Advertisement

ಹಕ್ಕಿ ಜ್ವರ:  ರಾಜ್ಯಕ್ಕೆ ಇಂದು ಕೇಂದ್ರ ತಂಡ 

07:45 AM Jan 04, 2018 | Team Udayavani |

ಬೆಂಗಳೂರು: ಹಕ್ಕಿ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರದ ತಂಡ ಗುರುವಾರ ನಗರಕ್ಕೆ ಆಗಮಿಸುತ್ತಿದೆ ಎಂದು ಪಶು ಸಂಗೋಪನೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಕತ್ರಿ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ  ಈ ಸಂಬಂಧ ಮೇಯರ್‌ ಸಂಪತ್‌ರಾಜ್‌, ಆಯುಕ್ತ ಮಂಜುನಾಥ್‌ ಪ್ರಸಾದ್‌ ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಕೇಂದ್ರದ ತಂಡ  ಆಗಮಿಸಿ ಪರಿಶೀಲನೆ ನಂತರ ಅವರು ನೀಡುವ ಸಲಹೆ ಅನುಷ್ಟಾನಕ್ಕೆ ತರುತ್ತೇವೆ ಎಂದು ಹೇಳಿದರು.

ಹಕ್ಕಿ ಜ್ವರ ಕೋಳಿ ಫಾರಂನಿಂದ ಹರಡಿರುವ ಸಾಧ್ಯತೆ ಕಡಿಮೆ. ಮಾರಾಟ ಮಾಡುವವರ ಅಂಗಡಿಗಳಿಂದ ಹಬ್ಬಿರಬಹುದು. ಇಂತಹ ಶಂಕಿತ ಅಂಗಡಿಗಳನ್ನು ಮುಚ್ಚಿಸಿದ್ದೇವೆ ಎಂದು ತಿಳಿಸಿದರು.

ಹಕ್ಕಿಜ್ವರದ ಮೂಲ ಪತ್ತೆಯಾಗಬೇಕಿದೆ. ಈಗಾಗಲೇ ಹಕ್ಕಿ ಜ್ವರ ಕಾಣಿಸಿಕೊಂಡ  1 ಕಿ.ಮೀ.  ವ್ಯಾಪ್ತಿಯ 71 ಕೋಳಿಗಳನ್ನು ಕೊಲ್ಲಲಾಗಿದೆ ಎಂದರು.

ನಗರದಲ್ಲಿ ಹಕ್ಕಿ ಜ್ವರ ಹರಡದಂತೆ ಕ್ರಮ ಕೈಗೊಳ್ಳಲಾಗಿದ್ದು ಬಿಬಿಎಂಪಿ, ಪಸು ಸಂಗೋಪನೆ ಇಲಾಖೆ, ಪೊಲೀಸ್‌ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಹೇಳಿದರು. ಡಿ.15 ರ ನಂತರ  ಇದೇ ರೀತಿ ಕೋಳಿಗಳು ಮೃತಪಟ್ಟಿರುವ ಮಾಹಿತಿ ಇದ್ದರೆ ಇಲಾಖೆಯ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ಹಕ್ಕಿ ಜ್ವರ  ವಿಚಾರದಲ್ಲಿ ಜನರು ಆತಂಕಪಡಬಾರದು.  ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರು, ನರ್ಸ್‌, ವೈದ್ಯರಿಗೆ ಸೂಚನೆ ನೀಡಲಾಗಿದೆ. ಪ್ರತಿ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ನೂರು ಜನ ಆರೋಗ್ಯ ಕಾರ್ಯಕರ್ತರನ್ನು ಸರ್ವೆಕ್ಷಣೆಗಾಗಿ ನಿಯೋಜಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಂದಲೂ ಮಾಹಿತಿ ಪಡೆಲಾಗುತ್ತಿದೆ  ಎಂದು ಹೇಳಿದರು.

ಸಹಾಯವಾಣಿ
ಪಸು ಸಂಗೋಪನೆ ಇಲಾಖೆಯಿಂದ ಹಕ್ಕಿ ಜ್ವರ ನಿಯಂತ್ರಣ ಸಂಬಂಧ ಎಲ್ಲ ಗ್ರಾಮ ಪಂಚಾಯಿಗಳಿಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು,  ಸಹಾಯವಾಣಿ ಕೇಂದ್ರ 18004250012/080 23417100 ಸ್ಥಾಪಿಸಲಾಗಿದೆ.

ಅರೆಬೆಂದ ಕೋಳಿ ಮಾಂಸ, ಮೊಟ್ಟೆ ಸೇವನೆ ಬೇಡ
ಕೋಳಿ ಮಾಂಸ ತಿನ್ನುವ ಮೊದಲು ಜಾಗೃತರಾಗಿರಬೇಕು. ಅರೆಬೆಂದ, ಸರಿಯಾಗಿ ಬೇಯದ ಕೋಳಿ ಮಾಂಸ ಅಥವಾ ಮೊಟ್ಟೆ ತಿನ್ನಬಾರದು. ಕನಿಷ್ಠ 70 ಡಿಗ್ರಿ ಸೆಂಟಿಗ್ರೇಡ್‌ನ‌ಲ್ಲಿ ಬೇಯ್ದ ಕೋಳಿ ಮಾಂಸ ಮತ್ತು ಮೊಟ್ಟೆ ಸುರಕ್ಷಿತ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇs… ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next