Advertisement
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಿ.ಟಿ. ರವಿ ಅವರು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದರು. ತಾವು ಕೇಳುವ ಪ್ರಶ್ನೆಗೆ ಉತ್ತರಿಸಲು ಸಂಬಂಧ ಪಟ್ಟ ಸಚಿವರು ಸದನದಲ್ಲಿ ಇಲ್ಲ. ಅವರು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಸಿಗ್ತಾರೆ ಅಲ್ಲಿಯೇ ಕೇಳುತ್ತೇನೆ ಬಿಡಿ ಎಂದರು.
Related Articles
Advertisement
ಸಚಿವರು ಡೈರಿ ಪ್ರಕರಣಕ್ಕೆ ಹೆದರಿ ಹೋಗಿದ್ದಾರಾ? ಮಗನಿಗೆ ನಂಜನಗೂಡಿನಲ್ಲಿ ಟಿಕೆಟ್ ಸಿಗಲಿಲ್ಲ ಅಂತ ಬೇಸರ ಮಾಡಿಕೊಂಡು ಹೋಗಿದಾರಾ ಅಥವಾ ಆರೋಗ್ಯ ಸಮಸ್ಯೆ ಇದೆಯಾ ಎಂದು ಬಿಜೆಪಿಯ ಸುನಿಲ್ ಕುಮಾರ್ ಪ್ರಶ್ನಿಸಿದರು. ಸಚಿವರಿಗೆ ಸೋಮವಾರ ಮತ್ತು ಮಂಗಳವಾರ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸುವುದಾಗಿ ಸ್ಪೀಕರ್ ಕೋಳಿವಾಡ್ ಹೇಳಿದ ನಂತರ ಸದನ ತಣ್ಣಗಾಯಿತು.
ಸರ್ಕಾರ ಸತ್ತಿದೆ : ಶೆಟ್ಟರ್*ಪ್ರಶ್ನೋತ್ತರ ಕಲಾಪ ಆರಂಭವಾದಾಗ ವಿಧಾನಸಭೆಯಲ್ಲಿ ಹಾಜರಿರಬೇಕಾದಷ್ಟು ಸಚಿವರು ಹಾಜರಿಲ್ಲದ ಕಾರಣ ಸ್ಪೀಕರ್ ಕೆ.ಬಿ. ಕೋಳಿವಾಡ ಹಾಜರಿರಬೇಕಾದ ಸಚಿವರ ಪಟ್ಟಿ ಓದಿದರು. ಪ್ರಶ್ನೆಗಳಿಗೆ ಉತ್ತರಿಸಬೇಕಾದ ಆರು ಜನ ಸಚಿವರಲ್ಲಿ ಕೇವಲ ಇಬ್ಬರು ಮಾತ್ರ ಹಾಜರಿದ್ದರು. ಅಲ್ಲದೇ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರಲ್ಲಿ ಜಯಚಂದ್ರ ಮಾತ್ರ ಹಾಜರಿದ್ದು, ಎಂ.ಬಿ. ಪಾಟೀಲ್, ರಮೇಶ್ ಕುಮಾರ್, ಎಚ್. ಆಂಜನೇಯ, ರಮಾನಾಥ ರೈ, ರುದ್ರಪ್ಪ ಲಮಾಣಿ, ಡಿ.ಕೆ ಶಿವಕುಮಾರ್ ಹಾಜರಿರಲಿಲ್ಲ. ಹೀಗಾಗಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸರ್ಕಾರಕ್ಕೆ ಸದನ ನಡೆಸುವ ಮನಸಿಲ್ಲ. ನಮ್ಮ ಪಕ್ಷದಿಂದಲೂ ಚುನಾವಣೆಗೆ ಹೋಗಬೇಕೆಂಬ ಸೂಚನೆ ಇದೆ. ಆದರೆ, ಅಧಿವೇಶನ ಇರುವುದರಿಂದ ಇದು ಮುಗಿಯುವವರೆಗೂ ನಮಗೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸೂಚನೆ ನೀಡಲಾಗಿದೆ. ಸದನದ ಪರಿಸ್ಥಿತಿಯನ್ನು ನೋಡಿದರೆ, ಸರ್ಕಾರ ಸತ್ತು ಹೋಗಿದೆ ಎನಿಸುತ್ತಿದೆ ಎಂದು ಹೇಳಿದರು.