Advertisement
ಬಿಸ್ಕತ್ ಉಂಡೆಬೇಕಾಗುವ ಸಾಮಗ್ರಿ: ಮಾರಿ ಬಿಸ್ಕತ್- ಒಂದು ಪ್ಯಾಕೆಟ್, ಬೆಣ್ಣೆ – ಎರಡು ಚಮಚ, ಕೊಕೋ ಪೌಡರ್ ಅಥವಾ ಬ್ರೂ ಕಾಫಿ- ಎರಡು ಚಮಚ, ಸಕ್ಕರೆ- ಆರು ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ ತರಿಗಳು-ಆರು ಚಮಚ.
ಬೇಕಾಗುವ ಸಾಮಗ್ರಿ: ಗೋಧಿಹುಡಿ- ಒಂದು ಕಪ್, ಮೈದಾಹುಡಿ- ಒಂದು ಕಪ್, ತೆಂಗಿನತುರಿ- ಅರ್ಧ ಕಪ್, ಸಕ್ಕರೆ- ಅರ್ಧ ಕಪ್, ಬೆಣ್ಣೆ- ಕಾಲು ಕಪ್.
ತಯಾರಿಸುವ ವಿಧಾನ: ತೆಂಗಿನತುರಿಗೆ ಸಕ್ಕರೆ ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಗೋಧಿಹುಡಿ, ಮೈದಾ ಮತ್ತು ಬೆಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ. ನಂತರ ಅರ್ಧಗಂಟೆ ಬಿಟ್ಟು ಚಿಕ್ಕಚಿಕ್ಕ ಉಂಡೆ ಮಾಡಿ ಬಿಸ್ಕತ್‌ನ ಹದಕ್ಕೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಸಕ್ಕರೆ ಜಾಸ್ತಿ ಆದರೆ ಉಂಡೆ ಕರಿಯುವಾಗ ಎಣ್ಣೆಯಲ್ಲಿ ಕರಗುತ್ತದೆ. ಆದ್ದರಿಂದ ಒಂದನ್ನು ಕರಿದು ನೋಡಿಕೊಂಡು ಉಳಿದವುಗಳನ್ನು ಕರಿಯಿರಿ.
Related Articles
ಬೇಕಾಗುವ ಸಾಮಗ್ರಿ: ಹಾಲು- ಒಂದು ಕಪ್, ವೆನಿಲ್ಲಾ ಕಸ್ಟರ್ಡ್ ಪುಡಿ- ಎರಡು ಚಮಚ, ಸಕ್ಕರೆ- ನಾಲ್ಕು ಚಮಚ, ಸೇಬು, ಬನಾನ, ಖರ್ಜೂರ, ದ್ರಾಕ್ಷಿ ಇತ್ಯಾದಿ ಹಣ್ಣುಗಳ ಮಿಶ್ರಣ- ಅರ್ಧ ಕಪ್, ಮಾರಿಬಿಸ್ಕತ್- ಆರು.
ತಯಾರಿಸುವ ವಿಧಾನ: ಹಾಲಿಗೆ ಕಸ್ಟರ್ಡ್ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಒಲೆಯಲ್ಲಿ ಇಡಿ. ಸಕ್ಕರೆ ಸೇರಿಸಿ ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಕುದಿಸಿ ಒಲೆಯಿಂದ ಇಳಿಸಿ, ಆರಲು ಬಿಡಿ. ನಂತರ, ಇದನ್ನು ಫ್ರಿಜ್‌ನಲ್ಲಿ ಎರಡು ಗಂಟೆ ಇಡಿ. ಹಣ್ಣುಗಳ ಮಿಶ್ರಣಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ, ಮಿಶ್ರಮಾಡಿ ಫ್ರಿಜ್‌ನಲ್ಲಿಡಿ. ಸರ್ವಿಂಗ್ ಕಪ್‌ಗೆ ನಾಲ್ಕು ಚಮಚ ಕಸ್ಟರ್ಡ್ ಹಾಕಿ ಮೇಲಿನಿಂದ ಎರಡು ಚಮಚ ಹಣ್ಣುಗಳ ಮಿಶ್ರಣ ಹರಡಿ, ಬಿಸ್ಕತ್ ಸೇರಿಸಿ ಮೇಲಿನಿಂದ ಚೆರಿಯಿಂದ ಅಲಂಕರಿಸಿ ಸರ್ವ್ ಮಾಡಬಹುದು.
Advertisement
ಸಿಂಪಲ್ ಬಿಸ್ಕತ್ ಕೇಕ್ ಬೇಕಾಗುವ ಸಾಮಗ್ರಿ: ಪಾರ್ಲೆ ಜಿ ಬಿಸ್ಕತ್- ಮೂವತ್ತು, ಕ್ರೀಮ್ ತುಂಬಿದ ಚಾಕೋಲೆಟ್ ಬಿಸ್ಕತ್- ಹತ್ತು, ನ್ಯಾಚುರಲ್ ಫ್ಲೇವರ್‌ನ ಯುನೋ- ಅರ್ಧ ಪ್ಯಾಕೆಟ್, ಸಕ್ಕರೆ- ಎರಡು ಚಮಚ, ದಪ್ಪಹಾಲು- ಒಂದು ಕಪ್, ಗೋಡಂಬಿ, ದ್ರಾಕ್ಷಿ ಮತ್ತು ಟೂಟಿಫೂÅಟೀ- ಆರು ಚಮಚ.
ತಯಾರಿಸುವ ವಿಧಾನ: ಮೇಲಿನ ಬಿಸ್ಕತ್‌ಗಳಿಗೆ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಯುನೋ ಸೇರಿಸಿ ಮಿಶ್ರಮಾಡಿ. ನಂತರ, ಇದಕ್ಕೆ ಹದ ನೋಡಿಕೊಂಡು ಹಾಲು ಸೇರಿಸಿ ಬೀಟರ್ ನಿಂದ ಚೆನ್ನಾಗಿ ಬೀಟ್ ಮಾಡಿ, ಬೆಣ್ಣೆ ಸವರಿದ ಕೇಕ್‌ನ ಬೌಲ್‌ಗೆ ಹಾಕಿ ಮೇಲಿನಿಂದ ಡ್ರೆ„ಫೂÅಟ್ಸ್ ಹರಡಿ ಓವೆನ್‌ನಲ್ಲಿ ಸುಮಾರು ಏಳು ನಿಮಿಷ ಬೇಯಿಸಿ. – ಗೀತಸದಾ