Advertisement
ಗುರುವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಶರಣಾಗಲು ಯಾರು ಹೇಳಿದರು. ಬಿಜೆಪಿ ಪಕ್ಷಕ್ಕೆ ಇಂಥ ಕಳ್ಳರ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಲೂಟಿ ಮಾಡಿರುವ ವಿಜಯಪುರ ಜಿಲ್ಲೆಯಲ್ಲೂ ಇಂಥ ಇಬ್ಬರು ಬಿಜೆಪಿ ಸೇರಲು ನಾಟಕ ನಡೆಸಿದ್ದಾರೆ ಎಂದರು.ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಇಡಿ, ಸಿಬಿಐ ಸೇರಿದಂತೆ ಸ್ವತಂತ್ರ ಅಧಿಕಾರ ಇರುವ ಸ್ವಾಯತ್ತ ಸಂಸ್ಥೆಗಳು ಕೇಂದ್ರ ಸರ್ಕಾರದ ಅಧಿನದಲ್ಲಿ ಇರುವುದಿಲ್ಲ. ಹೀಗಾಗಿ ಇಡಿ ದೋಷಾರೋಪ ಸಲ್ಲಿಸಿರುವ ಇಡಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಇಲ್ಲ, ಸ್ವತಂತ್ರ ನಿರ್ವಹಣೆ ಮಾಡುತ್ತವೆ ಎಂದರು.
Related Articles
Advertisement
ಬಬಲೇಶ್ವರ ಕ್ಷೇತ್ರದಲ್ಲಿ ಒಂದು ಏಳೆಂಟು ಗಿರಾಕಿ ಕಾಯುತ್ತಿವೆ. ಅಣ್ಣ ಕಾಂಗ್ರೆಸ್‍ನಲ್ಲಿ ಸೋನಿಯಾ ಗಾಂಧೀಗಾಗಿ ಜೀವ ಕೊಡುತ್ತೇನೆ ಎನ್ನುತ್ತಾನೆ. ತಮ್ಮ ನರೇಂದ್ರ ಮೋದಿ ಅವರಿಗೆ ಪ್ರಾಣ ಕೊಡುತ್ತೇನೆ ಎನ್ನುತ್ತಾನೆ. ಇಂಥವರನ್ನು ಪಕ್ಷ ಅವಕಾಶ ನೀಡಬಾರದು. ಪಕ್ಷಕ್ಕೆ ದುಡಿದವರಿಗೆ ಅವಕಾಶ ನೀಡಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹಾಗೂ ಅವರ ಸಹೋದರ ಬಿಜೆಪಿ ನಾಯಕ ವಿಜುಗೌಡ ಪಾಟೀಲ ಅವರನ್ನು ಕುಟುಕಿದರು.
ಎಲ್ಲ ವಿಷಯವನ್ನು ತೆಗೆದು ಹಾಕಬೇಕು
ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಂತ ಕನಕದಾಸರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಯತ್ನಾಳ್ ಅವರು, ನಮಗೆಲ್ಲ ಶಾಲೆಯ ಪಠ್ಯದಲ್ಲಿ ಅಕ್ಬರ್, ಔರಂಗಜೇಬ್, ಟಿಪ್ಪು ಸುಲ್ತಾನ್ ಎಂದಷ್ಟೇ ಕಲಿಸಲಾಯಿತು. ಆದರೆ ನಮಗೆ ನಮ್ಮ ಸತ್ಪುರುಷರ ಹೆಸರುಗಳೇ ಗೊತ್ತಿರಲಿಲ್ಲ. ಪಠ್ಯದಲ್ಲಿ ನಾವು ಕಲಿತವರೆಲ್ಲ ಕಳ್ಳರು, ಲಫಂಗರು, ಲಂಪಟ, ದರೋಡೆಕೋರರು ಎಂದು ಈಗ ನಮಗೆ ಗೊತ್ತಾಗಿದೆ. ಪಠ್ಯದಲ್ಲಿರುವ ಇಂಥವರ ಕುರಿತ ಎಲ್ಲ ವಿಷಯವನ್ನು ತೆಗೆದು ಹಾಕಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಗ್ರಹಿಸಿದರು.
ನಾನು ಸಂಸದನಾಗಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ವೆಂಕಯ್ಯ ನಾಯ್ಡು ಅವರ ಮನೆ ಬಳಿ ರಸ್ತೆಯೊಂದಕ್ಕೆ ಔರಂಗಜೇಬ್ ರೋಡ್ ಎಂಬ ಹೆಸರಿತ್ತು. ಲಕ್ಷಾಂತರ ಹಿಂದೂಗಳ ಕಗ್ಗೊಲೆ ಮಾಡಿದ ಇವರ ಹೆಸರು ಯಾಕೆ ರಸ್ತೆಗೆ ಇರಿಸಿದ್ದಾರೆ ಎಂದು ಪ್ರಶ್ನಿಸಿದ್ದೆ ಎಂದರು.
ಸದರಿ ರಸ್ತೆಗೆ ಔರಂಣಗಜೇಬನ ಹೆಸರು ತೆಗೆದು ದೇಶಕಂಡ ಅಪರೂಪರ ರಾಷ್ಟ್ರಪತಿಯಾಗಿದ್ದ ಡಾಎಪಿಜೆ ಅಬ್ದುಲ್ ಕಲಾಂ ಹೆಸರು ನಾಮಕರಣ ಮಾಡಿದ್ದಾರೆ. ನಮ್ಮ ನಗರಕ್ಕೆ ಇದ್ದ ಬಿಜಾಪುರ ಎಂಬ ಹೆಸರನ್ನು ಬದಲಿಸಿ ವಿಜಯಪುರ ಎಂದು ಮರುನಾಮಕರಣ ಮಾಡಲಾಗಿದೆ. ನಾನು ನಗರ ಶಾಸಕನಾದ ಬಳಿಕ ಇಲ್ಲಿನ ಅನೇಕ ರಸ್ತೆಗಳಿಗೆ ದೇಶಭಕ್ತ, ರಾಷ್ಟ್ರ ನಾಯಕರ ಹೆಸರು ನಾಮಕರಣ ಮಾಡಲಾಗಿದೆ ಎಂದರು.
ಇದನ್ನೂ ಓದಿ : ತಗ್ಗಿಗೆ ಉರುಳಿದ ಕಾರು: ಬಿಜೆಪಿ ಶಾಸಕರ ಆಪ್ತ ಸಹಾಯಕ ಪಾರು
ಪಠ್ಯ ಕೇಸರೀಕರಣ ಆಧಾರ ರಹಿತ ಆರೋಪ : ಸಚಿವ ಭೈರತಿ
ಶಿಕ್ಷಣದಲ್ಲಿ ಕೇಸರಿಕರಣ ಮತ್ತೊಂದು ಮಗದೊಂದು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಸಮಾಜಕ್ಕೆ ಕೊಡುಗೆ ನೀಡಿದವರ ಪಠ್ಯ ಅಳವಡಿಸಲಾಗಿದೆ. ಯಾವ ಪಠ್ಯ ಅಳವಡಿಕೆ ಕುರಿತು ತಜ್ಞರ ಅಭಿಪ್ರಾಯ ಅನುಸರಿಸಲಾಗಿದೆ. ಇಂಥದ್ದೆ ಪಠ್ಯ ಕೈಬಿಟ್ಟಿದ್ದಾರೆ ಅನ್ನೋದಕ್ಕೆ ಪುರಾವೆ ಇಲ್ಲದೇ ಕೆಲವರು ಆರೋಪಿಸುತ್ತಿದ್ದು, ಇಂಥ ಬೆಳವಣಿಗೆ ಸರಿಯಲ್ಲ ಎಂದು ಸಚಿವ ಬೈರತಿ ಬಸವರಾಜ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಕೇಸರಿಕರಣ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ನಾಯಕರ ಆರೋಪ ನಿರಾಧಾರ ಎಂದರು.
ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿಲ್ಲ, ನಿರಾಸೆಯಾಗುವ ಅಗತ್ಯವೂ ಇಲ್ಲ. ಯುವ ನಾಯಕರಾಗಿರುವ ವಿಜಯೇಂದ್ರ ಅವರು ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರ ಪಕ್ಷ ಸಂಘಟನೆಯನ್ನು ಪರಿಗಣಿಸಿ ಪಕ್ಷದ ವರಿಷ್ಠರು ಉತ್ತಮ ಸ್ಥಾನ ನೀಡುವ ವಿಶ್ವಾಸವಿದೆ ಎಂದರು.