ಹುಬ್ಬಳ್ಳಿ: ಬಿಜೆಪಿ ಉಪ ಚುನಾವಣೆ ಸೋಲಿನ ಭೀತಿಯಿಂದಾಗಿ ತೆಲುಗು ಗಾಯಕಿಯನ್ನು ಪ್ರಚಾರಕ್ಕೆ ಕರೆ ತರುತ್ತಿದೆ. ಇದರಿಂದ ರಾಜ್ಯದಲ್ಲಿನ ಬಿಜೆಪಿ ಸರಕಾರದ ದುರಾಡಳಿತ ಎಷ್ಟೆಂಬುದು ಗೊತ್ತಾಗುತ್ತದೆ. ಮತದಾರರು ಮೂರು ಪಕ್ಷಗಳಿಗೂ ತಕ್ಕ ಪಾಠ ಕಲಿಸಬೇಕು ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಡಾ| ಕೃಷ್ಣಮೂರ್ತಿ ಎಂ. ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನಡೆಸಿದ್ದರೆ ಮುಖ್ಯಮಂತ್ರಿ ಸೇರಿದಂತೆ ಮಂತ್ರಿಮಂಡಲ ಉಪ ಚುನಾವಣೆ ಪ್ರಚಾರಕ್ಕೆಹೋಗುವ ಅಗತ್ಯವಿರಲಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ದುರಾಡಳಿತ ನಡೆಸುತ್ತಿವೆ.ಇವುಗಳ ಜನಪ್ರಿಯತೆ ಎಷ್ಟು ಪಾತಾಳಕ್ಕೆ ಹೋಗಿದೆ ಎಂಬುದಕ್ಕೆ ಗಾಯಕಿ ಮಂಗ್ಲಿ ಪ್ರಚಾರಕ್ಕೆ ಕರೆಸಿರುವುದೇ ಉದಾಹರಣೆ ಎಂದರು.
ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರು ತೀವ್ರ ಸಮಸ್ಯೆಅನುಭವಿಸುತ್ತಿದ್ದಾರೆ. ನೌಕರರ ಬೇಡಿಕೆ ಸಮಂಜಸವಾಗಿದ್ದು, ಅದನ್ನು ಈಡೇರಿಸಬೇಕು.ಆದರೆ ಸರಕಾರಕ್ಕೆ ಉಪ ಚುನಾವಣೆಯೇ ಮುಖ್ಯವಾಗಿದೆ. ಸಾರ್ವಜನಿಕರ ಸಮಸ್ಯೆಬಗೆಹರಿಸುವ ಚಿಂತೆಯಿಲ್ಲ. ಇದುವರೆಗೆ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್,ಬಿಜೆಪಿಗೆ ಜನರ ಸಮಸ್ಯೆಗಿಂತ ತಮ್ಮ ಉದ್ಧಾರವೇ ಮುಖ್ಯವಾಗಿದೆ. ಮತದಾರರು ಈಉಪ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ನೀಡಬೇಕು. ಅವರನ್ನು ತಿರಸ್ಕರಿಸಬೇಕು ಎಂದರು. ಮುಂಬರುವ ತಾಪಂ, ಜಿಪಂ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ
ಪಕ್ಷದಿಂದ ಶೇ. 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಆ ನಿಟ್ಟಿನಲ್ಲಿಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಾರ್ಡ್ ಕಮಿಟಿ ರಚಿಸಲಾಗಿದೆ. ಇದುವರೆಗೆಸ್ಥಳೀಯ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಗ್ರಾಪಂನಿಂದಲೇ ಮಹತ್ವ ನೀಡಲಾಗುತ್ತಿದೆ. ಗ್ರಾಪಂ ಚುನಾವಣೆಯಲ್ಲಿ 506 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಬೆಂಬಲಿತದ ಅಭ್ಯರ್ಥಿಗಳು ಸ್ಪ ರ್ಧಿಸಿದ್ದರು. ಅದರಲ್ಲಿ 250ಕ್ಕೂ ಹೆಚ್ಚು ಸದಸ್ಯರು ಆಯ್ಕೆಯಾಗಿದ್ದಾರೆ. ಹು-ಧಾ ಮಹಾನಗರ ಪಾಲಿಕೆಗೂ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಿ.ಆರ್. ತೊರವಿ, ಕಲ್ಲಪ್ಪ ದೊಡ್ಡಮನಿ, ಪ್ರೇಮನಾಥ ಚಿಕ್ಕತುಂಬಳ, ಇಮ್ತಿಯಾಜ್ ಬಿಜಾಪುರ, ಮಂಜುನಾಥ ಆರೇರ ಇದ್ದರು.