Advertisement
ಇನ್ನು ಮುಂದೆ ಚೀನದಿಂದ ಆಮದಾಗುವ ರಬ್ಬರ್ ಅಥವಾ ಪ್ಲಾಸ್ಟಿಕ್ ಬೊಂಬೆಗಳು, ಉಕ್ಕಿನ ಪಟ್ಟಿಗಳು, ದೂರವಾಣಿ ಸಲಕರಣೆಗಳು, ದೈತ್ಯ ಯಂತ್ರೋಪಕರಣ, ಪೇಪರ್ ವಸ್ತುಗಳು, ಗಾಜಿನ ಸಾಮಗ್ರಿಗಳ ಸಹಿತ ಸುಮಾರು 371 ವಸ್ತುಗಳ ಗುಣಮಟ್ಟ ಭಾರತೀಯ ಮಾನದಂಡಗಳಿಗೆ (ಐಎಸ್) ಅನುಗುಣವಾಗಿರಬೇಕೆಂಬ ನಿಯಮವನ್ನು ಮುಂದಿನ ಮಾರ್ಚ್‌ನಿಂದ ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಮೂಲಕ ಭಾರತೀಯ ಸಣ್ಣ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಚೀನ ಹೊಂದಿರುವ ಹಿಡಿತವನ್ನು ತಪ್ಪಿಸುವ ಪ್ರಯತ್ನಕ್ಕೆ ಕೈಯಿಕ್ಕಿದೆ.
ಉತ್ತಮ ಗುಣಮಟ್ಟದ ವಸ್ತುಗಳು ಮಾತ್ರ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಬೇಕೆಂದು ನಿರ್ಧರಿಸಿದೆ. ಇತ್ತೀಚೆಗೆ ರೂಪಿತವಾಗಿರುವ ಆತ್ಮನಿರ್ಭರ ಭಾರತ ನಿರ್ಮಾಣ ಪರಿಕಲ್ಪನೆಯಡಿ ಇಂಥ ಸಾಮಗ್ರಿಗಳನ್ನು ಭಾರತದಲ್ಲೇ ಉತ್ಪಾದಿಸಲು ಆದ್ಯತೆ ನೀಡಲಾಗುತ್ತಿದೆ. ಚೀನ ಮತ್ತು ಇನ್ನಿತರ ರಾಷ್ಟ್ರಗಳಿಂದ ಬರುವ ಸಾಮಗ್ರಿಗಳು ನವಿ ಮುಂಬಯಿಯ ಜವಾಹರ ಲಾಲ್ ನೆಹರೂ ಬಂದರು, ಗುಜರಾತ್‌ನ ಕಛ್ ಜಿಲ್ಲೆಯ ಕಾಂಡ್ಲಾ ಬಂದರುಗಳ ಮೂಲಕವೇ ಭಾರತಕ್ಕೆ ಬರುತ್ತವೆ. ಹಾಗಾಗಿ ಮುಂದಿನ ಮಾರ್ಚ್‌ನಿಂದ ಅಧಿಕಾರಿಗಳನ್ನು ಆ ಬಂದರುಗಳಲ್ಲಿ ನಿಯೋಜಿಸಿ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಡರ್ಡ್ಸ್ (ಬಿಐಎಸ್) ಮಹಾ ನಿರ್ದೇಶಕ ಪ್ರಮೋದ್ ಕುಮಾರ್ ಮಾಹಿತಿ ನೀಡಿದ್ದಾರೆ.
Related Articles
ಹಲವಾರು ಸುತ್ತಿನ ಮಾತುಕತೆಗಳ ಅನಂತರವೂ ಲಡಾಖ್‌ನಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಸಂಪೂರ್ಣ ಉಪಶಮನವಾಗಿಲ್ಲ. ಆದರೆ ಮುಂಬರುವ ಚಳಿಗಾಲ ಅಲ್ಲಿನ ಭೌಗೋಳಿಕ ಸ್ಥಿತಿಗತಿಯ ಜತೆಗೆ ರಾಜಕೀಯ ಚಿತ್ರಣವನ್ನೂ ಬದಲಾಯಿಸಲಿದೆ ಎನ್ನಲಾಗಿದೆ. ಸಮುದ್ರ ಮಟ್ಟಕ್ಕಿಂತ 16 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಅಲ್ಲಿ ಮುಂದಿನ ತಿಂಗಳಿನಿಂದ ಚಳಿ ತೀವ್ರವಾಗಲಿದೆ.
Advertisement
ಈಗಾಗಲೇ ಲಡಾಖ್ ಮತ್ತು ಸುತ್ತಲಿನ ನದಿ, ಸರೋವರಗಳು ಹೆಪ್ಪುಗಟ್ಟಲಾರಂಭಿಸಿವೆ. ಮುಂದಿನ ತಿಂಗಳು ಹಿಮಪಾತ ಕೂಡ ಅತ್ಯಧಿಕವಾಗಲಿದೆ. ಈಗಾಗಲೇ ಅಲ್ಲಿರುವ ಸೈನಿಕರು ಆಮ್ಲಜನಕದ ಕೊರತೆ (ಹೈಪೋಕ್ಸಿಯಾ) ಮತ್ತು ಅತಿ ಶೀತ (ಹೈಪೋಥರ್ಮಿಯಾ) ಬಾಧೆಗಳಿಗೆ ತುತ್ತಾಗಿದ್ದಾರೆ. ಚಳಿಗಾಲ ಇದನ್ನು ಇನ್ನೂ ತೀವ್ರವಾಗಿಸಲಿದೆ.
ಸೋರ್ಸ್ ಕೋಡ್ ಕಡ್ಡಾಯ?ಭಾರತೀಯ ದೂರವಾಣಿ ಕ್ಷೇತ್ರದ ಖಾಸಗಿ ಕಂಪೆನಿಗಳು ದೂರವಾಣಿ ಪರಿಕರಗಳನ್ನು ಚೀನದಿಂದ ಆಮದು ಮಾಡಿಕೊಳ್ಳುವುದಕ್ಕೆ ಕೂಡ ಕಡಿವಾಣ ಹಾಕಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ವಿದೇಶಗಳಿಂದ ಆಮದಾಗುವ ದೂರವಾಣಿ ಪರಿಕರಗಳಿಗೆ ಮ್ಯಾಂಡೇಟರಿ ಟೆಸ್ಟಿಂಗ್ ಆ್ಯಂಡ್ ಸರ್ಟಿಫಿಕೇಶನ್ ಆಫ್ ಟೆಲಿಕಾಂ ಇಕ್ವಿಪ್‌ಮೆಂಟ್ (ಎಂಟಿಸಿಟಿಇ) ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಈ ನಿಯಮ ಜಾರಿಯಾದರೆ ಭಾರತದ ಖಾಸಗಿ ದೂರವಾಣಿ ಕಂಪೆನಿಗಳು ಆಮದು ಸಾಮಗ್ರಿಗಳ ಸೋರ್ಸ್ ಕೋಡ್ ಗಳನ್ನು ಸರಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಜತೆಗೆ ಆ ಸಾಮಗ್ರಿಗಳನ್ನು ಥರ್ಡ್ ಪಾರ್ಟಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡಿಸಿ, ಮೂಲ, ಗುಣಮಟ್ಟ ಸಾಬೀತಾದ ಅನಂತರವಷ್ಟೇ ಆಮದು ಮಾಡಿಕೊಳ್ಳಲು ಅನುಮತಿ ಸಿಗುತ್ತದೆ.