Advertisement
ಸೋಮವಾರ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ವಿಜಯಪುರ ಜಿಲ್ಲೆಯ ಕಾರ್ಯಕಾರಿ ಸಮಿತಿಯಲ್ಲಿ ಪಾಲ್ಗೊಂಡು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಹರಿಹಾಯ್ದರು.
Related Articles
Advertisement
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಪರಿಶಿಷ್ಟ ಪಂಗಡದ ನಿಗಮದಲ್ಲಿ ಸ್ವಜಾತಿ ಜನರ ಅಭಿವೃದ್ಧಿಗೆ ಮೀಸಲಿದ್ದ ನೂರಾರು ಕೋಟಿ ರೂ. ಹಗರಣವಾಗಿದೆ. ಇತರೆ ನಿಗಮಗಳಲ್ಲೂ ಇದೇ ಪರಿಸ್ಥಿತಿ ಇಲ್ಲದಿಲ್ಲ ಎಂದು ದೂರಿದರು.
ಹೀಗಾಗಿ ಭ್ರಷ್ಟಾಚಾರದಲ್ಲಿ ಬಿಜೆಪಿ ಸರ್ಕಾರಕ್ಕಿಂತ ಕಾಂಗ್ರೆಸ್ ಸರ್ಕಾರದ ಆಡಳಿತವೇನೂ ಭಿನ್ನವಾಗಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು, ರೈತರ ಕೆಲಸ ಆಗುತ್ತಿಲ್ಲ. ಅಭಿವೃದ್ಧಿ ವಿಷಯದಲ್ಲೂ ಹಿನ್ನಡೆ ಆಗುತ್ತಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಿಸಿರುವ ಪ್ರಣಾಳಿಕೆಗಳು ಈಡೇರುತ್ತಿಲ್ಲ, ಕೇಂದ್ರದ ಬಿಜೆಪಿ ಸರ್ಕಾರದ ಕಥೆಯೂ ಇದೆ ಆಗಿದೆ. ಪ್ರಧಾನಿ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಲೇ ಘೋಷಿಸಿರುವ 3 ಲಕ್ಷ ಕೋಟಿ ಮನೆಗಳು ವಾಸ್ತವವಾಗಿ ಅನುಷ್ಠಾನ ಅಸಾಧ್ಯ. ಆದರೆ ಅವರು ನೀಡುವ ಹುಸಿ ಭರವಸೆಗಳು, ಘೋಷಿಸುವ ಘೋಷಣೆಗಳಿಗೆ ನಾವೆಲ್ಲ ಮರುಳಾಗುತ್ತೇವೆ ಎಂದು ವಿಷಾದಿಸಿದರು.
ಅಂಗನವಾಡಿ ನೌಕರರು ಸಂಘಟಿ ಹೋರಾಟದ ಮೂಲಕ ಮಾಸಿಕ 500 ರೂ. ವೇತನ ಹೆಚ್ಚಿಕೊಂಡಿದ್ದಾರೆ. ವೈದ್ಯರು, ಲಾರಿ ಮಾಲಿಕ-ಚಾಲಕರು ಅಷ್ಟೇ ಏಕೆ ಎಪಿಎಂಸಿ ಹಮಾಲರು ಕೂಡ ಸಂಘಠಿತ ಹೋರಾಟದ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತಾರೆ.ಆದರೆ ಸಂಘಟಿತ ವ್ಯವಸ್ಥೆ ಇಲ್ಲದ ರೈತರು ಚುನಾವಣೆ ಸಂದರ್ಭದಲ್ಲಿ ಸಂಘಟಿತರಾಗದೇ ತಮಗೆ ತಿಳಿದ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿರುವುದೇ ಈ ದುಸ್ಥಿತಿಗೆ ಕಾರಣ. ಈ ದುಸ್ಥಿತಿಗೆ ಕಡಿವಾಣ ಹಾಕಲು ರೈತರು ಕೂಡ ರಾಜಕೀಯ ಪ್ರವೇಶಕ್ಕೆ ಸಂಘಟಿತರಾಗಬೇಕಿದೆ. ಇದಕ್ಕಾಗಿ ರಾಜ್ಯದಲ್ಲಿ ಆಡಳಿತದ ಲೋಪ ಪ್ರಶ್ನಿಸಲು ರೈತರು ಕರ್ನಾಟಕ ಸರ್ವೋದಯ ಪಕ್ಷವನ್ನು ಬಲಪಡಿಸುವುದು ಅನಿವಾರ್ಯವಾಗಿದೆ ಎಂದರು.
ರೈತ ಸಂಘದ ರಾಜ್ಯ ವರಿಷ್ಠ ಬಡಗಲಪುರ ನಾಗೇಂದ್ರ ಮಾತನಾಡಿ, ರೈತರು ಕೂಡ ರಾಜಕೀಯ ನಿಲುವು, ನಿರ್ಧಾರಗಳಲ್ಲಿ ಪಾಲ್ಗೊಳ್ಳುವುದು ಇಂದಿನ ಅಗತ್ಯವಾಗಿದೆ. ನೀತಿ ರೂಪಿಸುವಲ್ಲಿ, ಆಡಳಿತ ವ್ಯವಸ್ಥೆಯನ್ನು ಸರಿದಾರಿಯಲ್ಲಿ ನಡೆಸಲು ರೈತರ ರಾಜಕೀಯ ಪ್ರವೇಶ ಅನಿವಾರ್ಯವಾಗಿದೆ ಎಂದರು.ಸಂಘಟನೆಯ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.