Advertisement
ಜನಸಂಪರ್ಕಕ್ಕೆ ಆದ್ಯತೆಬೆಂಗಳೂರು: ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಸಲುವಾಗಿ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ರಾಜ್ಯದ ಆರು ಸ್ಥಳಗಳಲ್ಲಿ ಜನೋತ್ಸವ ಹಮ್ಮಿ ಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Related Articles
Advertisement
- ಆರು ಸ್ಥಳಗಳಲ್ಲಿ ಜನೋತ್ಸವ: ಸಿಎಂ-ಮುಖಂಡರ ರಾಜ್ಯ ಪ್ರವಾಸದ ಬಗ್ಗೆ ಚರ್ಚೆ
-ಮತ್ತೊಮ್ಮೆ ಸಭೆ ನಡೆಸಿ ಮುಂದಿನ ಎರಡು ತಿಂಗಳ ಕಾರ್ಯಕ್ರಮಕ್ಕೆ ಅಂತಿಮ ಸ್ಪರ್ಶ ಕಾಂಗ್ರೆಸ್ ಉತ್ತರ ಜನಜಾಗೃತಿ
ಬೆಂಗಳೂರು: ಬಿಜೆಪಿಯ “ಜನೋತ್ಸವ’ಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ “ಜನಜಾಗೃತಿ’ ಸಮಾವೇಶ ನಡೆಸಲು ಚಿಂತನೆ ನಡೆಸಿದೆ. ಕಾಂಗ್ರೆಸ್ ಮುಖಂಡರಾದ ರಣದೀಪ್ ಸಿಂಗ್ ಸುಜೇìವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ. ಜತೆಗೆ ರಾಜ್ಯ ಬಿಜೆಪಿ ಸರಕಾರ ಚುನಾವಣೆ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿದ್ದು, ಶೇ. 10 ರಷ್ಟನ್ನೂ ಈಡೇರಿಸಿಲ್ಲ ಎಂದಿದ್ದಾರೆ.ಅದಕ್ಕಾಗಿ ಸಾಮಾಜಿಕ ಜಾಲತಾಣ ಗಳಲ್ಲಿ “ಇದೆಯೇ ನಿಮ್ಮ ಬಳಿ ಉತ್ತರ’ ಎಂಬ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಯಡಿಯೂರಪ್ಪನವರು ಪ್ರಣಾ ಳಿಕೆಯಲ್ಲಿ “ಕರ್ನಾಟಕದ ಮುಂದೆ ನಮ್ಮ ವಚನ’ ಎಂದಿದ್ದರು. ನಾವು ಸರಕಾರಕ್ಕೆ ಸಾಮಾಜಿಕ ಜಾಲ ತಾಣಗಳ ಮೂಲಕ, “ಬಿಜೆಪಿಯವರೇ ಕೊಟ್ಟ ವಚನ ಉಳಿಸಿ ಕೊಂಡಿದ್ದೀರಾ’ ಎಂದು ಕೇಳುತ್ತಿದ್ದೇವೆ. “ನಮ್ಮ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ಇದೆಯೇ ಉತ್ತರ’ ಎಂಬ ಆಂದೋಲನ ಮಾಡು ತ್ತೇವೆ ಎಂದರು. ಬಿಜೆಪಿ ಸರಕಾರ ತನ್ನ ಆಡಳಿತ ಅವಧಿಯಲ್ಲಿ ನೀಡಿರುವ ಕೊಡುಗೆ ಗಳೆಂದರೆ ಮಠಗಳಿಂದ ಶೇ. 30, ಗುತ್ತಿಗೆದಾರರಿಂದ ಶೇ. 40, ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಂದ ಶೇ. 60ರಷ್ಟು ಕಮಿಷನ್ ಪಡೆದಿರುವುದು. ಸರಕಾರದ ವೈಫಲ್ಯಗಳನ್ನು ಜನ ಜಾಗೃತಿ ಸಮಾವೇಶಗಳ ಮೂಲಕ ವಿವರಿಸುತ್ತೇವೆ ಎಂದರು. ಆಂದೋಲನದ ಭಾಗವಾಗಿ ಶೇ. 90 ವಚನ ವಂಚನೆ ಘೋಷವಾಕ್ಯದ ಪೋಸ್ಟರ್ ಬಿಡುಗಡೆಗೊಳಿಸಿದರು. ವಚನ ವಂಚನೆ
ಜನರಿಗೆ ಮಾತು ಕೊಟ್ಟ ಅನಂತರ ಅದರಂತೆ ನಡೆಯಬೇಕು. ಆದರೆ ಈ ಸರಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ. ಹಾಗಾಗಿ ಇದು ವಚನ ವಂಚನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕಳೆದ ಚುನಾವಣೆಯಲ್ಲಿನ ಬಿಜೆ ಪಿಯ ಪ್ರಣಾಳಿಕೆಯನ್ನೇ ಜನರಿಗೆ ವಿವರಿಸಿ ವಚನ ವಂಚನೆಯಾಗಿರುವುದನ್ನು ತಿಳಿಸುತ್ತೇವೆ ಎಂದು ಡಿ.ಕೆ. ಶಿವ ಕುಮಾರ್ ಹೇಳಿದರು. -ಕೊಟ್ಟದ್ದು 600 ಭರವಸೆ, ಈಡೇರಿಸಿದ್ದು ಶೇ. 10
-ಜಾಲತಾಣಗಳಲ್ಲಿ ಆಂದೋಲನಕ್ಕೆ ನಿರ್ಧಾರ
-ಕಮಿಷನ್ ಪಡೆದದ್ದೇ ಬಿಜೆಪಿ ಸರಕಾರದ ಸಾಧನೆ