Advertisement

ಕೋವಿಡ್ ನಡುವೆ ಹಕ್ಕಿಜ್ವರ ಭೀತಿ: ಕೇರಳದಲ್ಲಿ ರಾಜ್ಯ ವಿಪತ್ತು ಘೋಷಣೆ, ಹಲವೆಡೆ ಹೈ ಅಲರ್ಟ್

06:27 PM Jan 05, 2021 | Team Udayavani |

ಕೇರಳ: ಕೋವಿಡ್ ಭೀತಿಯ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರದ ತೀವ್ರತೆ ಹೆಚ್ಚಾಗಿದ್ದು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಇದನ್ನು ರಾಜ್ಯ ವಿಪತ್ತು ಎಂದು ಪರಿಗಣಿಸಿ ಹೈ ಅಲರ್ಟ್ ಘೋಷಿಸಿದೆ. ಈಗಾಗಲೇ ಕೇರಳದ ಕೊಟ್ಟಾಯಂ, ಅಲಪ್ಪುಲ ಜಿಲ್ಲೆಯಲ್ಲಿ ವೈರಸ್ ಪತ್ತೆಯಾಗಿದೆ.

Advertisement

ಕೇರಳದ ನೆಡುಮ್ಮುಡಿ, ಪಲ್ಲಿಪಾಡ್, ಕರುವೆಟ್ಟಾ, ಕುಟ್ಟನಾಡ್ ಪಂಚಾಯತ್ ಪ್ರದೇಶಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೊಟ್ಟಾಯಂನ ನೀಂದೂರ್‌ನಲ್ಲಿರುವ ಬಾತುಕೋಳಿ ಫಾರಂ ಒಂದರಲ್ಲಿ ಎಚ್‌5 ಎನ್‌8 ವೈರಸ್‌ ಸೋಂಕಿನಿಂದ ಸುಮಾರು 1,700ರಷ್ಟು ಬಾತುಕೋಳಿಗಳು ಸತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಎಲ್ಲ ಬಾತುಕೋಳಿಗಳು, ಕೋಳಿಗಳು ಮತ್ತು ಇತರ ಸಾಕು ಹಕ್ಕಿಗಳನ್ನು ಕೊಲ್ಲಲು ಸ್ಥಳೀಯಾಡಳಿತ ನಿರ್ಧರಿಸಿದೆ.

ಕುಟ್ಟನಾಡ್ ಪ್ರದೇಶದ 34 ಸಾವಿರ ಸೇರಿದಂತೆ ಒಟ್ಟಾರೆ 40 ಸಾವಿರ ಹಕ್ಕಿಗಳನ್ನು ಪರಿಶೀಲನೆಗೆ ಒಳಪಡಿಲಾಗಿದೆ. ಅಲಪ್ಪುಳ ಜಿಲ್ಲಾಧಿಕಾರಿಯು ಕುಟ್ಟನಾಡ್ ಮತ್ತು ಕಾರ್ತಿಕಪ್ಪಳ್ಳಿ ತಾಲ್ಲೂಕುಗಳಲ್ಲಿ ಬಾತುಕೋಳಿಗಳು ಮತ್ತು ಕೋಳಿ ಸೇರಿದಂತೆ ದೇಶೀಯ ಪಕ್ಷಿಗಳ ಮಾಂಸ, ಮೊಟ್ಟೆ ಮತ್ತು ತ್ಯಾಜ್ಯಗಳ ಬಳಕೆ ಮತ್ತು ವ್ಯಾಪಾರವನ್ನು ನಿಷೇಧಿಸಿದ್ದಾರೆ.

ಏತನ್ಮಧ‍್ಯೆ ವೈರಸ್ ಹರಡುವುದನ್ನು ತಡೆಗಟ್ಟಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಕ್ಕಿ ಜ್ವರ ಕಂಡುಬಂದಿರುವ ಪ್ರದೇಶಗಳ 10 ಕಿ. ಮೀ ವ್ಯಾಪ್ತಿಗೆ ಬರುತ್ತಿರುವ ವಲಸೆ ಹಕ್ಕಿಗಳನ್ನು ಕೂಡ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ರಾಜ್ಯ ಅರಣ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:  ಫಾರ್ಚೂನ್‌ ಅಡುಗೆ ಎಣ್ಣೆ ಜಾಹೀರಾತಿನಿಂದ ಗಂಗೂಲಿಯನ್ನು ಕೈಬಿಟ್ಟ ಅದಾನಿ ವಿಲ್ಮಾರ್‌ ಕಂಪನಿ

Advertisement

ಕೇರಳ ಹೊರತುಪಡಿಸಿದರೆ ರಾಜಸ್ತಾನ, ಮಧ್ಯಪ್ರದೇಶ, ಹಿಮಾಚಲ್ ಪ್ರದೇಶಗಳಲ್ಲಿ ಈ ವೈರಸ್ ಕಂಡುಬಂದಿದೆ. ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಂಗ್ ಅಣೆಕಟ್ಟು ಬಳಿ 1800 ಹಕ್ಕಿಗಳು ಸತ್ತುಬಿದ್ದಿದ್ದು, ಅವುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂಬುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ತಾನದಲ್ಲಿ ಸತ್ತುಬಿದ್ದಿರುವ 425 ಹಕ್ಕಿಗಳಲ್ಲಿ ವೈರಸ್ ಕಂಡುಬಂದಿವೆ. ಪಕ್ಷಿ ಜ್ವರವು influenza virus ನಿಂದ ಉಂಟಾಗುವುದು,  ಪಕ್ಷಿಗಳಲ್ಲಿ ಇದು ಹೆಚ್ಚು ಸಾಂಕ್ರಾಮಿಕ ಮತ್ತು ತೀವ್ರವಾದ ಉಸಿರಾಟದ ಕಾಯಿಲೆಯಾಗಿದೆ. ಸೋಂಕಿತ ಪಕ್ಷಿಗಳ ಮಲ, ಬಾಯಿ ಅಥವಾ ಕಣ್ಣಿನ ಸ್ರಾವದ ಮೂಲಕ ರೋಗ ಮಾನವರಿಗೆ ಹರಡಬಹುದು.

ಇದನ್ನೂ ಓದಿ:  ಭಾರತದಲ್ಲಿ ಸಂಚಲನ ಸೃಷ್ಟಿಸಲು ಬರುತ್ತಿದೆ Renault Kiger: ಬಿಡುಗಡೆ ದಿನಾಂಕ ಪ್ರಕಟ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next