Advertisement

Rahul Gandhi: ಸಿಕ್ಖ್‌ ವಿರೋಧಿ ಹೇಳಿಕೆ; ಬಿಜೆಪಿಯಿಂದ ರಾಹುಲ್‌ ನಿವಾಸಕ್ಕೆ ಮುತ್ತಿಗೆ ಯತ್ನ

08:37 PM Sep 11, 2024 | Team Udayavani |

ಹೊಸದಿಲ್ಲಿ: ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಿಕ್ಖ್‌ ಸಮುದಾಯಕ್ಕೆ ಸಂಬಂಧಿಸಿ ನೀಡಿದ ಹೇಳಿಕೆಗಳ ವಿರೋಧಿಸಿ ದೆಹಲಿ ಬಿಜೆಪಿ ಹಾಗೂ ಸಿಕ್ಖ್‌ ಗುಂಪಿನ ಸದಸ್ಯರು ರಾಹುಲ್ ಗಾಂಧಿ ನಿವಾಸದ ಎದುರು ಬುಧವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಸಿಕ್ಖ್‌ ಸಮುದಾಯದ ಬಿಜೆಪಿ ಸದಸ್ಯರು, ಮಹಿಳೆಯರು ಸೇರಿ ಹಲವು ಮಂದಿ ಫಲಕಗಳ ಹಿಡಿದು ಘೋಷಣೆಗಳ ಕೂಗಿದರು.

Advertisement

ಹೊಸದಿಲ್ಲಿಯ ವಿಜ್ಞಾನ ಭವನದಿಂದ ಮೆರವಣಿಗೆ ಹೊರಟ ಬಿಜೆಪಿ ಸದಸ್ಯರು ರಾಹುಲ್ ಗಾಂಧಿ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುವಾಗ ಪ್ರತಿಭಟನಾಕಾರರ ಪೊಲೀಸರು ತಡೆದರು. ಬಿಜೆಪಿ ನಾಯಕ ಆರ್‌.ಪಿ. ಸಿಂಗ್  “ರಾಹುಲ್ ಗಾಂಧಿ ಸಿಕ್ಖರ  ಕ್ಷಮೆ ಯಾಚಿಸಬೇಕು, ಅವರು ಭಾರತದ ಮಾನಹಾನಿಗೆ ವಿದೇಶಿ ನೆಲ ಬಳಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾಕಾರರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳ ಕೂಗಿ ಸಿಕ್ಖ್‌ರನ್ನು  “ಅವಮಾನಿಸಿದ” ಆರೋಪಕ್ಕಾಗಿ ಕ್ಷಮೆ ಯಾಚಿಸಲು ಒತ್ತಾಯಿಸಿದರು. ದೇಶದಲ್ಲಿ 1984ರ ಸಿಖ್ ವಿರೋಧಿ ದಂಗೆಗಳಿಗೆ ಕಾಂಗ್ರೆಸ್ ಹೊಣೆಯಾಗಿದೆ ಎಂದು ಆರೋಪಿಸಿದರು.


ಅಮೆರಿಕದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಏನು?:
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನೂರಾರು ಭಾರತೀಯ ಅಮೆರಿಕನ್ನರ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಭಾರತದಲ್ಲಿ ಸಿಖ್‌ ಸಮುದಾಯದವರಿಗೆ ಪೇಟ ಧರಿಸಲು, ಕಡಗ ಹಾಕಿಕೊಳ್ಳಲು ಅವಕಾಶ ಸಿಗುತ್ತಾ, ಗುರುದ್ವಾರಕ್ಕೆ ಹೋಗಲು ಬಿಡಲಾಗುತ್ತಾ ಎನ್ನುವುದರ ಕುರಿತು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.