Advertisement

ಎ.12: ಬಿಜೆಪಿ ಮೊದಲ ಪಟ್ಟಿ? ಇಂದು ದಿಲ್ಲಿಯಲ್ಲಿ ನಡೆಯಲಿದೆ ಸಂಸದೀಯ ಮಂಡಳಿ ಮಹತ್ವದ ಸಭೆ

12:07 AM Apr 09, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾ ವಣೆಗೆ ಆಡಳಿತಾರೂಢ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ, ಟಿಕೆಟ್‌ ವಂಚಿತರು ಯಾರಾಗಲಿದ್ದಾರೆ ಎನ್ನುವುದಕ್ಕೆ ಕೊಂಚ ದಿನ ಗಳು ಕಾಯಬೇಕಾಗಬಹುದು. ಟಿಕೆಟ್‌ ನೀಡು ವುದರ ಬಗ್ಗೆ ಪಕ್ಷದ ಸಂಸದೀಯ ಮಂಡಳಿಯ ಮಹತ್ವದ ಸಭೆ ರವಿವಾರ ನಡೆಯ ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸ ಮುಕ್ತಾಯಗೊಳಿಸಿ ಹೊಸದಿಲ್ಲಿ ತಲುಪಿದ ಬಳಿಕ ಸಭೆ ನಡೆಯಲಿದೆ. ಆ ಸಂದರ್ಭದಲ್ಲಿ ಯಾವ ಕ್ಷೇತ್ರಕ್ಕೆ ಯಾರು ಎನ್ನುವ ಅಂಶ ನಿರ್ಧಾರವಾಗಲಿದೆ.

Advertisement

ಮೊದಲ ಹಂತದಲ್ಲಿ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಬಹುದೆಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ರವಿವಾರವೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಕ್ಷೀಣಿಸಿದೆ. ಎ. 10 ಅಥವಾ 12ರಂದು ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.

ರವಿವಾರ ನಡೆಯಲಿರುವ ಸಂಸದೀಯ ಮಂಡಳಿ ಸಭೆಗೆ ಪೂರ್ವಭಾವಿಯಾಗಿ ಹೊಸದಿಲ್ಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಸಹಪ್ರಭಾರಿಗಳಾದ ಮನಸುಖ ಮಾಂಡವಿಯಾ, ಕೆ. ಅಣ್ಣಾಮಲೈ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು.

ಬೆಳಗ್ಗೆ 11 ಗಂಟೆಯಿಂದ ಪ್ರಾರಂಭವಾದ ಸಭೆ ರಾತ್ರಿಯವರೆಗೂ ಮುಂದುವರಿದಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಹೊರತುಪಡಿಸಿ ಯಾರೊಬ್ಬರೂ ಈ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ. ಸಂಸದೀಯ ಮಂಡಳಿ ಸಭೆಯಲ್ಲಿ ಬೊಮ್ಮಾಯಿ ಸದಸ್ಯರಲ್ಲದೇ ಇರುವುದರಿಂದ ಅವರು ಭಾಗಿಯಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

Advertisement

ಕಾಂಗ್ರೆಸ್‌ಗೆ ನಡುಕ
ಬಿಜೆಪಿಯ ಕೆಲವು ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪಲಿದೆ ಎಂಬ ಚರ್ಚೆ ಮಧ್ಯೆಯೇ ಮುಖ್ಯಮಂತ್ರಿ ಬಹಿರಂಗಗೊಳಿಸಿದ ಈ ಅಂಶ ಆಡಳಿತ ಪಕ್ಷದಲ್ಲಿ ಹೊಸ ಲೆಕ್ಕಾಚಾರಗಳನ್ನು ಹುಟ್ಟು ಹಾಕಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆ ಅನಂತರದ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಹಜವಾಗಿಯೇ ಇದರ ಲಾಭ ನಮಗೆ ಆಗುತ್ತದೆ. ಆದರೆ ಬಿಜೆಪಿ ಸ್ವಂತ ಶಕ್ತಿಯಲ್ಲಿ ನಂಬಿಕೆ ಇಟ್ಟಿದೆ. ಕಾಂಗ್ರೆಸ್‌ನವರು ಈ ಹಿಂದೆ ಚಿತ್ರನಟರನ್ನು ಕರೆಯಿಸಿ ಪ್ರಚಾರ ನಡೆಸಿರಲಿಲ್ಲವೇ? ಅಂಬರೀಶ್‌ ಕಾಂಗ್ರೆಸ್‌ ಪರ ಪ್ರಚಾರ ಮಾಡಿಲ್ಲವೇ? ಶಾಸಕರಾಗಿಲ್ಲವೇ? ಸುದೀಪ್‌ ನಮಗೆ ಬೆಂಬಲ ನೀಡಿರುವುದರಿಂದ ಕಾಂಗ್ರೆಸ್‌ನವರಿಗೆ ನಡುಕ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಹೊಸ ಮುಖಗಳ ಬಗ್ಗೆ ಚರ್ಚೆ
ಈ ಸಭೆಯಲ್ಲಿ ಹೊಸ ಮುಖಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ ಎನ್ನಲಾಗಿದೆ. ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸ್ವತಂತ್ರ ಸಂಸ್ಥೆಯ ಮೂಲಕ ಸರ್ವೆ ನಡೆಸಿದ್ದು, ಆ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಸಂಸದೀಯ ಸಭೆಗೆ ಮುನ್ನ ಈ ಎಲ್ಲ ನಾಯಕರು ಮತ್ತೂಂದು ಸುತ್ತು ಸಭೆ ನಡೆಸಿ ಚರ್ಚೆ ನಡೆಸುವರು ಎಂದು ತಿಳಿದು ಬಂದಿದೆ.

ಟಿಕೆಟ್‌ ಕೇಳಿದ ಎಂಎಲ್‌ಸಿಗಳು
ಇದೇ ವೇಳೆ, ಹೊಸದಿಲ್ಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೆಲವು ಸಂಸದರು ಹಾಗೂ ಎಂಎಲ್‌ಸಿಗಳು ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಲು ಉತ್ಸುಕ ರಾಗಿದ್ದಾರೆ. ಅವರು ಕೂಡ ತಮಗೂ ಟಿಕೆಟ್‌ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೆಲವು ಸಂಸದರು ಹಾಗೂ ವಿಧಾನ ಪರಿಷತ್‌ ಸದಸ್ಯರು ಟಿಕೆಟ್‌ ಬಯಸಿದ್ದಾರೆ. ಸಭೆಯಲ್ಲಿ ಇದೆಲ್ಲವೂ ಚರ್ಚೆಗೆ ಬರುತ್ತದೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಮೊದಲು ಬಿಡುಗಡೆಯಾಗುತ್ತದೆ ಎಂಬುದು ನಿರ್ಧಾರವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next