Advertisement

ದಲಿತರ ಹಿತ ಕಾಪಾಡುವಲ್ಲಿ ಬಿಜೆಪಿ ವಿಫ‌ಲ

12:38 PM Dec 20, 2017 | |

ಹುಣಸೂರು: ಹಿಂದೂಗಳ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಬಹುತೇಕ ಹಿಂದೂಗಳೇ ಆಗಿರುವ ದಲಿತರು, ರೈತರು, ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫ‌ಲವಾಗಿದ್ದರೆ, ಈ ಹಿಂದೆ ದೇಶವನ್ನಾಳಿದ ಕಾಂಗ್ರೆಸ್‌ ಕೂಡಾ ಬಡವರ ಪರ ಯೋಜನೆ ಜಾರಿಗೊಳಿಸದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಟಿ.ರಾಮಕೃಷ್ಣ ಆರೋಪಿಸಿದರು.

Advertisement

ನಗರದ ಮುನೇಶ್ವರಕಾವಲ್‌ ಮೈದಾನದಲ್ಲಿ ಸಿಪಿಎಂ ಜಿಲ್ಲಾಮಟ್ಟದ ಸಮಾವೇಶದ ಸಮಾರೋಪದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾಗಿದ್ದು, ಕೋಮುವಾದಿ ಅಂಜೆಂಡಾ ಹೊರತು ಪಡಿಸಿ ಬೇರ್ಯಾವ ಅಭಿವೃದ್ಧಿ ಕಾಣುತ್ತಿಲ್ಲ,

ಭರವಸೆ ನೀಡಿದಂತೆ ರೈತರ ಸಮಸ್ಯೆ ಬಗೆಹರಿಯಲಿಲ್ಲ, ವಿದೇಶದ ಕಪ್ಪುಹಣ ವಾಪಸ್‌ ತರುವ ಬದಲಿಗೆ ನೋಟು ರದ್ದತಿ ಜಾರಿಗೆ ತಂದು ದೇಶದೊಳಗಿನ ಕಪ್ಪುಹಣ ಬ್ಯಾಂಕ್‌ ಸೇರಿಸಿ ಭದ್ರತೆ ಒದಗಿಸಿದೆ,  ಸ್ವಾಮಿನಾಥನ್‌ ಆಯೋಗ ಜಾರಿಗೆ ತರಲಿಲ್ಲ, ಇವರ ಆಡಳಿತವನ್ನು ಪ್ರಶ್ನಿಸಿದರೆ ಕಮ್ಯುನಿಷ್ಟರ ಮೇಲೆ ದಾಳಿ ನಡೆಸುತ್ತಾರೆಂದು ದೂರಿದರು.

ಸಿಪಿಎಂ ರಾಜ್ಯ ಕಾರ್ಯಕಾರಿ ಮಂಡಳಿ ಸಮಿತಿ ಸದಸ್ಯ ವಿ.ಜೆ.ಕೆ.ನಾಯರ್‌, ದೇಶದಲ್ಲಿ ಇಂದಿಗೂ ಕನಿಷ್ಠ ಕಾರ್ಮಿಕ ವೇತನ ಜಾರಿಗೊಳಿಸಿಲ್ಲ, ಅಸ್ಪೃಶ್ಯತೆ ಆಚರಣೆ ನಿಂತಿಲ್ಲ, ದೇವಾಲಯಗಳಿಗೆ ದಲಿತರಿಗೆ ಪ್ರವೇಶವಿಲ್ಲ. ಈ ಬಗ್ಗೆ ಗಮನಹರಿಸದೆ ಕೇವಲ ಹಿಂದೂ ಹೆಸರಿನಲ್ಲಿ ಸಂಘಟನೆಗೆ ಹೊರಟಿರುವುದು ಎಲ್ಲಾ ಶೋಷಿತರಿಗೆ ಮಾಡಿರುವ ದೊಡ್ಡ ಅವಮಾನ ಎಂದರು. 

ಅಧ್ಯಕ್ಷತೆ ವಹಿಸಿದ್ದ  ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು, ಒಂದೆಡೆ ದೇವರ ಹೆಸರಿನಲ್ಲಿ ಬಿಜೆಪಿ ಎಲ್ಲಡೆ ಕೋಮುವಾದ ಹುಟ್ಟು ಹಾಕುತ್ತಿದ್ದರೆ, ಮತ್ತೂಂದೆಡೆ ನಮ್ಮನ್ನಾಳುತ್ತಿರುವ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಾರ್ಮಿಕರು-ಅಮಾಯಕರನ್ನು ಜೈಲುಪಾಲು ಮಾಡುತ್ತಿದೆ ಎಂದು ಹೇಳಿದರು. ರಾಜ್ಯ ಸಮಿತಿ ಸದಸ್ಯೆ ಸುನಂದಾ ಮಾತನಾಡಿದರು. ಪಕ್ಷದ ಮುಖಂಡರಾದ ಜಗನ್ನಾಥ್‌, ವಿ.ಬಸವರಾಜ್‌ಕಲ್ಕುಣಿಕೆ, ಜಗದೀಶ್‌ಸೂರ್ಯ, ಶಶಿಕುಮಾರ್‌, ಬೆಳೂ¤ರುವೆಂಕಟೇಶ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next