Advertisement
“ಸದ್ಯದ ಬೆಳವಣಿಗೆಗಳಿಗೆ ವಲಸೆ ಬಂದಿರುವ 17 ಶಾಸಕರೇ ಕಾರಣ’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, “ನಾವು ವಲಸೆ ಬಂದಿದ್ದರಿಂದಲೇ ನೀವು ಈಗ ಸಚಿವರಾಗಿರುವುದು’ ಎಂದಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು 3 ದಿನಗಳ ಭೇಟಿಗಾಗಿ ಬುಧವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಸಂಜೆ 5ಕ್ಕೆ ಪಕ್ಷದ ಕಚೇರಿಯಲ್ಲಿ ಸಚಿವರೊಂದಿಗೆ ಅಧಿಕೃತ ಸಭೆ ನಡೆಸಲಿದ್ದಾರೆ.
Related Articles
ಅಧಿಕೃತವಾಗಿ ಶಾಸಕಾಂಗ ಸಭೆ ನಡೆಯದ ಕಾರಣ, ಕೆಲವು ಶಾಸಕರು ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಸಾಧ್ಯತೆ ಇದೆ. ಜೂ. 17ರಂದು ಶಾಸಕರ ಅಭಿಪ್ರಾಯ ಪಡೆಯಲು ಸಿಂಗ್ ಸಮಯ ಮೀಸಲಿಡುವ ಸಾಧ್ಯತೆ ಇದೆ.
Advertisement
ಸಿಎಂ ಪರ ರೇಣುಕಾಚಾರ್ಯ ವಕಾಲತ್ತುಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಿಎಂ ಪರವಾಗಿ ಶಾಸಕರ ತಂಡ ಕಟ್ಟಿಕೊಂಡು ಸಿಂಗ್ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸಿಎಂ ಪರ ಶಾಸಕರೊಂದಿಗೆ ಅವರು ದೂರವಾಣಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬೆಲ್ಲದ – ಬೊಮ್ಮಾಯಿ ಭೇಟಿ
ಈ ನಡುವೆ ಶಾಸಕ ಅರವಿಂದ ಬೆಲ್ಲದ ದಿಲ್ಲಿ ಯಿಂದ ವಾಪಸ್ ಆಗಿದ್ದು, ಕೆಲವು ಶಾಸ ಕರ ಜತೆ ಸಮಾ ಲೋ ಚನೆ ನಡೆ ಸಿ ದ್ದಾರೆ ಎನ್ನ ಲಾ ಗಿದೆ. ಅನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಬೊಮ್ಮಾಯಿ ಅವರೇ ಬೆಲ್ಲದ ಅವರನ್ನು ಕರೆಯಿಸಿಕೊಂಡು ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಅರುಣ್ ಸಿಂಗ್ ಆಗಮಿಸಿದಾಗ ಅನಗತ್ಯ ಗೊಂದಲ ಸೃಷ್ಟಿಸದಂತೆ ಸೂಚನೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೊಮ್ಮಾಯಿ -ರೇವಣ್ಣ ಭೇಟಿ
ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರೂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾಯಕತ್ವ ಬದಲಾವಣೆಯ ಪ್ರಸ್ತಾವ ಬಂದ ಮೇಲೆ ಸಿಎಂ ಅವರು ದೇವೇಗೌಡರ ಪರ ಮೃದು ಧೋರಣೆ ತಾಳುತ್ತಿ ದ್ದಾರೆ ಎಂಬ ಮಾತುಗಳ ನಡುವೆ ಈ ಬೆಳವಣಿಗೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಾರದಲ್ಲಿ ಮುನಿರತ್ನ ಸಚಿವ?
ಶಾಸಕ ಮುನಿರತ್ನ ವಾರದಲ್ಲಿ ಸಚಿವರಾಗುತ್ತಾರೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದು, ಸಂಪುಟ ಪುನಾರಚನೆಯ ಮುನ್ಸೂಚನೆ ನೀಡಿದ್ದಾರೆ. ಈ ಹೇಳಿಕೆ ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಆಸೆ ಗರಿಗೆದರುವಂತೆ ಮಾಡಿದೆ. ಈಶ್ವರಪ್ಪ ಹೇಳಿ ದ್ದೇನು?
– ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗಲಿಲ್ಲ. ಹೀಗಾಗಿ ಅನ್ಯ ಪಕ್ಷದಿಂದ 17 ಜನ ಬರಬೇಕಾಯಿತು. ಅವರು ಬಂದ ಮೇಲೆಯೇ ಬಿಜೆಪಿಯಲ್ಲಿ ಸಮಸ್ಯೆ ಆರಂಭವಾಗಿದೆ.
– ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು 104 ಸ್ಥಾನ ಕೊಟ್ಟು ಆಡಳಿತ ನಡೆಸಿ ಎಂದರು. ಬಹುಮತ ಇದ್ದಿದ್ದರೆ ಈ 17 ಮಂದಿ ಬಿಜೆಪಿಗೆ ಸೇರ್ಪಡೆಯಾಗುವ ಪ್ರಶ್ನೆಯೇ ಬರುತ್ತಿರಲಿಲ್ಲ.
– ಕಾಂಗ್ರೆಸ್ ಕೆಟ್ಟು ಹೋಗಿದೆ ಎಂದು 17 ಮಂದಿ ಬಿಜೆಪಿ ಸೇರಿದರು. ಆ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಿವೆ. ಯೋಗೇಶ್ವರ್ ಇದು ಮೂರು ಪಕ್ಷಗಳ ಸರಕಾರ ಎಂದು ಲೇವಡಿ ಮಾಡುತ್ತಾರೆ.
– ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟ ಪಕ್ಷ. ಇದೇ ಕಾರಣಕ್ಕೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದಿದ್ದಾರೆ. ಕೋರ್ ಕಮಿಟಿ, ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸುತ್ತಾರೆ.
– ಸಹಿ ಸಂಗ್ರಹ, ದಿಲ್ಲಿಗೆ ಹೋಗುವುದರ ಸಹಿತ ಯಾವುದನ್ನೂ ಬಿಜೆಪಿ ವರಿಷ್ಠರು ಒಪ್ಪುವುದಿಲ್ಲ. ನಾಲ್ಕು ಗೋಡೆಗಳ ನಡುವೆ ಎಲ್ಲರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿ.ಸಿ. ಪಾಟೀಲ್ ಹೇಳಿದ್ದು
– ಹಿರಿಯರಾಗಿರುವ ಈಶ್ವರಪ್ಪ ಏಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಆದರೆ 17 ಮಂದಿ ಬಂದದ್ದರಿಂದಲೇ ಬಿಜೆಪಿ ಆಡಳಿತಕ್ಕೇರಿ ಸಿಎಂ ಆಗಿ ಯಡಿಯೂರಪ್ಪ ಇದ್ದಾರೆ.
– ಗ್ರಾಮೀಣಾಭಿವೃದ್ಧಿ ಸಚಿವರಾಗಿ ಈಶ್ವರಪ್ಪ ಅಧಿಕಾರ ನಡೆಸಲು ನಮ್ಮ ಕೊಡುಗೆ ಮತ್ತು ತ್ಯಾಗವೂ ಕಾರಣ.
- ಕೆಲವರು ನಾಯಕತ್ವ ವಿಚಾರದ ಬಗ್ಗೆ ಮಾತನಾಡುತ್ತಿದ್ದು, ಈ ಎಲ್ಲ ಗೊಂದಲಗಳಿಗೆ ಬುಧವಾರ ತೆರೆ ಬೀಳಲಿದೆ.
– ಬಿಜೆಪಿ ವರಿಷ್ಠರು ಅಥವಾ ಬಿಜೆಪಿ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಅರುಣ್ ಸಿಂಗ್ ಶಾಸಕರು, ಸಚಿವರ ಜತೆ ಚರ್ಚೆ ನಡೆಸು ತ್ತಾರೆ. ಅವ ರಿಗೆ ನಾನೂ ಸಹಕಾರ ನೀಡು ತ್ತೇನೆ. ನಮ್ಮಲ್ಲಿ ನಾಯಕತ್ವ ಬದ ಲಾವಣೆಯ ಬಗ್ಗೆ ಯಾವುದೇ ಗೊಂದಲ ಇಲ್ಲ.
– ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