳಿಗಾಗಿ ಒಟ್ಟು 8.6 ಲಕ್ಷ ರೂ. ಖರ್ಚು ಮಾಡಲಾಗಿದೆ. 2ನೇ ಸ್ಥಾನದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (2 ಲಕ್ಷ ರೂ.), 3ನೇ ಸ್ಥಾನದಲ್ಲಿ ಮಾಂಡವಾದ ಬಿಜೆಪಿ ಶಾಸಕ ನರೇಂದ್ರ ಖೀಚಾರ್ (2 ಲಕ್ಷ ರೂ.) ಇದ್ದಾರೆ.
ಪಟ್ಟಿಯ ಮೊದಲ ಸ್ಥಾನದಲ್ಲಿ “ಭಾರತ್ ಕೇ ಮನ್ ಕೀ ಬಾತ್’ ಪುಟವಿದ್ದು, ಫೆ.7ರವರೆಗೆ ಈ ಪುಟದ ಮೂಲಕ 1,556 ಜಾಹೀರಾತು ಪ್ರಕಟಗೊಂಡಿವೆ. ಇದಕ್ಕಾಗಿ 1.2 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗಿದೆ. “ನೇಷನ್ ವಿತ್ ನಮೋ’ ಎಂಬ ಮತ್ತೂಂದು “ಮೋದಿ ಪರ’ ಪುಟ ಈ ಪಟ್ಟಿಯ 2ನೇ ಸ್ಥಾನದಲ್ಲಿದ್ದು, 1,074 ಪುಟಗಳ ಜಾಹೀರಾತಿಗಾಗಿ, ಒಟ್ಟು 64 ಲಕ್ಷ ರೂ. ಖರ್ಚು ಮಾಡಲಾಗಿದೆ.
Related Articles
Advertisement