Advertisement

BJP-JDS 2ನೇ ದಿನ 22 ಕಿ.ಮೀ. ಮೈತ್ರಿ ಪಾದಯಾತ್ರೆ

11:37 PM Aug 04, 2024 | Team Udayavani |

ರಾಮನಗರ: ಬಿಡದಿಯಿಂದ ಆರಂಭಗೊಂಡಿದ್ದ ಮೈತ್ರಿ ಪಕ್ಷದ ಮೈಸೂರು ಚಲೋ ಪಾದಯಾತ್ರೆ ಎರಡನೇ ದಿನ 22 ಕಿ.ಮೀ. ದೂರ ಪಟ್ಟಣದ ಕೆಂಗಲ್‌ ಬಳಿ ಅಂತ್ಯಗೊಂಡಿತು.

Advertisement

ಬಿಡದಿಯಲ್ಲಿ ಕೇಂದ್ರ ಸಚಿವ ಎಚ್‌. ಡಿ. ಕುಮಾರಸ್ವಾಮಿ ತಮ್ಮ ರಾಜಕೀಯ ಎದುರಾಳಿ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆ ಮಧ್ಯಾಹ್ನ ರಾಮನಗರಕ್ಕೆ ತಲುಪಿತು. ಸಂಜೆ ರಾಮನಗರ ಪ್ರವೇಶಿಸಿ ಬಹಿರಂಗ ಸಮಾವೇಶ ನಡೆಸಲಾಯಿತು. ರಾತ್ರಿ 8ಕ್ಕೆ ಕೆಂಗಲ್‌ಗೆ ಆಗಮಿಸಿ ಅಲ್ಲಿ ವಾಸ್ತವ್ಯ ಹೂಡಲಾಯಿತು.

ಬಿಜೆಪಿ ಕಾರ್ಯಕರ್ತರೇ ಹೆಚ್ಚು;
ಜೆಡಿಎಸ್‌ ಕಾರ್ಯಕರ್ತರು ವಿರಳ
ಪಾದಯಾತ್ರೆ 2ನೇ ದಿನದಲ್ಲಿಯೂ ಬಿಜೆಪಿ ಕಾರ್ಯ ಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜೆಡಿಎಸ್‌ ಕಾರ್ಯಕರ್ತರ ಸಂಖ್ಯೆ ವಿರಳವಾಗಿತ್ತು. ಜೆಡಿಎಸ್‌ ಬಲಿಷ್ಠವಾಗಿ ರುವ ಪ್ರಾಂತ್ಯದಲ್ಲೇ ಪಾದಯಾತ್ರೆ ಸಾಗುತ್ತಿದ್ದರೂ ಜೆಡಿಎಸ್‌ ಕಾರ್ಯಕರ್ತರ ಸಂಖ್ಯೆ ಕಡಿಮೆ ಇದ್ದಿದ್ದು ಅಚ್ಚರಿಗೆ ಕಾರಣವಾಯಿತು. ಬಿಜೆಪಿ ನಾಯಕರನ್ನು ಈ ಬಗ್ಗೆ ಪ್ರಶ್ನಿಸಿದಾಗ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಡಿಯಲು ನೀರು ಉಂಟು,
ಶೌಚಾಲಯ ವ್ಯವಸ್ಥೆ ಇಲ್ಲ!
ಪಾದಯಾತ್ರೆ ಸಾಗುವ ಹಾದಿಯಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಸೂಕ್ತ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಶೌಚಾಲಯದ ಸಮಸ್ಯೆ ಹಲವರನ್ನು ಕಾಡಿತ್ತು. ಅದರಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆ ತಂದಿತ್ತು. ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಇರಬೇಕಿತ್ತು ಎಂದು ಬಿಜೆಪಿಯ ಮಹಿಳಾ ಕಾರ್ಯಕರ್ತೆಯೊಬ್ಬರು ಅಭಿಪ್ರಾಯಪಟ್ಟರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next