Advertisement

ಮೌಲ್ವಿ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

07:30 AM Jun 24, 2018 | |

ಬೆಂಗಳೂರು : ರಂಜಾನ್‌ ಆಚರಣೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಜಯಪುರದ ಧಾರ್ಮಿಕ ಮುಖಂಡ ಮೌಲ್ವಿ ತನ್ವೀರ್‌ ಪೀರ್‌ ಹಶ್ಮಿ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳುವಂತೆ ರಾಜ್ಯ ಬಿಜೆಪಿಯ ಗೋ ರಕ್ಷಣ ಪ್ರಕೋಷ್ಠ ಆಗ್ರಹಿಸಿದೆ.

Advertisement

ಸದ್ಯದಲ್ಲೇ ಬರಲಿರುವ ಬಕ್ರಿದ್‌ಗೆ ಗೋವುಗಳ ಜತೆಗೆ ಇನ್ನೊಂದು ಬಲಿಯಾಗಬೇಕಿದೆ ಎಂದು ಹೇಳಿಕೆ ನೀಡಿದ್ದ ಮೌಲ್ವಿ ವಿರುದ್ಧ ವಿಜಯಪುರ ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾಡಳಿತ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಗೋ ಹತ್ಯೆಯ ಬಗ್ಗೆ ಮಾತನಾಡಿರುವುದು ರಾಜ್ಯದ ಗೋ ರಕ್ಷಣೆ ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೇ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್‌ ಅವರನ್ನು  ಕೇಂದ್ರವಾಗಿಟ್ಟುಕೊಂಡು ಮೌಲ್ವಿಯವರು ಈ ಹೇಳಿಕೆ ನೀಡಿದ್ದಾರೆ ಎಂದು ಪ್ರಕೋಷ್ಠದ ಸಂಯೋಜಕ ಸಿದ್ಧಾರ್ಥ ಗೋಯಾಂಕ್‌ ಆರೋಪಿಸಿದ್ದಾರೆ.

ಹೀಗಾಗಿ, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮೌಲ್ವಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next