Advertisement

ಚೀನದಲ್ಲಿ ಮಾನವನಿಗೆ ಹಕ್ಕಿಜ್ವರ ದೃಢ

03:03 AM Jun 02, 2021 | Team Udayavani |

ಬೀಜಿಂಗ್‌: ಜಗತ್ತಿನಲ್ಲಿಯೇ ಮೊದಲ ಬಾರಿಗೆ ಎಚ್‌10ಎನ್‌3 ಹಕ್ಕಿಜ್ವರ ಮಾನವನಿಗೆ ದೃಢಪಟ್ಟಿದೆ. ಕೊರೊನಾ ಸೋಂಕು ಜಗತ್ತಿಗೆ ಹಬ್ಬಿದ ಚೀನದ ಜಿಯಾಂಗ್‌ಸು ಪ್ರಾಂತ್ಯದಲ್ಲಿ ಈ ಬೆಳವಣಿಗೆ ನಡೆದಿದೆ.

Advertisement

ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ನೀಡಿದ ಮಾಹಿತಿ ಪ್ರಕಾರ ಜಿಯಾಂಗ್‌ಸು ಪ್ರಾಂತ್ಯದ 41 ವರ್ಷ ವಯಸ್ಸಿನ ವ್ಯಕ್ತಿ ಎ. 28ರಂದು ಜ್ವರ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನನ್ನು ಸಮಗ್ರವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಆರೋಗ್ಯದ ಮೇಲೆ ನಿಗಾ ಇರಿಸಿದ ಬಳಿಕ ಮೇ 28ರಂದು ಆತನಿಗೆ ಎಚ್‌10ಎನ್‌3 ಹಕ್ಕಿಜ್ವರ ತಗಲಿದ್ದು, ಖಚಿತ ವಾಯಿತು. ಸದ್ಯ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಇದು ಮಾರಕ ಸೋಂಕು ಹೌದೋ ಅಲ್ಲವೋ ಎಂಬ ಬಗ್ಗೆ ಆಯೋಗ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಇತರ ಅಧ್ಯಯನಗಳ ಪ್ರಕಾರ, ಪಕ್ಷಿಗಳಿಗೆ ಕೂಡ ಈ ಮಾದರಿಯ ಸೋಂಕು ಕಡಿಮೆ ಅಪಾಯಕಾರಿ ಮತ್ತು ವ್ಯಾಪ ಕ ವಾ ಗಿ ಹರಡುವಂಥದ್ದಲ್ಲ ಎಂದು ಆರೋಗ್ಯ ಆಯೋಗ ಹೇಳಿ ಕೊಂಡಿದೆ. ಕೊರೊನಾ ಸೋಂಕು ಜಗತ್ತಿಗೆ ಹಬ್ಬಿದ ಬಳಿಕ ಚೀನದಲ್ಲಿ ಅಪಾಯಕಾರಿಯಾಗಿರುವ ಹಲವು ವಿಧದ ಮಾರಕ ಜ್ವರದ ಸೋಂಕುಗಳು ಇವೆ. ಪಕ್ಷಿಗಳ ಸಾಕಣೆ ಕ್ಷೇತ್ರದಲ್ಲಿ ಅವುಗಳು ಸಾಮಾನ್ಯವಾಗಿದೆ. 2016-17ನೇ ಸಾಲಿನಲ್ಲಿ ಕಂಡುಬಂದಿದ್ದ ಎಚ್‌7ಎನ್‌9 ಮಾದರಿಯ ಹಕ್ಕಿಜ್ವರದಿಂದ 300 ಮಂದಿ ಅಸುನೀಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next