ಅಂಬಾಲ:”ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಬದಲಾವಣೆ ಮಾಡುತ್ತೇವೆ. ಅದಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧರಾಗುತ್ತೇವೆ’ ಎಂದು ಹರ್ಯಾಣದ ಅಂಬಾಲ ಸಿಟಿ ಕ್ಷೇತ್ರದ ಶಾಸಕ ಅಸೀಮ್ ಗೋಯೆಲ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಹೇಳಲಾಗಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕರ ಜತೆಗೆ ಇತರ ಹಲವರೂ ಕೂಡ ಇದೇ ರೀತಿಯ ಪ್ರಮಾಣ ಸ್ವೀಕಾರ ಮಾಡಿದ್ದಾರೆ. “ಹಿಂದೂಸ್ತಾನವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಕ್ಕೆ ಬದ್ಧರಾಗಿದ್ದೇವೆ. ಅಗತ್ಯ ಬಿದ್ದರೆ ಅದಕ್ಕಾಗಿ ಎಂಥಾ ತ್ಯಾಗವನ್ನು ಮಾಡಲೂ ಸಿದ್ಧರಿರುತ್ತೇವೆ.
ಈ ಉದ್ದೇಶ ಸಾಧನೆಗೆ ನಮ್ಮ ಪೂರ್ವಜರು ಮತ್ತು ದೇವರು ಶಕ್ತಿಯನ್ನು ಕೊಡಲಿ’ ಎಂದು ಪ್ರಮಾಣ ಸ್ವೀಕರಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ:ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ: ಬೆಂಗಳೂರಿಗೆ ಬಂತು 700 ಕೆ.ಜಿ. ತೂಕದ ಖಡ್ಗ
ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಶಾಸಕ ಅಸೀಮ್ “ಬಿಜೆಪಿ ಶಾಸಕನಾಗಿ ನಾನು ಪ್ರಮಾಣ ಸ್ವೀಕರಿಸಲಿಲ್ಲ. ನಾನೊಬ್ಬ ಹಿಂದೂವಾಗಿ ಪ್ರಮಾಣ ಸ್ವೀಕರಿಸಿದ್ದೇನೆ. ಹಿಂದೂ ಎನ್ನಲು ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.