Advertisement

BJD: ಬಿಜೆಪಿ ಶಾಸಕ ಸುಕಾಂತ ನಾಯಕ್, ಕಾಂಗ್ರೆಸ್ ಮಾಜಿ ಶಾಸಕ ಬಿಸ್ವಾಲ್ ಬಿಜೆಡಿ ಸೇರ್ಪಡೆ

08:57 AM Apr 01, 2024 | Team Udayavani |

ಒಡಿಶಾ: ಒಡಿಶಾದ ಬಾಲಸೋರ್ ಜಿಲ್ಲೆಯ ನೀಲಗಿರಿಯ ಬಿಜೆಪಿ ಶಾಸಕ ಸುಕಾಂತ ನಾಯಕ್ ಹಾಗೂ ಕಾಂಗ್ರೆಸ್ ನ ಮಾಜಿ ಕಾರ್ಯಾಧ್ಯಕ್ಷ ಚಿರಂಜೀಬ್ ಬಿಸ್ವಾಲ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಭಾನುವಾರ ಆಡಳಿತಾರೂಢ ಬಿಜೆಡಿಗೆ ಜೊತೆ ಕೈಜೋಡಿಸಿದ್ದಾರೆ.

Advertisement

ಲೋಕ ಸಭಾ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಗರಿಗೆದರಿದೆ ಅದರಂತೆ ರಾಜಕೀಯ ನಾಯಕರಿಗೆ ರಾಜಕೀಯ ಪಕ್ಷಗಳು ಸೆಳೆಯುವ ಪ್ರಯತ್ನವನ್ನು ಮಾಡುತ್ತಿವೆ.

ಅದರಂತೆ ಶುಕ್ರವಾರ ಬಿಜೆಪಿ ತೊರೆದಿದ್ದ ಸುಕಾಂತ ನಾಯಕ್ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಡಿ ಪ್ರಧಾನ ಕಚೇರಿಯ ಸಂಖ ಭವನದಲ್ಲಿ ಸೇರ್ಪಡೆಗೊಂಡರು. ಅವರನ್ನು ಹಿರಿಯ ಬಿಜೆಡಿ ನಾಯಕ ಪ್ರತಾಪ್ ಕೇಶರಿ ದೇವ್ ಮತ್ತು ರಾಜ್ಯಸಭಾ ಸಂಸದ ಸಸ್ಮಿತ್ ಪಾತ್ರಾ ಅವರು ಪಕ್ಷಕ್ಕೆ ಸ್ವಾಗತಿಸಿದರು. ನಾಯಕ್ ಅವರು 2014 ರಲ್ಲಿ ಬಿಜೆಡಿ ಟಿಕೆಟ್‌ನಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಆದಾಗ್ಯೂ, ಅವರು 2019 ರ ಚುನಾವಣೆಗೆ ಮುಂಚಿತವಾಗಿ ಬಿಜೆಡಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿಕೊಂಡರು ಮತ್ತು ಅದೇ ಸ್ಥಾನದಿಂದ ವಿಧಾನಸಭೆಗೆ ಮರು ಆಯ್ಕೆಯಾದರು.

ಈ ಕುರಿತು ಹೇಳಿಕೆ ನೀಡಿದ ಅವರು ಕೆಲವೊಂದು ಭಾವೋದ್ವೇಗಕ್ಕೆ ಒಳಗಾಗಿ ಅಂದು ಪಕ್ಷ ತೊರೆದು ಬಿಜೆಪಿ ಸೇರಿದ್ದ ನಾನು ಇಂದು ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆ ಕಂಡು ಬಂದಿದ್ದರಿಂದ ಮರಳಿ ಮಾತೃ ಪಕ್ಷಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಅದರಂತೆ ಕಾಂಗ್ರೆಸ್ ನ ಕೆಲ ನಾಯಕರು ಬಿಜೆಡಿ ಜೊತೆ ಕೈಜೋಡಿಸಿದ್ದು ಬಿಸ್ವಾಲ್ ಹೊರತುಪಡಿಸಿ, ಬಿಜೆಡಿಗೆ ಸೇರಿದ ಇತರ ಕಾಂಗ್ರೆಸ್ ನಾಯಕರು ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಯ್ ಕೇತನ್ ಸಮಾಲ್ ಮತ್ತು ಮಾಜಿ ಕಾರ್ಯದರ್ಶಿ ಜೋಗೇಂದ್ರ ಬಾಹುಬಲೇಂದ್ರ. ಚಿರಂಜೀಬ್ ಬಿಸ್ವಾಲ್ ಅವರು ಹಿರಿಯ ಕಾಂಗ್ರೆಸ್ ನಾಯಕ ಬಸಂತ್ ಕುಮಾರ್ ಬಿಸ್ವಾಲ್ ಅವರ ಪುತ್ರರಾಗಿದ್ದು, ಅವರು ಇತ್ತೀಚೆಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

Advertisement

ಇದನ್ನೂ ಓದಿ: Cyclonic Storm: ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಿದ ಚಂಡಮಾರುತ; ಕನಿಷ್ಠ ನಾಲ್ವರು ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next