Advertisement

ರಾಜ್ಯದತ್ತ ಬಿಜೆಪಿ ಚಿತ್ತ; 5ರಿಂದ 2 ದಿನ ದಿಲ್ಲಿಯಲ್ಲಿ ಚುನಾವಣ ಸಿದ್ಧತೆ ಸಭೆ

11:17 PM Dec 02, 2022 | Team Udayavani |

ಹೊಸದಿಲ್ಲಿ: ಕರ್ನಾಟಕ ಸಹಿತ ಹಲವು ವಿಧಾನಸಭೆ, ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಡಿ. 5ರಿಂದ 2 ದಿನಗಳ ಕಾಲ ಹೊಸದಿಲ್ಲಿಯಲ್ಲಿ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳ ಸಭೆ ನಡೆಯಲಿದೆ.

Advertisement

ಸೋಮವಾರ ಗುಜರಾತ್‌ನಲ್ಲಿ ಕೊನೇ ಹಂತದ ಮತದಾನ ನಡೆಯಲಿದೆ. ಅದಕ್ಕೆ ಪೂರಕವಾಗಿ ಬಿಜೆಪಿಯ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. 2023ರ ಫೆಬ್ರವರಿಯಲ್ಲಿ ತ್ರಿಪುರಾ, ಮೇಘಾ ಲಯ, ನಾಗಾಲ್ಯಾಂಡ್‌, ಮೇಯಲ್ಲಿ ಕರ್ನಾಟಕ, ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜ ಸ್ಥಾನ, ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದೆ. 2024ರ ಎಪ್ರಿಲ್‌-ಮೇ ಯಲ್ಲಿ ಲೋಕಸಭೆ ಚುನಾವಣೆ ನಡೆ ಯಲಿರುವ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಕ್ಷದ ವಿವಿಧ ಸಂಘಟನೆಗಳು ಇದುವರೆಗೆ ಸಾಧಿಸಲಾಗಿರುವ ಪ್ರಗತಿ, ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಏರಿಳಿತಗಳು, ಆರ್ಥಿಕ ಕ್ಷೇತ್ರದಲ್ಲಿ ದೇಶದ ಸಾಧನೆಗಳು, ಮುಂದಿನ ಒಂದು ವರ್ಷದ ಜಿ20 ರಾಷ್ಟ್ರಗಳ ಅಧ್ಯಕ್ಷತೆಯನ್ನು ಭಾರತವೇ ವಹಿಸಿರುವುದರಿಂದ ಕೈಗೊಂಡಿ ರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವುದರ ಬಗ್ಗೆಯೂ ಪ್ರಧಾನವಾಗಿ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

ಪ್ರಧಾನ ಕಾರ್ಯದರ್ಶಿಗಳು ಭಾಗಿ: ಇದರ ಜತೆಗೆ ಬಿಜೆಪಿಯ ಸಂಘಟನ ಕಾರ್ಯ ದರ್ಶಿಗಳು ಮತ್ತು ರಾಜ್ಯ ಘಟಕಗಳ ಅಧ್ಯಕ್ಷರ ಸಭೆಯೂ ನಡೆಯಲಿದೆ. ಅದರಲ್ಲಿ ಪಕ್ಷವನ್ನು ಮತ್ತಷ್ಟು ಬಲವರ್ಧಿಸುವ ನಿಟ್ಟಿನಲ್ಲಿ ವಿಶೇಷ ವಾಗಿ ಮೇಯಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕೈಗೊ ಳ್ಳಬೇಕಾಗಿರುವ ಕಾರ್ಯತಂತ್ರವನ್ನು ಪ್ರಧಾನ ವಾಗಿ ಚರ್ಚಿಸುವ ಸಾಧ್ಯತೆಗಳು ಇವೆ.

