Advertisement

BJP: ಯತ್ನಾಳ್‌ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ?

11:48 PM Dec 01, 2023 | Team Udayavani |

ಬೆಂಗಳೂರು: ರಾಜ್ಯ ನಾಯಕತ್ವದ ವಿರುದ್ಧ ಅಸ ಮಾಧಾನ ಗೊಂಡಿರುವ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಸಿಟ್ಟು ತಣ್ಣಗಾಗಿಸಲು ಮುಂದಾಗಿ ರುವ ಬಿಜೆಪಿ ವರಿಷ್ಠರು, ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ.

Advertisement

ಪಂಚಮಸಾಲಿ ಸಮುದಾಯ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಪಕ್ಷದ ವಿರುದ್ಧ ಮುನಿಸಿಕೊಳ್ಳದಂತೆ ತಡೆಯಲು ಪಕ್ಷದ ಹಿರಿಯರು ಈ ಬಗ್ಗೆ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಈ ಹಿಂದೆ ಸಿ.ಟಿ.ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಿ ಈ ಸ್ಥಾನಕ್ಕೆ ಆಂಧ್ರ ಪ್ರದೇಶದ ಸಂಜಯಬಂಡಿ ಅವರನ್ನು ನೇಮಿಸಲಾಗಿತ್ತು. ಪಂಚರಾಜ್ಯ
ಗಳ ಚುನಾವಣೆ ಫ‌ಲಿತಾಂಶದ ಬಳಿಕ ಕೇಂದ್ರ ಸಚಿವ ಸಂಪುಟ ಹಾಗೂ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಸಣ್ಣ ಮಟ್ಟದ ಬದಲಾವಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ವಿಪಕ್ಷ ನಾಯಕನ ಆಯ್ಕೆ ಸಂದರ್ಭದಲ್ಲಿ ಯತ್ನಾಳ್‌ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ತಮ್ಮನ್ನು ಪಕ್ಷ ಕಡೆಗಣಿಸಿಲ್ಲ.

ಸದ್ಯದಲ್ಲೇ ಉನ್ನತ ಸ್ಥಾನವನ್ನು ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡಿದ್ದರು. ಯಾವುದೇ ಹೊಣೆಗಾರಿಕೆ ನೀಡ ದಿದ್ದರೆ ಯತ್ನಾಳ್‌ ಪಕ್ಷದ ವಿರುದ್ಧ ಮಾತನಾಡುವುದನ್ನು ಮುಂದುವರಿ ಸುತ್ತಾರೆಂದು ವರಿಷ್ಠರಿಗೂ ಗೊತ್ತಾಗಿದೆ. ಅಶೋಕ್‌ ಹಾಗೂ ವಿಜಯೇಂದ್ರ ಜತೆಗೆ ಅವರು ಕೈಜೋಡಿಸುವ ಸಾಧ್ಯತೆ ಇಲ್ಲದ ಕಾರಣ ಅವರಿಗೆ ರಾಷ್ಟ್ರೀಯ ಹುದ್ದೆ ನೀಡಬಹುದು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next