Advertisement

ಜು.6ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ

09:11 PM Jul 03, 2019 | Lakshmi GovindaRaj |

ತಿ.ನರಸೀಪುರ: ಜಿಲ್ಲೆಯಲ್ಲಿ 2 ಲಕ್ಷ ಜನರನ್ನು ಹೊಸದಾಗಿ ಬಿಜೆಪಿ ಸದಸ್ಯರನ್ನಾಗಿ ಮಾಡುವ ಗುರಿ ಇದೆ ಎಂದು ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ತಿಳಿಸಿದರು.

Advertisement

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 6 ರಿಂದ ಆಗಸ್ಟ್‌ 11 ರವರೆಗೆ ಅಭಿಯಾನ ನಡೆಯಲಿದೆ. ಪ್ರಚಾರದ ಮೂಲಕ ಅಭಿಯಾನ ಮಾಡಿ ಹೆಚ್ಚಿನ ಸದಸ್ಯತ್ವ ಮಾಡಬೇಕಿದೆ. ಬಿಜೆಪಿಗೆ ಹೆಚ್ಚು ಮತ ಬೀಳದ ಬೂತ್‌ಗಳಲ್ಲಿ ಹೆಚ್ಚಿನ ಸದಸ್ಯತ್ವ ಮಾಡಬೇಕಿದೆ ಎಂದರು.

ಸಂಘಟನೆ: ಪ್ರತಿ 6 ವರ್ಷಗಳಿಗೊಮ್ಮೆ ರಾಷ್ಟ್ರಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಹೊಸ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಕಾರ್ಯಕ್ರಮ ಇದಾಗಿದೆ ಎಂದರು.

ಪ್ರತಿನಿಧಿ ನೇಮಕ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ಮೈಸೂರು ಜಿಲ್ಲೆಗೆ 2 ಲಕ್ಷ ಸದಸ್ಯತ್ವದ ನೋಂದಣಿ ಗುರಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್‌ ಅವರನ್ನು ಸದಸ್ಯತ್ವ ಅಭಿಯಾನದ ಪ್ರಮುಖರನ್ನಾಗಿ ಮಾಡಿದ್ದೇವೆ. ಸಹ ಪ್ರಮುಖರಾಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಅವರನ್ನು ನೇಮಿಸಲಾಗಿದೆ. ಇದೇ ರೀತಿಯಲ್ಲಿ ಪ್ರತಿ ತಾಲೂಕಿನಲ್ಲೂ ಓರ್ವ ಪ್ರತಿನಿಧಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

Advertisement

ಬಿಜೆಪಿ ಸೇರಲು ತವಕ: ಕಳೆದ ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ಚಲಾಯಿಸಿದ್ದಾರೆ. ಅದರಲ್ಲೂ ಯುವ ಸಮುದಾಯ ಮೋದಿ ನೇತೃತ್ವದಲ್ಲಿ ಬಿಜೆಪಿ ಸೇರಲು ತವಕಿಸುತ್ತಿದ್ದಾರೆ. ಅಂತಹವರನ್ನು ಪಕ್ಷಕ್ಕೆ ಬರಮಾಡಿ ಮಾಡಿಕೊಂಡಲ್ಲಿ ಸಂಘಟನೆಗೆ ಬಹಳ ಅನುಕೂಲವಾಗಲಿದೆ. ಅಭಿಯಾನವನ್ನು ಪರಿಣಾಮಕಾರಿಯಾಗಿ ಮಾಡಲು ಸ್ಥಳೀಯ ಮಟ್ಟದ ಎಲ್ಲಾ ನಾಯಕರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಪ್ರಸಾದ್‌ ಅಭಿಮಾನ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಅವರ ಮೇಲಿನ ಅಭಿಮಾನ, ಮೋದಿಯವರ ನಾಯಕತ್ವ, ಪಕ್ಷದ ಮೇಲಿನ ವಿಶ್ವಾಸಕ್ಕೆ ಜನ ಬೆಂಬಲ ನೀಡಿ ಪ್ರಸಾದ್‌ ಅವರನ್ನು ಗೆಲ್ಲಿಸುವ ಮೂಲಕ ಚಾಮರಾಜನಗರದಲ್ಲಿ ಮೊದಲ ಬಾರಿಗೆ ಇಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಾ. ಎನ್‌. ಎಲ್‌. ಭಾರತೀಶಂಕರ್‌, ಮಾಜಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್‌, ಕ್ಷೇತ್ರಾಧ್ಯಕ್ಷ ಹಿರಿಯೂರು ಪರಶಿವಮೂರ್ತಿ, ಪುರಸಭಾ ಸದಸ್ಯ ಕೆ. ಕಿರಣ್‌, ಟೈಲರ್‌ ಸಿದ್ದರಾಜು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next