Advertisement
ವಿಜಯಪುರ ಹಾಗೂ ಸಿಂದಗಿಯಲ್ಲಿ ಶನಿವಾರ “ವಿಜಯ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಕುರ್ಚಿ ಹಿಡಿಯಲು ಏನೆಲ್ಲ ಕಸರತ್ತು ನಡೆಸಿರುವ ಕಾಂಗ್ರೆಸ್ ಸಹಿತ ವಿಪಕ್ಷಗಳಿಗೆ ಕುರ್ಚಿ ಖಾಲಿ ಇಲ್ಲ ಎಂದು ಕರ್ನಾಟಕದ ಜನತೆ ಉತ್ತರಿಸಬೇ ಕು. ಕುರ್ಚಿ ನಿರೀಕ್ಷೆಯಲ್ಲಿರುವ ನಾಯಕರಿಗೆ ವಿಶ್ರಾಂತಿ ನೀ ಡಬೇಕೆಂದು ಮನವಿ ಮಾಡಿದರು.
Related Articles
Advertisement
ಆಟೋಮೊಬೈಲ್ ಕ್ಷೇತ್ರದಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿರುವ ಭಾರತ ಕೌಶಲದಲ್ಲಿ ವಿಶ್ವದಲ್ಲಿ 13ನೇ ಸ್ಥಾನದಲ್ಲಿದ್ದು, ಮುಂಚೂಣಿ ಸ್ಥಾನಕ್ಕೆ ಬರುವ ದಿನಗಳು ದೂರವಿಲ್ಲ. ಎಲ್ಲ ಪ್ರಕಾರದ ಸಾರಿಗೆಯಲ್ಲಿ ಭಾರತ ಈಗ ಅತ್ಯಂತ ಸುಧಾರಿತ ಆಧುನಿಕತೆಯ ಸ್ಪರ್ಶ ಪಡೆದಿದೆ ಎಂದರು.
ಪಕ್ಷದ ಅಧ್ಯಕ್ಷರಾಗಿ ಪುನ ರಾಯ್ಕೆ ಬಳಿಕ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಆಗಮಿಸಿದ ನಡ್ಡಾ ಅವರನ್ನು ಪಕ್ಷದ ಪ್ರಮುಖರು ಶ್ರೀಸಿದ್ಧೇಶ್ವರ ಶ್ರೀಗಳ ಭಾವಚಿತ್ರ ನೀಡಿ ಸ ಮ್ಮಾನಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ, ಸಂಸದ ರಮೇಶ ಜಿಗಜಿಣಗಿ ಮುಂತಾದವರಿದ್ದರು.
ಮತ್ತೆ ಬಿಜೆಪಿ ಅಧಿಕಾರಕ್ಕೆ: ಅರುಣ್ ಸಿಂಗ್ಚಿಕ್ಕಬಳ್ಳಾಪುರ: ರಾಜ್ಯದ ಜನತೆಗೆ ಡಬಲ್ ಎಂಜಿನ್ ಸರಕಾರ ಮತ್ತು ಅಭಿವೃದ್ಧಿ ಕೆಲಸಗಳ ವೇಗದ ಬಗ್ಗೆ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿ ನಾಯತಕತ್ವ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನದ ವೇಳೆ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಭ್ರಷ್ಟಾಚಾರ, ಸಮಯ ವ್ಯರ್ಥ ಮಾಡಿದ್ದೇ ಸಾಧನೆ. ಕೇವಲ ಚಿಕ್ಕಬಳ್ಳಾಪುರ ಒಂದು ಜಿಲ್ಲೆಗೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಮಾತನಾಡಲಿ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಈ ಒಂದು ಜಿಲ್ಲೆಯಲ್ಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದರು.