Advertisement

Politics: ಚಂದ್ರಯಾನದ ಶ್ರೇಯಸ್ಸಿಗಾಗಿ ಬಿಜೆಪಿ-ಕಾಂಗ್ರೆಸ್‌ ಜಟಾಪಟಿ

09:21 PM Aug 23, 2023 | Team Udayavani |

ನವದೆಹಲಿ: ಬುಧವಾರ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನಲ್ಲಿಳಿದಿದೆ. ಈ ನಡುವೆ ಇದರ ಶ್ರೇಯಸ್ಸು ಪಡೆಯಲು ಕಾಂಗ್ರೆಸ್‌-ಬಿಜೆಪಿಯ ನಡುವೆ ಪೈಪೋಟಿ ನಡೆದಿದೆ! ಕಾಂಗ್ರೆಸ್‌ ಎಕ್ಸ್‌ ಖಾತೆಯಲ್ಲಿ, ನಿಮಗೆ ಗೊತ್ತಿದೆಯಾ? ಚಂದ್ರಯಾನ-1 2008, ಅ.22ರಂದು ಪ್ರಧಾನಿ ಮನಮೋಹನ್‌ ಸಿಂಗ್‌ ಕಾಲದಲ್ಲಿ ಯಶಸ್ವಿಯಾಗಿ ಉಡಾವಣೆಯಾಯಿತು ಎಂದು ಪೋಸ್ಟ್‌ ಮಾಡಲಾಗಿದೆ. ಅಷ್ಟಲ್ಲದೇ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ಭಾರತದ ಬಾಹ್ಯಾಕಾಶ ಯಾತ್ರೆ ಶುರುವಾಗಿದ್ದೇ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಕಾಲದಲ್ಲಿ. ಇನ್‌ಕಾಸ್ಪಾರ್‌ (ಐಎನ್‌ಸಿಒಎಸ್‌ಪಿಎಆರ್‌) ಸಂಸ್ಥೆಯನ್ನು ಹೋಮಿ ಭಾಭಾ, ವಿಕ್ರಮ್‌ ಸಾರಾಭಾಯಿ ಆರಂಭಿಸಿದರು ಎಂದು ಬರೆದುಕೊಳ್ಳಲಾಗಿದೆ.

Advertisement

ಇದಕ್ಕೆ ಪ್ರತಿಯಾಗಿ ಬಿಜೆಪಿ ಪ್ರಚಾರ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿ “ಎಲ್ಲರಿಗಿಂತ ಮುನ್ನ ಕಾಂಗ್ರೆಸ್‌ನಿಂದ ಟಿಎಂಸಿವರೆಗೆ ಉಪದೇಶ ಶುರುವಾಗಿದೆ. ಭಾರತ ಬಾಹ್ಯಾಕಾಶದಲ್ಲಿ ಮಾಡಿದ ಅದ್ಭುತ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಯತ್ನಿಸಲಾಗುತ್ತಿದೆ. ಇಲ್ಲಿ ಕಳೆದ 9 ವರ್ಷದಲ್ಲಿ ಭಾರತ ಎಷ್ಟೆಲ್ಲ ಸಾಧನೆ ಮಾಡಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಸತ್ಯವೆಂದರೆ ಭಾರತ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನೆಹರೂರಿಂದ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಮಾಡಿದ ಸಾಧನೆಗಿಂತ ಗರಿಷ್ಠ ಸಾಧನೆ ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next