Advertisement

ಡಿಕೆಶಿ ಚೆಕ್‌,ಬಿಜೆಪಿಗೆ ಶಾಕ್‌;ರಾಮನಗರದಲ್ಲಿ ಹಿಂದೆ ಸರಿದ ಅಭ್ಯರ್ಥಿ!

10:22 AM Nov 01, 2018 | |

ರಾಮನಗರ: ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ರಾಮನಗರ ಉಪಚುನಾವಣಾ ಕಣದಲ್ಲಿ  ಮಹತ್ವದ ಬೆಳವಣಿಗೆಯೊಂದು ನಡೆದಿದ್ದು  ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಶಾಕ್‌ ನೀಡಿದ್ದಾರೆ. 

Advertisement

ಗುರುವಾರ ಬೆಳಗ್ಗೆ ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ  ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌  ಜೆಡಿಎಸ್‌ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ. 

ಇವರನ್ನು ಹೇಗೆ ನಂಬಲಿ…!

ಆವತ್ತು ನನ್ನ ಕೈಗೆ ಬಾವುಟ ಕೊಟ್ಟು ಹೋದವರು ಏನಾಯಿತು ಎಂದು ನೋಡಲು ಬರಲಿಲ್ಲ, ಇನ್ನು ನಾನು ಗೆಲ್ಲುವುದು ಹೇಗೆ ಎಂದು ಚಂದ್ರಶೇಖರ್‌ ಹೇಳಿದ್ದಾರೆ.

ಕೇಂದ್ರ ಸಚಿವ ಸದಾನಂದ ಗೌಡ ಅವರನ್ನು ಕಂಡರೆ ಯೋಗೇಶ್ವರ್‌ ಅವರಿಗೆ ಆಗುವುದಿಲ್ಲ. ಸದಾನಂದ ಗೌಡರು ಬಂದರು, ಸ್ವಲ್ಪ ನಕ್ಕರು ಹೋದರು ಎಂದಿದ್ದಾರೆ. 

Advertisement

ಮಂಡ್ಯಕ್ಕೆ  ಬಿಜೆಪಿ ಪ್ರಮುಖ ನಾಯಕರೆಲ್ಲರೂ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಯಾರೂ ಇಲ್ಲಿ  ಕಾರು ನಿಲ್ಲಿಸಿ ಸ್ವಲ್ಪ ಪ್ರಚಾರವೂ ನಡೆಸಿಲ್ಲ ಎಂದಿದ್ದಾರೆ. 

ನಾನು ಮೂಲತಃ ಕಾಂಗ್ರೆಸಿಗ ಮತ್ತೆ ಮಾತೃ ಪಕ್ಷವನ್ನು ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ ಪಕ್ಷ  ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ  ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ  ಎಲ್‌ ಚಂದ್ರಶೇಖರ್‌  ಅವರಿಗೆ ಬಿಜೆಪಿ ಬಿ ಫಾರಂ ನೀಡಿತ್ತು. 

ಬಿಜೆಪಿಗೆ ಭಾರೀ ಶಾಕ್‌
ಈ ವಿದ್ಯಮಾನ ಬಿಜೆಪಿಗೆ ಭಾರೀ ಆಘಾತ ನೀಡಿದ್ದು, ನಾಯಕರು ತಲೆಕೆಡಿಸಿಕೊಳ್ಳುವಂತಾಗಿದೆ. ಫ‌ಲಿತಾಂಶಕ್ಕೂ ಮುನ್ನ ಭಾರೀ ಮುಖಭಂಗ ಅನುಭವಿಸಬೇಕಾಗಿದೆ. ತಳಮಟ್ಟದ ಕಾರ್ಯಕರ್ತರ ವಿರೋಧವನ್ನು ಎದುರಿಸುವ ಪರಿಸ್ಥಿತಿ ಒದಗಿ ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next