Advertisement

ರಫೇಲ್‌ : ರಾಹುಲ್‌ ಗಾಂಧಿ ಒಬ್ಬ ಸರಣಿ ಸುಳ್ಳುಗಾರ: ಬಿಜೆಪಿ ಆರೋಪ

04:52 PM Oct 12, 2018 | Team Udayavani |

ಹೊಸದಿಲ್ಲಿ : ”ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಬ್ಬ ಸರಣಿ ಸುಳ್ಳುಗಾರ; ರಫೇಲ್‌ ಡೀಲ್‌ ವಿಷಯದಲ್ಲಿ ಫ್ರೆಂಚ್‌ ಮಾಧ್ಯಮ ವರದಿಗಳನ್ನು ತಿರುಚಲು ಯತ್ನಿಸುತ್ತಿದ್ದಾರೆ” ಎಂದು ಬಿಜೆಪಿ ಆರೋಪಿಸಿದೆ.

Advertisement

“ಈಚಿನ ದಿನಗಳಲ್ಲಿ ನಾವು ಒಬ್ಬ ಸರಣಿ ಸುಳ್ಳುಗಾರನ ಚಟುವಟಿಕೆಗಳನ್ನು ಕಾಣುತ್ತಿದ್ದೇವೆ; ಒಬ್ಬ ಮನುಷ್ಯ ಪದೇ ಪದೇ ಒಂದೇ ವಿಷಯವನ್ನು ಪುನರುಚ್ಚರಿಸುತ್ತಾನೆಂದರೆ ಆತನ ಬಳಿ ಬೇರೆ ಯಾವುದೇ ವಿಷಯ ಇಲ್ಲ ಎಂದರ್ಥ; ರಾಹುಲ್‌ ಗಾಂಧಿ 1,000 ಬಾರಿ ಸುಳ್ಳನ್ನು ಪುನರುಚ್ಚರಿಸಿದರೂ ರಫೇಲ್‌ ಸತ್ಯವನ್ನು ಆತನಿಂದ ಬದಲಾಯಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ರೈಲ್ವೇ, ಕಲ್ಲಿದ್ದಲು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾಗಿರುವ ಪಿಯೂಷ್‌ ಗೋಯಲ್‌ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

”2007 ಮತ್ತು 2012ರಲ್ಲಿ ಅಂದಿನ ಯುಪಿಎ ಸರಕಾರ ಒಪ್ಪಿಕೊಂಡದ್ದಕ್ಕಿಂತಲೂ ಅತ್ಯುತ್ತಮ ಬೆಲೆಯಲ್ಲಿ ಎನ್‌ಡಿಎ ಸರಕಾರ ರಫೇಲ್‌ ವಹಿವಾಟನ್ನು ಅಂತಿಮಗೊಳಿಸಿದೆ. ಈ ವಹಿವಾಟಿನಲ್ಲಿ ನಮಗೆ ಶೀಘ್ರ ಪೂರೈಕೆ, ದೀರ್ಘ‌ ನಿರ್ವಹಣ ಅವಧಿ, ಬಿಡಿ ಭಾಗಗಳ ಲಭ್ಯತೆ ಮತ್ತು ಅತ್ಯಗತ್ಯ ಇರುವ ರಕ್ಷಣಾ ಸಾಮರ್ಥ್ಯ ಇತ್ಯಾದಿಗಳನ್ನು ನಾವು ಖಾತರಿ ಪಡಿಸಿಕೊಂಡಿದ್ದೇವೆ” ಎಂದು ಗೋಯಲ್‌ ಹೇಳಿದರು. 

”ರಫೇಲ್‌ ಡೀಲ್‌ ಅನುಷ್ಠಾನಕ್ಕಾಗಿ ಡಸಾಲ್ಟ್ ಕಂಪೆನಿಯೇ ಭಾರತದಲ್ಲಿ ತನ್ನ ಭಾಗೀದಾರ ಕಂಪೆನಿಯನ್ನು ಆಯ್ಕೆ ಮಾಡಿಕೊಂಡಿದೆ. ರಫೇಲ್‌ ವಿಷಯದಲ್ಲಿ ಅನೇಕ ಸತ್ಯಗಳನ್ನು ಫ್ರೆಂಚ್‌ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಅವನ್ನು ತಿರುಚುವ ಯತ್ನದಲ್ಲಿ ತೊಡಗಿದ್ದಾರೆ” ಎಂದು ಗೋಯಲ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next