Advertisement

ಪರಮ ಭ್ರಷ್ಟಾಚಾರಿ ಡಿಕೆಶಿಯ ವ್ಯವಸ್ಥಿತ ಷಡ್ಯಂತ್ರ : ಅಶ್ವತ್ಥ್ ನಾರಾಯಣ್ ಸಮರ್ಥಿಸಿ ಬಿಜೆಪಿ

06:26 PM May 02, 2022 | Team Udayavani |

ಬೆಂಗಳೂರು: ‘ಮಾಧ್ಯಮಗಳು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಪಾತ್ರ ಇದೆ ಎಂದು ಆರೋಪಿಸಿರುವುದು ಹೊಸ ಸಮರಕ್ಕೆ ಕಾರಣವಾಗಿದ್ದು, ಬಿಜೆಪಿ ಟ್ವೀಟ್ ಗಳ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದೆ.

Advertisement

‘ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಧ್ಯಕ್ಷ ಡಿಕೆಶಿ ಅವರು ವ್ಯವಸ್ಥಿತ ಷಡ್ಯಂತ್ರ ಪ್ರಾರಂಭಿಸಿದ್ದಾರೆ. ಕಳೆದ ಒಂದು ವರ್ಷದಿಂದ ಇದೇ ಪಿತೂರಿಯಲ್ಲಿ ಡಿ.ಕೆ.ಶಿವಕುಮಾರ್ ನಿರತರಾಗಿದ್ದರು.ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ಗಾಳಿಯಲ್ಲಿ ಗುಂಡು ಹಾರಿಸಿರುವುದು ಇದರ ಮುಂದುವರಿದ ಭಾಗವಷ್ಟೇ’ ಎಂದು ಟ್ವೀಟ್ ಮಾಡಿದೆ.

‘ಡಿಕೆಶಿ ಪರಮ ಭ್ರಷ್ಟಾಚಾರಿ, ನಾವೆಲ್ಲ ಸೇರಿ ಅಧ್ಯಕ್ಷ ಸ್ಥಾನ ಕೊಡಿಸಿದೆವು. ಆದರೆ ತಕ್ಕಡಿ ಏರುತ್ತಿಲ್ಲ ಎಂದು ಉಗ್ರಪ್ಪ ಪಿಸುಗುಟ್ಟಿದ್ದರು. ಅಂದು ಉಗ್ರಪ್ಪರನ್ನು ಪ್ರಶ್ನಿಸುವ ಧೈರ್ಯವನ್ನೂ ಮಾಡದ ಡಿಕೆಶಿ, ಇಂದು ಅದೇ ಹರಕು ಬಾಯಿ ದಾಸನ ಮಾತುಗಳನ್ನೇ ಗಂಭೀರವಾಗಿ ತೆಗೆದುಕೊಂಡಿದ್ದು ವಿಪರ್ಯಾಸವಲ್ಲದೆ ಮತ್ತೇನು? ಎಂದು ಇನ್ನೊಂದು ಟ್ವೀಟ್ ನಲ್ಲಿ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ : ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವತ್ಥ್ ನಾರಾಯಣ್ ಹೆಗಲು ಮುಟ್ಟಿಕೊಂಡಿದ್ದೇಕೆ? : ಡಿಕೆಶಿ

ರಾಮನಗರ ಜಿಲ್ಲೆಯಲ್ಲಿ ಡಿಕೆ ಸಹೋದರರ ಗೂಂಡಾಗಿರಿಯನ್ನು ಡಾ. ಅಶ್ವತ್ಥ್ ನಾರಾಯಣ್ ವ್ಯವಸ್ಥಿತವಾಗಿ ಮಟ್ಟಹಾಕಿದ್ದರು. ಭೂ ಕಬಳಿಕೆ ವ್ಯವಹಾರಗಳಿಗೆ ತಡೆಯೊಡ್ಡಿ, ಅಕ್ರಮಗಳನ್ನು ಬುಡಮೇಲು ಮಾಡಿದ್ದರು.ಇದರಿಂದ ರೋಸಿ ಹೋದ ಡಿ.ಕೆ.ಶಿವಕುಮಾರ್ ಈಗ ಆಧಾರ ರಹಿತ ಆರೋಪದ ಮೊರೆ ಹೋಗಿದ್ದಾರೆ. ಪರಮ ಭ್ರಷ್ಟನಿಗೆ ಭ್ರಷ್ಟಾಚಾರದ್ದೇ ಕನಸು!!! ಎಂದು ಟ್ವೀಟ್ ಗಳ ಮೂಲಕ ಆಕ್ರೋಶ ಹೊರ ಹಾಕಿದೆ.

Advertisement

ಕೆಪಿಸಿಸಿಯ ಭ್ರಷ್ಟಾಧ್ಯಕ್ಷ ಡಿಕೆಶಿ ಅವರ ಕಮಿಷನ್ ವ್ಯವಹಾರವನ್ನು ಕೆಪಿಸಿಸಿ ಕಚೇರಿಯಲ್ಲೇ ಕುಳಿತು ಉಗ್ರಪ್ಪ ಅವರು ನಾಡಿಗೆಲ್ಲ ಹಂಚಿದ್ದರು.ಭ್ರಷ್ಟಾಚಾರದಲ್ಲಿ ದಿನನಿತ್ಯ ಮುಳುಗೇಳುತ್ತಿರುವ ಡಿ.ಕೆ.ಶಿವಕುಮಾರ್ ಅವರು ಈಗ ಆಧಾರ ರಹಿತ ಆರೋಪ ಮಾಡಿದರೆ ನಂಬಲು ಸಾಧ್ಯವೇ? ಎಂದು ಸಚಿವರ ಪರ ಟ್ವೀಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next