Advertisement
ಮಸೂದೆಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತಿತರ ಬಿಜೆಪಿಯ ನಾಯಕರು ಮಾಡಿರುವ ಆರೋಪಗಳಿಗೆ ಪತ್ರಿಕಾ ಪ್ರಕಟನೆಯ ಮೂಲಕ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ.
Related Articles
ಬಿಜೆಪಿ ಸರಕಾರದ ಅವಧಿಯಲ್ಲಿ ದೇಗುಲದ ಖರ್ಚು ಕಳೆದು ಉಳಿದ ಹಣದಲ್ಲಿ ಸಾಮಾನ್ಯ ಸಂಗ್ರಹ ನಿಧಿಗೆ ಹಣ ನೀಡಲಾಗುತ್ತಿತ್ತು. ಈ ಹಂಚಿಕೆಗೆ ನಿಗದಿತ ಶೇಕಡಾವಾರು ಪ್ರಮಾಣ ಬಳಸಲಾಗುತ್ತಿತ್ತು. ಪ್ರಸ್ತುತ ಕಾಂಗ್ರೆಸ್ ಸರಕಾರ ಹಾಗೆ ಮಾಡುತ್ತಿಲ್ಲ: ಬಿಜೆಪಿ ಆರೋಪ.
ರಾಜ್ಯ ಸರಕಾರ ಹಣಕ್ಕಾಗಿ ದೇಗುಲಗಳ ಹುಂಡಿಗೆ ಕೈಹಾಕಿದೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ.
ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹ ವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಮಾತ್ರವೇ ಬಳಸಲಾಗುತ್ತದೆ: ಮುಖ್ಯಮಂತ್ರಿ
Advertisement
ಹಿಂದೆ ಏನಿತ್ತು?1. ನಿವ್ವಳ ಆದಾಯ 10 ಲಕ್ಷ ರೂ. ಮೀರಿದ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ. 10ರಷ್ಟನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ಸಮರ್ಪಿಸುವುದು.
2. ಐದರಿಂದ ಹತ್ತು ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಬರುವ ದೇವಸ್ಥಾನದ ವಾರ್ಷಿಕ ಆದಾಯದಿಂದ ಶೇ.5ರಷ್ಟನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ಸಮರ್ಪಿಸುವುದು.
3. ಒಂದು ದೇವಸ್ಥಾನವಾದರೆ ಪ್ರಧಾನ ಅರ್ಚಕ, ಓರ್ವ ಎಸ್‌ಸಿ ಅಥವಾ ಎಸ್‌ಟಿ ಪ್ರತಿನಿಧಿ, ಇಬ್ಬರು ಮಹಿಳೆಯರು ಮತ್ತು ಸ್ಥಳೀಯರೊಬ್ಬರಿಗೆ ವ್ಯವಸ್ಥಾಪನ ಸಮಿತಿಯಲ್ಲಿ ಸದಸ್ಯತ್ವ ನೀಡುವುದು.
4. ಸಂಯೋಜಿತ ಸಂಸ್ಥೆಗಳಿದ್ದರೆ (ಚಿಕ್ಕಮಗಳೂರಿನ ಶ್ರೀಗುರುದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶ್ರೀಭೂತರಾಜ ಚೌಡೇಶ್ವರಿ ಮತ್ತು ಸಾದತ್ ಆಲಿ ದರ್ಗಾ) ಅಂತಹವುಗಳ ವ್ಯವಸ್ಥಾಪನ ಸಮಿತಿಯಲ್ಲಿ ಹಿಂದುಯೇತರರಿಗೆ ಸದಸ್ಯತ್ವ ನೀಡುವುದು. ಈಗ ಏನಾಗಿದೆ?
1. ಒಂದು ಕೋಟಿ ರೂ. ನಿವ್ವಳ ಆದಾಯ ಮೀರುವ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ.10ರಷ್ಟನ್ನು ಸಾಮಾನ್ಯ ಸಂಗ್ರಹ ನಿಧಿಗೆ ಸಮರ್ಪಿಸುವುದು.
2. ಹತ್ತು ಲಕ್ಷ ರೂ. ನಿವ್ವಳ ಆದಾಯಕ್ಕಿಂತ ಹೆಚ್ಚಿದ್ದು ರೂ. 1 ಕೋಟಿ ಮೀರದ ಸಂಸ್ಥೆಗಳಿಂದ ಶೇ.5ರಷ್ಟನ್ನು ಸಾಮಾನ್ಯ ಸಂಗ್ರಹ ನಿಧಿಗೆ ಸಮರ್ಪಿಸುವುದು.
3. ಒಂದು ದೇವಸ್ಥಾನವಾದರೆ ಪ್ರಧಾನ ಅರ್ಚಕ, ಓರ್ವ ಎಸ್‌ಸಿ ಅಥವಾ ಎಸ್‌ಟಿ ಪ್ರತಿನಿಧಿ, ಇಬ್ಬರು ಮಹಿಳೆಯರು ಮತ್ತು ಸ್ಥಳೀಯರ ಜತೆಗೆ ಹಿಂದೂ ದೇವಸ್ಥಾನಗಳ ವಾಸ್ತುಶಿಲ್ಪ ಮತ್ತು ಶಿಲ್ಪಶಾಸ್ತ್ರದಲ್ಲಿ ಕೌಶಲವುಳ್ಳ ವಿಶ್ವಕರ್ಮ ಸಮುದಾಯದ ವ್ಯಕ್ತಿಗೆ ವ್ಯವಸ್ಥಾಪನ ಸಮಿತಿಯಲ್ಲಿ ಸದಸ್ಯತ್ವ ನೀಡುವುದು.
4. ಸಂಯೋಜಿತ ಸಂಸ್ಥೆಗಳಿದ್ದರೆ (ಚಿಕ್ಕಮಗಳೂರಿನ ಶ್ರೀಗುರುದತ್ತಾತ್ರೇಯ ಬಾಬ ಬುಡನ್ ಸ್ವಾಮಿ ದರ್ಗಾ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶ್ರೀಭೂತರಾಜ ಚೌಡೇಶ್ವರಿ ಮತ್ತು ಸಾದತ್ ಆಲಿ ದರ್ಗ) ಅಂತಹವುಗಳ ವ್ಯವಸ್ಥಾಪನ ಸಮಿತಿಯಲ್ಲಿ ಹಿಂದುಯೇತರರಿಗೆ ಸದಸ್ಯತ್ವ ನೀಡುವುದು.