ಬೆಂಗಳೂರು: ಸುರಪುರ ವಿಧಾನ ಸಭಾ ಉಪಚುನಾವಣೆಗೆ ನಿರೀಕ್ಷೆಯಂತೆ ರಾಜಾ ನರಸಿಂಹ ನಾಯಕ (ರಾಜೂಗೌಡ) ಅವರ ಹೆಸರನ್ನು ಬಿಜೆಪಿ ಘೋಷಿಸಿದೆ.
ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಅವರ ಪುತ್ರ ರಾಜಾ ವೇಣುಗೋ ಪಾಲ ನಾಯಕ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಿದ್ದು, ಕಳೆದ ಚುನಾವಣೆಯಲ್ಲಿ ವೆಂಕಟಪ್ಪ ನಾಯಕ ವಿರುದ್ಧ ಸೋತಿದ್ದ ರಾಜೂ ಗೌಡರನ್ನೇ ಬಿಜೆಪಿ ಮತ್ತೆ ಅಖಾಡಕ್ಕಿಳಿಸಿದೆ.
2023 ರ ಚುನಾವಣೆಯಲ್ಲಿ ಬಿಜೆಪಿಯ ರಾಜೂಗೌಡ ಪರವಾಗಿ 88,336 ಮತಗಳು ಚಲಾವಣೆಯಾಗಿದ್ದರೆ, ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ 1,13,559 ಮತ ಗಳಿಸಿ 25,223 ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಬೇಕಿದ್ದ ರಾಜೂಗೌಡ ಸುರಪುರ ವಿಧಾನಸಭಾ ಕ್ಷೇತ್ರದಿಂದಲೇ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿ ದಿದ್ದಾರೆ. ರಾಜಾ ವೆಂಕಟಪ್ಪ ನಾಯಕ ಸಾವಿನ ನಂತರ ವೇಣುಗೋಪಾಲ ನಾಯಕ ಅವರಿಗೆ ಕ್ಷೇತ್ರದಲ್ಲಿ ಒಂದು ರೀತಿ ಅನುಕಂಪವಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿರುವು ದರಿಂದ ಈ ಕ್ಷೇತ್ರವನ್ನು ಬಿಟ್ಟುಕೊಡದೆ ಪ್ರತಿಷ್ಠೆಯಾಗಿಯೂ ಸ್ವೀಕರಿಸ ಬಹುದು. ಅದೇ ರೀತಿ ಕಳೆದ ವಿಧಾನಸಭೆ ಚುನಾ ವಣೆಯಲ್ಲಿ ಸೋಲುಂಡ ರಾಜೂಗೌಡ ಪರವಾಗಿಯೂ ಮತದಾರರ ಅನುಕಂಪವಿದೆ.