Advertisement

BJP ಲಿಂಗಾಯತರನ್ನು ಕಡೆಗಣಿಸಿಲ್ಲ: Minister Bhagwant Khuba

07:54 PM Apr 18, 2023 | Team Udayavani |

ಬೀದರ: ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ, ಅಗೌರವಿಸುತ್ತಿದೆ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸುವ ರಣದೀಪ್‌ ಸುಜೇìವಾಲಾ ಹೇಳಿಕೆ ಖಂಡನೀಯ.

Advertisement

ಸಿದ್ದರಾಮಯ್ಯ ಆಡಳಿತದಲ್ಲಿ ನಡೆದ ರೈತರ ಆತ್ಮಹತ್ಯೆಗಳು ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆಗಳ ಬಗ್ಗೆ ಮೊದಲು ಮಾತನಾಡಲಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿರುಗೇಟು ನೀಡಿದ್ದಾರೆ.

ಲಿಂಗಾಯತ ಹಾಗೂ ಸಮಾಜದ ಎಲ್ಲಾ ಜಾತಿ ಜನಾಂಗದವರನ್ನು ಗೌರವಿಸಿ, ಅವರಿಗೆ ಸಾಮಾಜಿಕ ನ್ಯಾಯ ನೀಡುವ ಕೆಲಸ ನಮ್ಮ ಡಬಲ್‌ ಎಂಜಿನ್‌ ಸರ್ಕಾರದಿಂದಾಗಿದೆ. ಕಾಂಗ್ರೆಸ್‌ ಕೇವಲ ಎಸ್‌ಡಿಪಿಐ ಹಾಗೂ ಪಿಎಫ್‌ಐನಂತಹ ಆತಂಕವಾದಿ ಸಂಘಟನೆಗಳನ್ನು ಸಾಕಿ ಸಲುಹಿದೆ. ಯಡಿಯೂರಪ್ಪ ಬಿಜೆಪಿಯ ಪಕ್ಷಾತೀತ ನಾಯಕ. ಅವರು ಎಂದೆಂದೂ ನಮ್ಮ ನಾಯಕರೇ ಆಗಿದ್ದಾರೆ. ಹಾಗೆ ನಮ್ಮ ಪಕ್ಷದಲ್ಲಿ ನಮ್ಮದೇ ಸಿದ್ಧಾಂತವಿದೆ, ಕಾರ್ಯವೈಖರಿಯಿದೆ. ಯಾವುದೇ ಹುದ್ದೆ ಪಡೆಯದೆ, ಜವಾಬ್ದಾರಿ ತೆಗೆದುಕೊಳ್ಳದೆ ಇದ್ದವರಿಗೂ ನೇರವಾಗಿ ಪ್ರಧಾನಿ ಅಭ್ಯರ್ಥಿ ಮಾಡಲು ನಮ್ಮ ಪಕ್ಷ ಕಾಂಗ್ರೆಸ್‌ ಅಲ್ಲ. ಮೀಸಲಾತಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕತೆಯಿಲ್ಲ. ಪರಿಶಿಷ್ಟರ ದಶಕಗಳ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಿದೆ. ಹಾಗೆ ಲಿಂಗಾಯತರು ಮತ್ತು ಒಕ್ಕಲಿಗರಿಗೂ ನ್ಯಾಯ ನೀಡಿದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next