Advertisement

ಸಾವಿನ ಮನೆಯಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ: ಸಿಎಂ ಕಿಡಿ 

10:50 AM Dec 21, 2017 | Team Udayavani |

ವಿಜಯಪುರ: ಶಾಲೆಗೆ ಹೊರಟಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯನ್ನು ಹಾಡಹಗಲೇ ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದು ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿಯವರು  ಸುಳ್ಳು ಹೇಳಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಕಿಡಿ ಕಾರಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಹತ್ಯೆಗೀಡಾಗಿರುವ ಬಾಲಕಿಯ ಪೋಷಕರ ಮನವಿಯಂತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿದ್ದೇವೆ. ಮರಣೋತ್ತರ ಪರೀಕ್ಷಾ ವರದಿ  ಸಿಕ್ಕ ಬಳಿಕ ಹತ್ಯೆಗೆ ಕಾರಣವೇನೆಂದು ತಿಳಿಯುತ್ತದೆ. ಬಿಜೆಪಿಯವರು ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿದ್ದಾರೆ’ಎಂದು ಕಿಡಿ ಕಾರಿದರು. 

ಬಾಲಕಿಯ ಕುಟುಂಬ ಸದಸ್ಯರನ್ನು ಬುಧವಾರ ಭೇಟಿ ಮಾಡಿ ಸಾಂತ್ವನ ಹೇಳಿದಮುಖ್ಯಮಂತ್ರಿ ಸಿದ್ದರಾಮಯ್ಯ, 4.20 ಲಕ್ಷ ರೂ. ಪರಿಹಾರ ಚೆಕ್‌ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next