Advertisement
ಶನಿವಾರ ರಾತ್ರಿ ಸುಮಾರು 10 ಗಂಟೆಯಿಂದ ಬೆಳಗ್ಗಿನ ಜಾವ ಸುಮಾರು 3.15ರ ವರೆಗೆ ನಗರದ ಲೇಡಿಹಿಲ್‌ನಿಂದ ಉರ್ವಸ್ಟೋರ್ ಬಸ್ ನಿಲ್ದಾಣದವರೆಗೆ ಸುಮಾರು 9 ಕಡೆಗಳಲ್ಲಿ ಮಹಿಳಾ ವೇದಿಕೆಯ 15 ಮಂದಿ ಸದಸ್ಯೆಯರು ಹಂಪ್ಸ್‌ಗಳಿಗೆ ಬಣ್ಣ ಬಳಿದಿದ್ದಾರೆ. ಇವರ ಈ ಕೆಲಸಕ್ಕೆ ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ಉದ್ಯಮಿ ಸಚಿನ್, ಕೇಂದ್ರೀಯ ಸಮಿತಿ ಸದಸ್ಯರು ಉರ್ವ ಪೊಲೀಸ್ ಠಾಣೆ ಸಿಬಂದಿ ಸಾಥ್ ನೀಡಿದ್ದಾರೆ.”ಬಣ್ಣ ಕಳೆದುಕೊಂಡಿವೆ ಝೀಬ್ರಾ ಕ್ರಾಸ್, ಹಂಪ್ಸ್’ ಎಂಬ ಬಗ್ಗೆ ಉದಯವಾಣಿ ಸುದಿನವು ಇತ್ತೀಚೆಗೆ ವರದಿ ಪ್ರಕಟಿಸಿತ್ತು.
ಬಿರುವೆರ್ ಕುಡ್ಲ ಮಹಿಳಾ ವೇದಿಕೆಯ ಅಶೋಕನಗರ ವಲಯ ಸಂಘಟಕಿ ಸುಮಂಗಲಾ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ನಗರದ ಕೆಲವೊಂದು ರಸ್ತೆ ಉಬ್ಬುಗಳಲ್ಲಿ ಬಣ್ಣ ಮಾಸಿದ್ದು, ಹಂಪ್ಸ್ ಇರುವುದು ತಿಳಿಯದೆ ಕೆಲವು ದಿನಗಳ ಹಿಂದೆ ವಾಹನವೊಂದು ಸ್ಕಿಡ್ ಆಗಿತ್ತು. ಇದನ್ನು ಮನಗಂಡು ನಮ್ಮ ಸಂಘಟನೆಯ ಪ್ರಮುಖರು, ಮಹಿಳಾ ವೇದಿಕೆಯ ಸದಸ್ಯರು ಚರ್ಚೆ ನಡೆಸಿ ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಕೆಲಸ ನಿರ್ವಹಿಸಿದೆವು’ ಎನ್ನುತ್ತಾರೆ.
Related Articles
Advertisement