Advertisement

ಸುಳ್ಳು ಭರವಸೆಗಳ ಮಹಾಪೂರ, ಬಿಜೆಪಿಯನ್ನು ಜನ ತಿರಸ್ಕರಿಸಬೇಕು: ಶರದ್‌ ಯಾದವ್‌

09:05 AM Apr 10, 2019 | Sathish malya |

ಮಾಧೇಪುರ, ಬಿಹಾರ : ಭಾರತೀಯ ಜನತಾ ಪಕ್ಷ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಯಾವುದೇ ದೊಡ್ಡ ಭರವಸೆಗಳನ್ನು ಈಡೇರಿಸಿಲ್ಲ. ಈಗ 2019ರ ಚುನಾವಣೆಯ ಸಂದರ್ಭದಲ್ಲಿ ಅದು ಪ್ರಕಟಿಸಿರುವ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿದೆ. ಆದುದರಿಂದ ಆಶ್ವಾಸನೆ ಕೊಟ್ಟು ವಂಚಿಸುವ ಬಿಜೆಪಿಯನ್ನು ಜನರು ತಿರಸ್ಕರಿಸಬೇಕು ಎಂದು ವಿಪಕ್ಷ ನಾಯಕ ಶರದ್‌ ಯಾದವ್‌ ಕರೆ ನೀಡಿದ್ದಾರೆ.

Advertisement

ಶರದ್‌ ಯಾದವ್‌ ಅವರು ಬಿಹಾರದ ಮಾಧೇಪುರ ಕ್ಷೇತ್ರದಿಂದ ಆರ್‌ಜೆಡಿ ಟಿಕೆಟ್‌ ಮೇಲೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ತನ್ನ ಸುದೀರ್ಘ‌ ರಾಜಕೀಯ ಬಾಳ್ವೆಯಯಲ್ಲಿ ತಾನು 2014ರಲ್ಲಾಗಲೀಗ ಇದೀಗ 2019ರ ಲೋಕಸಭಾ ಚುನಾವಣೆಯಲ್ಲಾಗಲೀ ಕಾಣುತ್ತಿರುವ ರೀತಿಯ ಸನ್ನಿವೇಶವನ್ನು ಈ ಹಿಂದೆಂದೂ ಕಂಡಿಲ್ಲ ಎಂದು ಚುನಾವಣಾ ರಾಲಿಯಲ್ಲಿ ಮಾತನಾಡುತ್ತಾ ಹೇಳಿದರು.

ಭಾರತೀಯ ಜನತಾ ಪಕ್ಷಕ್ಕೆ ದೇಶವನ್ನು ಹೇಗೆ ನಡೆಸಬೇಕು ಎಂಬುದೇ ಗೊತ್ತಿಲ್ಲ. ದೇಶಾದ್ಯಂತ ಅದು ದ್ವೇಷದ ವಾತಾವರಣವನ್ನು ಸೃಷ್ಟಿಸಿದೆ ಮತ್ತು ದೇಶದ ಆರ್ಥಿಕತೆಗೆ ತುಂಬಾ ಹಾನಿಯುಂಟುಮಾಡಿದೆ ಎಂದು ಯಾದವ್‌ ಹೇಳಿದರು.

ವಿದೇಶೀ ಬ್ಯಾಂಕುಗಳಲ್ಲಿರುವ ಭಾರತೀಯ ಸಿರಿವಂತರ ಕಾಳಧನವನ್ನು ದೇಶಕ್ಕೆ ಮರಳಿ ತರಲಾಗುವುದು, ಪ್ರತಿಯೋರ್ವ ನಾಗರಿಕನಿಗೆ 15 ಲಕ್ಷ ರೂ. ನೀಡಲಾಗುವುದು, ಎರಡು ಕೋಟಿ ಯುವಕರಿಗೆ ಉದ್ಯೋಗ ದೊರಕಿಸಲಾಗುವುದು, ಗಂಗಾ ನದಿಯನ್ನು ಶುದ್ಧೀಕರಿಸಲಾಗುವುದು ಎಂದೆಲ್ಲ 2014ರಲ್ಲಿ ನೀಡಿದ್ದ ದೊಡ್ಡ ದೊಡ್ಡ ಭರವಸೆಗಳಲ್ಲಿ ಬಿಜೆಪಿ ಯಾವುದನ್ನೂ ಈಡೇರಿಸಿಲ್ಲ. ಆದುದರಿಂದ ಅದನ್ನು ಜನರು ಈ ಬಾರಿ ತಿರಸ್ಕರಿಸಬೇಕು ಎಂದು ಯಾದವ್‌ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next