ಲೋಕಸಭೆ ಚುನಾವಣೆ ವಿಚಾರದ ಬಗ್ಗೆಯೂ ಪರಾಮರ್ಶೆ ನಡೆಯಲಿರುವ ಹಿನ್ನೆಲೆಯಲ್ಲಿ ಗುಜರಾತ್‌ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಮಾಡಿರುವ ಸೂತ್ರಗಳ ಸಹಿತ ಪ್ರಮುಖ ಅಂಶಗಳು ಚರ್ಚೆಗೆ ಬರುವ ಸಾಧ್ಯತೆಗಳು ಇವೆ. ಪ್ರಧಾನಿ ನರೇಂದ್ರ ಮೋದಿಯವರೂ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

Advertisement

ಏನೇನು ಚರ್ಚೆ ಸಾಧ್ಯತೆ?
ವಿಧಾನಸಭೆ, ಲೋಕಸಭೆ ಚುನಾವಣೆ ಬಗ್ಗೆ ಪಕ್ಷದ ಸಿದ್ಧತೆ
ದೇಶದ ಆರ್ಥಿಕ ಸಾಧನೆ, ಜಗತ್ತಿನ ವಿತ್ತೀಯ ಕ್ಷೇತ್ರದ ಬೆಳವಣಿಗೆ
ಪಕ್ಷದ ಸಂಘಟನೆಗಳು
ಸಾಧಿಸಿದ ಪ್ರಗತಿ ಪರಿಶೀಲನೆ

ಕಾಂಗ್ರೆಸ್‌ ಪಕ್ಷದಿಂದ ಬಂದವರಿಗೆ ಬಿಜೆಪಿ ಆದ್ಯತೆ
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಗೆ ಪಂಜಾಬ್‌ನ ಮಾಜಿ ಸಿಎಂ ಕ್ಯಾ| ಅಮರಿಂದರ್‌ ಸಿಂಗ್‌, ಕಾಂಗ್ರೆಸ್‌ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿರುವ ಸುನಿಲ್‌ ಜಾಖಡ್‌ರನ್ನು ನೇಮಕ ಮಾಡಲಾಗಿದೆ. ಉತ್ತರ ಪ್ರದೇಶದ ಸಚಿವ ಸ್ವತಂತ್ರ ದೇವ್‌ ಸಿಂಗ್‌ ಅವರೂ ಕಾರ್ಯಕಾರಿಣಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿಶೇಷವಾಗಿ ಕಾಂಗ್ರೆಸ್‌ನಿಂದ ಪಕ್ಷಕ್ಕೆ ಬಂದವರಿಗೆ ಆದ್ಯತೆ ನೀಡಲಾಗಿದೆ ಎನ್ನುವುದು ಗಮನಾರ್ಹ. ಆಗಸ್ಟ್‌ನಲ್ಲಿ ಕಾಂಗ್ರೆಸ್‌ ವರಿಷ್ಠರ ವಿರುದ್ಧ ಕಟು ವಾಗ್ಧಾಳಿ ನಡೆಸಿ ರಾಜೀನಾಮೆ ನೀಡಿ, ಪಕ್ಷ ಸೇರ್ಪಡೆಯಾಗಿದ್ದ ಸುಪ್ರೀಂ ಕೋರ್ಟ್‌ನ ವಕೀಲ ಜೈವೀರ್‌ ಶೆರ್ಗಿಲ್‌ಗೆ ರಾಷ್ಟ್ರೀಯ ವಕ್ತಾರನ ಹುದ್ದೆ ನೀಡಲಾಗಿದೆ. ಉತ್ತರಾಖಂಡ ಮತ್ತು ಛತ್ತೀಸ್‌ಗಢದ ಬಿಜೆಪಿ ನಾಯಕರಾಗಿರುವ ಮದನ್‌ ಕೌಶಿಕ್‌ ಮಕ್ಕು ವಿಷ್ಣು ದೇವ್‌ ಸಾಯ್‌ರಾಣ, ಪಂಜಾಬ್‌ನ ಗುರ್ಮಿತ್‌ ಸಿಂಗ್‌ ಸೋಧಿ, ಮನೋರಂಜನ್‌ ಕಾಲಿಯಾ ಮತ್ತು ಅಮಾನ್‌ಜೋತ್‌ ಕೌರ್‌ ರಾಮೂವಾಲಿಯಾರನ್ನು ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next