Advertisement

ರಾಜಸ್ಥಾನದಲ್ಲಿ ಬಿಜೆಪಿ ಮತ್ತೂಮ್ಮೆ ಕ್ಲೀನ್‌ ಸ್ವೀಪ್‌

12:30 PM May 24, 2019 | Team Udayavani |

ಕೆಲವೇ ತಿಂಗಳುಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಸೋತು, ಕಾಂಗ್ರೆಸ್‌ ಅಧಿಕಾರ ಹಸ್ತಾಂತರಿಸಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿ ಕೈಬಿಡಲಿಲ್ಲ.

Advertisement

ಕಳೆದ ಲೋಕಸಭೆ ಚುನಾವಣೆಯಂತೆಯೇ ಈ ಬಾರಿಯೂ 25 ಕ್ಕೆ 25 ಕ್ಷೇತ್ರದಲ್ಲೂ ಜನರು ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಚುನಾವಣೆ ವೇಳೆ ಮೋದಿ ಬಿಟ್ಟು ಇನ್ಯಾರೂ ಇಲ್ಲ, ವಸುಂಧರಾ ಪರಿವೆ ಇಲ್ಲ ಎಂಬ ಘೋಷಣೆ ಜನರಲ್ಲಿ ಭಾರಿ ಪ್ರಚಾರವಾಗಿತ್ತು. ಜನರಿಗೆ ಬಿಜೆಪಿ ನಾಯಕಿ ವಸುಂಧರಾ ರಾಜೆ ವಿರುದ್ಧ ಸಿಟ್ಟಿದೆ . ಆದರೆ ಮೋದಿ ವಿರುದ್ಧ ಸಿಟ್ಟಿಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ.

ಇನ್ನೊಂದೆಡೆ ಚುನಾವಣೆಗೂ ಸ್ವಲ್ಪ ದಿನ ಮೊದಲು ಭಾರಿ ಚರ್ಚೆಗೀಡಾದ ಅಲ್ವಾರ್‌ ಗ್ಯಾಂಗ್‌ರೇಪ್‌ ಪ್ರಕರಣವೂ ಕಾಂಗ್ರೆಸ್‌ ಕಾಂಗ್ರೆಸ್‌ ವಿರುದ್ಧ ಜನರು ಮತ ಹಾಕುವಂತೆ ಪ್ರೇರೇಪಿಸಿತು.

ಇನ್ನು ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಮನಸ್ತಾಪಗಳೂ ಜನರು ಈ ತೀರ್ಮಾನ ಮಾಡಲು ಕಾರಣವಾಗಿದೆ ಎನ್ನಲಾಗುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಸಿಎಂ ಅಶೋಕ್‌ ಗೆಹಲೋಟ್ ಮತ್ತು ಸಚಿನ್‌ ಪೈಲಟ್‌ ಮಧ್ಯೆ ಭಾರಿ ತಿಕ್ಕಾಟ ನಡೆದಿದ್ದು, ಇದು ಆಗಾಗ ಬಹಿರಂಗವೂ ಆಗುತ್ತಿದೆ. ಇದರಿಂದ ಅಸ್ಥಿರ ಸರ್ಕಾರದ ಭಾವ ಜನರಲ್ಲಿ ಮೂಡಿದೆ. ಹೀಗಾಗಿ ಅವರು ಸ್ಥಿರ ಸರ್ಕಾರದತ್ತ ಮತ ಹಾಕಿದ್ದಾರೆ.

ಗೆದ್ದ ಪ್ರಮುಖರು
ದುಷ್ಯಂತ್‌ ಸಿಂಗ್‌ (ಬಿಜೆಪಿ), ಝಲಾವರ್‌
ರಾಜ್ಯವರ್ಧನ್‌ ಸಿಂಗ್‌ (ಬಿಜೆಪಿ), ಜೈಪುರ ಗ್ರಾ
ಅರ್ಜುನ್‌ ಮೇಘಾಲ್‌, ಬಿಕಾನೇರ್‌

Advertisement

ಸೋತ ಪ್ರಮುಖರು
ವೈಭವ್‌ ಗೆಹಲೋಟ್, ಜೋಧ್‌ಪುರ
ಮಾನವೇಂದ್ರ ಸಿಂಗ್‌ (ಕಾಂ), ಬಾರ್ಮರ್‌
ಕೃಷ್ಣಾ ಪೂನಿಯಾ (ಕಾಂ), ಜೈಪುರ ಗ್ರಾ.

ಜೈಪುರ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ನಾನು ಕ್ಷೇತ್ರದ ಜನರೊಂದಿಗೆ ಕುಳಿತು ಯೋಜನೆ ರೂಪಿಸಿದ್ದೇನೆ. ಇದನ್ನು ಜಾರಿಗೆ ತರಲು ನಾನು ಯತ್ನಿಸುತ್ತೇನೆ.
ರಾಜ್ಯವರ್ಧನ್‌ ಸಿಂಗ್‌, ಕೇಂದ್ರ ಸಚಿವ

ನಾವು ಪ್ರಚಾರಕ್ಕೆ ಹೋದಲ್ಲೆಲ್ಲ ಮೋದಿ ಅಲೆಯನ್ನು ನಾವು ಗಮನಿಸಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಸರ್ಕಾರವು ನೀಡಿದ ಭರವಸೆಗಳನ್ನು ಪೂರೈಸಿದೆ.
ವಸುಂಧರಾ ರಾಜೆ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next