Advertisement

ಬಿನ್ನಿಪೇಟೆ ಬೈ ಎಲೆಕ್ಷನ್‌:ಕೈ -ಜೆಡಿಎಸ್‌ ಕಾರ್ಯಕರ್ತರ ಹೊಡೆದಾಟ !

11:18 AM Jun 18, 2018 | |

ಬೆಂಗಳೂರು: ಬಿಬಿಎಂಪಿ ಸದಸ್ಯೆ ಮಹದೇವಮ್ಮ ಅವರ ನಿಧನದಿಂದ ತೆರವಾಗಿದ್ದ ಬಿನ್ನಿಪೇಟೆ ವಾರ್ಡ್‌ (ಸಂಖ್ಯೆ121) ಉಪಚುನಾವಣೆ  ಮತದಾನ ಸೋಮವಾರ ನಡೆಯುತ್ತಿದ್ದು , ಕಾಂಗ್ರೆಸ್‌ ಕಾರ್ಯಕರ್ತರೊಬ್ಬರ ಮೇಲೆ ಜೆಡಿಎಸ್‌ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. 

Advertisement

ಹಣ ಹಂಚಿಕೆ ಮಾಡುತ್ತಿದ್ದ ಆರೋಪದಲ್ಲಿ ಕಾಂಗ್ರೆಸ್‌ ಮುಖಂಡ ಸುಧಾಕರ್‌ ಎನ್ನುವರನ್ನು ಅಡ್ಡಗಟ್ಟಿದ ಜೆಡಿಎಸ್‌ ಮುಖಂಡ ನಾಗರಾಜ್‌ ಮತ್ತು ಬೆಂಬಲಿಗರು ಥಳಿಸಿದ್ದಾರೆ. ಕೈಯಲ್ಲಿದ್ದ 500 ರೂಪಾಯಿಯ ನೋಟುಗಳ ಕಟ್ಟನ್ನು ಕಸಿದು ಮಾಧ್ಯಮಗಳಿಗೆ ತೋರಿಸಿದ್ದಾರೆ. 

ಘಟನೆ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ರೊಚ್ಚಿಗೆದ್ದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸ್ಥಳದಲ್ಲಿ  ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 

 ಕಾಂಗ್ರೆಸ್‌ನಿಂದ ಶ್ರೀವಿದ್ಯಾ ಶಶಿಕುಮಾರ್‌, ಬಿಜೆಪಿಯಿಂದ ಜಿ.ಚಾಮುಂಡೇ
ಶ್ವರಿ ಹಾಗೂ ಜೆಡಿಎಸ್‌ನಿಂದ ಮಹದೇವಮ್ಮ ಪುತ್ರಿ ಐಶ್ವರ್ಯ ಅವರು ಸ್ಪರ್ಧಿಸಿದ್ದಾರೆ. 

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದರೂ, ಈ ವಾರ್ಡ್‌
ನಲ್ಲಿ ಎರಡು ಪಕ್ಷಗಳ ಮಧ್ಯೆ ನೇರ ಸ್ಪರ್ಧೆ ಇರುವುದರಿಂದ ಮೈತ್ರಿಯಿಂದ ದೂರ ಉಳಿದು ಪರಸ್ಪರ ಸೆಣಸಾಡುತ್ತಿವೆ.

Advertisement

ಬಿನ್ನಿಪೇಟೆಯಲ್ಲಿ ಒಟ್ಟು 37 ಮತಗಟ್ಟೆಗಳನ್ನು ನಿರ್ಮಿಸ ಲಾಗಿದ್ದು, ಆ ಪೈಕಿ 7 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸ ಲಾಗಿದೆ. ವಾರ್ಡ್‌ನಲ್ಲಿ ಒಟ್ಟು 34,572 ಮತದಾರರಿದ್ದಾರೆ.

 ಮತ ಎಣಿಕೆ ಕಾರ್ಯ ಜೂ.20ರಂದು ನಡೆಯಲಿದೆ ಎಂದು ಪಾಲಿಕೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next