Advertisement

Road Mishap: ಭೀಕರ ರಸ್ತೆ ಅಪಘಾತ… ಬಿಜೆಪಿ ಸಂಸದ ಸತೀಶ್ ಚಂದ್ರ ದುಬೆ ಆಸ್ಪತ್ರೆಗೆ ದಾಖಲು

12:31 PM Sep 18, 2023 | Team Udayavani |

ಪಾಟ್ನಾ: ಭಾರತೀಯ ಜನತಾ ಪಕ್ಷದ ರಾಜ್ಯಸಭಾ ಸಂಸದ ಸತೀಶ್ ಚಂದ್ರ ದುಬೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ತಡರಾತ್ರಿ ಪಾಟ್ನಾದಲ್ಲಿ ಸಂಭವಿಸಿದೆ.

Advertisement

ಭಾನುವಾರ ತಡರಾತ್ರಿ ಪಾಟ್ನಾದ ಮಹಾತ್ಮ ಗಾಂಧಿ ಸೇತು ಸೇತುವೆಯ ಮೇಲೆ ಕಾರು ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುಬೆ ಸೇರಿದಂತೆ ಇತರ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸಂಸದರನ್ನು ಪಾಟ್ನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಕಂಟೈನರ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಅವಘಡದಿಂದಾಗಿ ಗಾಂಧಿ ಸೇತು ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದುಬೆ ಮತ್ತು ಅವರ ಅಂಗರಕ್ಷಕ ಜೊತೆಗೆ ವಾಹನದ ಚಾಲಕ ಕೂಡ ಗಾಯಗೊಂಡಿದ್ದಾರೆ.

48 ವರ್ಷದ ಬಿಜೆಪಿ ಸಂಸದ, ಸತೀಶ್ ಚಂದ್ರ ದುಬೆ ಅವರು 2022 ರಲ್ಲಿ ಸಂಸತ್ತಿನ ಮೇಲ್ಮನೆಗೆ ಚುನಾಯಿತರಾಗಿದ್ದರು. ಇದಕ್ಕೂ ಮೊದಲು ಅವರು ಬಿಹಾರದ ವಾಲ್ಮೀಕಿ ನಗರ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು.

ಚಾಲಕ ಮತ್ತು ಅಂಗರಕ್ಷಕರ ಸ್ಥಿತಿ ಗಂಭೀರ:
ಬಿಜೆಪಿ ಸಂಸದರು ಭಾನುವಾರ ರಾತ್ರಿ ಬಗಾಹಾದಿಂದ ಪಾಟ್ನಾಗೆ ಹಿಂತಿರುಗುತ್ತಿದ್ದಾಗ ಗಾಂಧಿ ಸೇತು ಸೇತುವೆಯ ಮೇಲೆ ಅವರ ಕಾರು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಸಂಸದರ ಚಾಲಕ ಮತ್ತು ಅಂಗರಕ್ಷಕನ ಸ್ಥಿತಿ ಚಿಂತಾಜನಕವಾಗಿದೆ. ಸಂಸದ ಸತೀಶ್ ಚಂದ್ರ ಅವರಿಗೂ ಗಾಯಗಳಾಗಿದ್ದು, ಸದ್ಯ ಪಾಟ್ನಾದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಇದನ್ನೂ ಓದಿ: Tragedy: ಯುವ ರೈತ ಮೃತ್ಯು… ಶುಭಕಾರ್ಯ ನಡೆಯಬೇಕಿದ್ದ ಮನೆಯಲ್ಲಿ ಮಡುಗಟ್ಟಿದ ಶೋಕ

Advertisement

Udayavani is now on Telegram. Click here to join our channel and stay updated with the latest news.

Next