Advertisement

African ರಾಷ್ಟ್ರ ಮಲಾವಿಗೆ 1,000 ಟನ್‌ ಅಕ್ಕಿ ಕೊಟ್ಟ ಭಾರತ

12:57 AM Sep 09, 2024 | Team Udayavani |

ಹೊಸದಿಲ್ಲಿ: ಬರಪೀಡಿತ ಆಫ್ರಿಕಾ ಖಂಡದ ಮಲಾವಿ ರಾಷ್ಟ್ರಕ್ಕೆ ಭಾರತ ನೆರವಿನ ಹಸ್ತ ಚಾಚಿದ್ದು, 1000 ಮೆಟ್ರಿಕ್‌ ಟನ್‌ಗಳಷ್ಟು ಅಕ್ಕಿಯನ್ನು ಕಳುಹಿಸಿಕೊಟ್ಟಿದೆ. ಬರದಿಂದಾಗಿ ಮಲಾವಿಯಲ್ಲಿ ವ್ಯಾಪಕ ಬೆಳೆಹಾನಿ ಉಂಟಾಗಿದೆ. ಹೀಗಾಗಿ ಈ ನೆರವು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾ ರಗಳ ಸಚಿವಾಲಯ ತಿಳಿಸಿದೆ.

Advertisement

ಇದಲ್ಲದೆ ಬರದಿಂದ ತೊಂದರೆಗೆ ಈಡಾಗಿರುವ ಮತ್ತೂಂದು ರಾಷ್ಟ್ರ ಜಿಂಬಾಬ್ವೆಗೆ 1000 ಮೆಟ್ರಿಕ್‌ ಟನ್‌ ಅಕ್ಕಿ ಮತ್ತು ಜಾಂಬಿಯಾಗೆ 1300 ಮೆಟ್ರಿಕ್‌ ಟನ್‌ ಜೋಳ ಕಳುಹಿಸಿದೆ. ಭಾರೀ ಅಗ್ನಿ ದುರಂತಕ್ಕೆ ತುತ್ತಾಗಿರುವ ಛಾಡ್‌ಗೆ 2300 ಕೆ.ಜಿ. ಜೀವರಕ್ಷಕ ಔಷಧಿಗಳನ್ನು ಕಳುಹಿಸಲಾಗಿದೆ ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next