Advertisement

ಚುನಾವಣೆಯಲ್ಲಿ ಸೋತಾಗ ನನ್ನ ಬೆನ್ನಿಗೆ ನಿಂತಿದ್ದು ಮಾತ್ರ ನನ್ನ ಬಣಜಿಗ ಸಮಾಜ: ಶೆಟ್ಟರ್

03:28 PM Jul 26, 2023 | Team Udayavani |

ಮಸ್ಕಿ: ಸಂಘ ಪರಿವಾರ‌ ಕಾಲದಿಂದಲೂ ನಾನು ಬಿಜೆಪಿ ಪಕ್ಷಕ್ಕೆ ದುಡಿದಿದ್ದೆ. ಆದರೆ ಅದೇ ಪಕ್ಷದಿಂದ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಂತು. ಅದಕ್ಕಾಗಿ ಪಕ್ಷದಿಂದ ಹೊರಬಂದೆ. ಅದರ ಪರಿಣಾಮ ಚುನಾವಣೆಯಲ್ಲಿ ‌ಸೋಲಿಸಲಾಯಿತು. ಆದರೆ ಸೋತಾಗ ನನ್ನ ಬೆನ್ನಿಗೆ ನಿಂತಿದ್ದು ಮಾತ್ರ ನನ್ನ ಬಣಜಿಗ ಸಮಾಜ. ಆ‌ಸಮಾಜಕ್ಕೆ ನಾನು ಚಿರರುಣಿಯಾಗಿರುವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ‌ಹೇಳಿದರು.

Advertisement

ಮಸ್ಕಿ ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು‌‌ ವರ್ಷದಿಂದ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಕಟ್ಟಿದ್ದೆ. ಆದರೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೊನೆ ಹೊತ್ತಿನ ವೇಳೆಗೆ ನನಗೆ ಟಿಕೆಟ್ ಕೊಡದೇ ಬಿಜೆಪಿ ಅಪಮಾನ ಮಾಡಿತು. ಸ್ವಾಭಿಮಾನಕ್ಕೆ ಧಕ್ಕೆ ಬರುತ್ತಿದ್ದಂತೆಯೇ ಆ ಪಕ್ಷಕ್ಕೆ ನಾನು ರಾಜೀನಾಮೆ ನೀಡಿ, ಕಾಂಗ್ರೆಸ್ ‌ಸೇರಿದೆ. ಆದರೆ ಎಲ್ಲ ಶಕ್ತಿಗಳು ಕೂಡಿ ನನ್ನನ್ನು ರಾಜಕೀಯವಾಗಿ‌ ಮುಗಿಸಲು ನೋಡಿದವು. ಅದಕ್ಕೆ ನನಗೆ ಸೋಲಾಯಿತು.

ಸೋಲಿನ ಸಂದರ್ಭದಲ್ಲಿ ನನಗೆ ಬೆನ್ನೆಲುಬಾಗಿ ನನ್ನ ಸಮಾಜ ನಿಂತಿತ್ತು. ಆ ಸಮಾಜದ ಋಣ ನನ್ನ ಮೇಲೆ ಸಾಕಷ್ಟಿದೆ. ‌ರಾಜ್ಯಾದ್ಯಂತ ಸಮಾಜದ ಸಂಘಟನೆ ಮಾಡುವ ಮೂಲಕ‌ ಋಣ ತೀರಿಸಿವೆ. ಈಗ ಕಾಂಗ್ರೆಸ್ ಕೂಡ ನನ್ನನ್ನು ಗುರುತಿಸಿ ರಾಜಕೀಯ ಸ್ಥಾನ ಮಾನ ನೀಡಿದೆ. ಆ‌ ಪಕ್ಷಕ್ಕೂ ನನ್ನ ಸಮಾಜದವರ ಬೆಂಬಲವಾಗು ನಿಲ್ಲಬೇಕು ಎಂದು ಶೆಟ್ಟರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next