Advertisement

ಬಿಜೆಪಿ 282, ಕಾಂಗ್ರೆಸ್‌ 250 ನಾಮಪತ್ರ

06:30 AM Apr 26, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಮತ್ತು ಪಕ್ಷೇತರರು ಸೇರಿ ಒಟ್ಟು 3,374 ಆಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಆದರೆ, ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಚಿತ್ರಣ ಏ.27ಕ್ಕೆ ಸ್ಪಷ್ಟವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸಿದ ಒಟ್ಟು ಆಭ್ಯರ್ಥಿಗಳಲ್ಲಿ 3,115 ಪುರುಷರು, 259 ಮಹಿಳೆಯರಿದ್ದಾರೆ.

ಅದೇ ರೀತಿ ಪಕ್ಷವಾರು ಬಿಜೆಪಿಯಿಂದ 282, ಕಾಂಗ್ರೆಸ್‌ನಿಂದ 250, ಜೆಡಿಎಸ್‌ನಿಂದ 231, ಬಿಎಸ್‌ಪಿ 22, ಸಿಪಿಐ 3, ಸಿಪಿಎಂ 2, ಎನ್‌ಸಿಪಿ 15 ಅಭ್ಯ ರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, ಇತರರು 896, ಪಕ್ಷೇತರ 1,673 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿ ಅತಿಹೆಚ್ಚು 60 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, ವರುಣಾದಲ್ಲಿ 35,ಹುಬ್ಬಳ್ಳಿ- ಧಾರವಾಡ ಕೇಂದ್ರ 32 ಹಾಗೂ ರಾಯಚೂರಿನಲ್ಲಿ 30 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದ 95 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

16 ಅಭ್ಯರ್ಥಿಗಳಿರುವ ಕ್ಷೇತ್ರ ಗಳಲ್ಲಿ ಒಂದು ಮತಗಟ್ಟೆಯಲ್ಲಿ ಎರಡು ಇವಿಎಂಗಳನ್ನು ಇಡಬೇಕಾಗುತ್ತದೆ. ನಾಮಪತ್ರ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಕೆಲವೊಂದು ನಾಮಪತ್ರ ತಿರಸ್ಕೃತ ವಾಗಬಹುದು,ಮತ್ತೆ ಕೆಲ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆಯಬಹುದು.

Advertisement

3,374 ಅಭ್ಯರ್ಥಿಗಳು ಅಂತಿಮವಲ್ಲ. ನಾಮಪತ್ರ ವಾಪಸ್‌ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿಸಿದರು.

ಐವರು 80+
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಐವರು 80 ವರ್ಷ ದಾಟಿದ ಹಿರಿಯರಿದ್ದಾರೆ. ಅದರಲ್ಲಿ ಕಾಂಗ್ರೆಸ್ಸಿನ ಕಾಗೋಡು ತಿಮ್ಮಪ್ಪ (87), ಶಾಮನೂರು ಶಿವಶಂಕರಪ್ಪ (86), ಡಾ.ಎ.ಬಿ.ಮಾಲಕರೆಡ್ಡಿ (82), ಬಿಜೆಪಿಯ ಸಿ.ಎಂ.ಉದಾಸಿ (82), ಜೆಡಿಎಸ್‌ನ ಎಂ.ಸಿ.ಮನಗೋಳಿ (82) ಇದ್ದಾರೆ. ಶ್ರವಣಬೆಳಗೊಳದಿಂದ ಅತಿ ಕಡಿಮೆ 5 ಅಭ್ಯರ್ಥಿಗಳು 9 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಉಳಿದಂತೆ 41ರಿಂದ 50 ವರ್ಷದ 1,046, 31ರಿಂದ 41 ವರ್ಷದ 854, 51ರಿಂದ 60 ವರ್ಷದ 750, 61ರಿಂದ 70 ವರ್ಷದ 414, 25ರಿಂದ 30 ವರ್ಷದ 242, 71ರಿಂದ 80 ವರ್ಷದ 63 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next