Advertisement

ಬಿಜೆಪಿಯವರು ಅಪರಾಧಿಗಳ ಪರ ಮಾತಾಡುತ್ತಿದ್ದಾರೆ; ಇದಕ್ಕಿಂತ ಕೆಟ್ಟದೇನಿದೆ; ದಿನೇಶ್ ಗುಂಡೂರಾವ್

04:51 PM Jul 22, 2023 | Team Udayavani |

ಮಂಗಳೂರು: ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟಿಸ್ ನೀಡಿದ್ದು, ಈ ಅಪರಾಧಿಗಳ ಪರ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಅವರ ಮೇಲೆ ಅನೇಕ ಪ್ರಕರಣಗಳಿವೆ, ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಯಾವುದೇ ಜಾತಿ ಧರ್ಮ ಬರುವುದಿಲ್ಲ. ಇಂಥವರ ಪರ ಬಿಜೆಪಿಯವರು ವಕಾಲತ್ತು ವಹಿಸುತ್ತಾರೆಂದರೆ ಅದಕ್ಕಿಂತ ಕೆಟ್ಟ ಸಂಗತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರಿಗೆ ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಹೇಳಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಯಾವುದೇ ಪ್ರಸ್ತಾಪ ಇಲ್ಲ. ಅಪರಾಧಿಗಳು, ಅನೇಕ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಗಡಿಪಾರು ನೋಟಿಸ್ ಕೊಟ್ಟಿರುವುದು. ಆ ರೀತಿ 65 ಜನರನ್ನು ಈಗಾಗಲೇ ದ.ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಪಟ್ಟಿಯನ್ನು ಇವರೂ ನೋಡಲಿ, ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದರು.

ಇದನ್ನೂ ಓದಿ:ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾಗಿ ನಿಲೇಶ್ ಶಿಂಧೆ ಅಧಿಕಾರ ಸ್ವೀಕಾರ

ಬಿಜೆಪಿ ಇದನ್ನು ಪ್ರೋತ್ಸಾಹಿಸುತ್ತದೆ ಎಂದಾದರೆ ಅಂಥವರಿಗೆ ಇವರ ಬೆಂಬಲ ಇದೆ ಎಂದಾಯ್ತು. ಅಪರಾಧಿಗಳಿಗೆ ಬಿಜೆಪಿ ಬೆಂಬಲ ಕೊಡುತ್ತಿದೆ. ಪೊಲೀಸ್ ಇಲಾಖೆಯಲ್ಲಿ ನಮ್ಮ ಯಾವುದೇ ಹಸ್ತಕ್ಷೇಪ ಇಲ್ಲ. ಡ್ರಗ್ ಮಾಫಿಯಾ, ನೈತಿಕ ಪೊಲೀಸ್ ಗಿರಿ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ನಾಯಕರು ವಾತಾವರಣ ಕೆಡಿಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next