Advertisement

ಬಿಂದಾಸ್‌ ಆಕಾಶ್‌

06:00 AM Aug 17, 2018 | |

ಮಕ್ಕಳ ಪ್ರತಿಭೆ ನೋಡಿ ಅದೆಷ್ಟೋ ಪಾಲಕರು ಸಿನಿಮಾ ನಿರ್ಮಾಪಕರಾಗಿದ್ದಾರೆ. ಮಗನ ಪ್ರತಿಭೆಗೊಂದು ವೇದಿಕೆ ಕಲ್ಪಿಸಿಕೊಡುವ ಎಂಬ ಕಾರಣಕ್ಕೆ ಸಾಕಷ್ಟು ಸಿನಿಮಾಗಳು ತಯಾರಾಗುತ್ತಿವೆ. “ಬಿಂದಾಸ್‌ ಗೂಗ್ಲಿ’ ಚಿತ್ರ ಕೂಡಾ ಇದೇ ಕಾರಣದಿಂದ ತಯಾರಾದ ಚಿತ್ರ. ಆಕಾಶ್‌ ಅನ್ವೇಕರ್‌ ಈ ಚಿತ್ರದ ನಾಯಕ. ಬಾಲ್ಯದಿಂದಲೇ ಒಳ್ಳೆಯ ಡ್ಯಾನ್ಸರ್‌ ಆಗಿದ್ದ ಸಂತೋಷ್‌ ಅವರನ್ನು ನೋಡಿದ ಅವರ ತಂದೆ-ತಾಯಿ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ ಒಳ್ಳೆಯ ಭವಿಷ್ಯ ಸಿಗಬಹುದೆಂಬ ಕಾರಣಕ್ಕೆ “ಬಿಂದಾಸ್‌ ಗೂಗ್ಲಿ’ ಚಿತ್ರ ನಿರ್ಮಿಸಿದ್ದಾರೆ. ಸಂತೋಷ್‌ ಈ ಚಿತ್ರದ ನಿರ್ದೇಶಕರು. ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆಕಾಣುತ್ತಿದೆ.

Advertisement

ಆಕಾಶ್‌ ಶಾಲಾ ದಿನಗಳಿಂದಲೇ ಒಳ್ಳೆಯ ಸ್ಫೋರ್ಟ್ಸ್ಮ್ಯಾನ್‌ ಆಗಿದ್ದವರು. ಬ್ಯಾಡ್ಮಿಂಟನ್‌ನ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಆಟವಾಡಿದ ಆಕಾಶ್‌ಗೆ ಡ್ಯಾನ್ಸ್‌ ಎಂದರೆ ತುಂಬಾ ಇಷ್ಟ. ಆ ಕಾರಣದಿಂದಲೇ ಡ್ಯಾನ್ಸ್‌ ಮಾಡುತ್ತಾ, ಒಳ್ಳೆಯ ಡ್ಯಾನ್ಸರ್‌ ಆಗಬೇಕೆಂದು ಕನಸು ಕಂಡಿದ್ದ ಆಕಾಶ್‌ಗೆ ಪಿಯುಸಿ ಮುಗಿಯುತ್ತಿದ್ದಂತೆ ಸಿನಿಮಾ ಮಾಡುವ ಆಸಕ್ತಿ ಬಂತಂತೆ. ಅವರ ಆಸಕ್ತಿಗೆ ಪಾಲಕರು ಕೂಡಾ ಬೆಂಬಲವಾಗಿ ನಿಲ್ಲುವ ಮೂಲಕ ಆಕಾಶ್‌ ಆಸೆ ಈಡೇರಿದೆ. ಸಿನಿಮಾ ಬಗ್ಗೆ ಏನೂ ಗೊತ್ತಿಲ್ಲದೇ ಕ್ಯಾಮರಾ ಮುಂದೆ ಬರಬಾರದು ಎಂಬ ಕಾರಣಕ್ಕೆ ಮುಂಬೈನಲ್ಲಿರುವ ಅನುಪಮ್‌ ಖೇರ್‌ ಆ್ಯಕ್ಟಿಂಗ್‌ ಸ್ಕೂಲ್‌ಗೆ ಸೇರುತ್ತಾರೆ. ಅಲ್ಲಿ ನಟನೆ, ಡ್ಯಾನ್ಸ್‌, ಫೈಟ್‌ ಸೇರಿದಂತೆ ಹಲವು ವಿಭಾಗಗಳಲ್ಲಿ ಪಕ್ಕಾ ಆಗಿ ಬಂದ ಆಕಾಶ್‌ ನೇರವಾಗಿ “ಬಿಂದಾಸ್‌ ಗೂಗ್ಲಿ’ಗೆ ಹೀರೋ ಆಗುತ್ತಾರೆ. 

“”ಬಿಂದಾಸ್‌ ಗೂಗ್ಲಿ’ ಚಿತ್ರದಲ್ಲಿ ಡ್ಯಾನ್ಸ್‌ಗೆ ಹೆಚ್ಚಿನ ಸ್ಕೋಪ್‌ ಇದೆ. ನೃತ್ಯ ನಿರ್ದೇಶಕ ಕಲೈ ಮಾಸ್ಟರ್‌ ಒಳ್ಳೆಯ ಡ್ಯಾನ್ಸ್‌ ಕಂಪೋಸ್‌ ಮಾಡಿದ್ದಾರೆ. ಕಥೆಯೂ ತುಂಬಾ ಭಿನ್ನವಾಗಿದ್ದು, ಈ ಚಿತ್ರದ ಮೂಲಕ ನನಗೊಂದು ಬ್ರೇಕ್‌ ಸಿಗುತ್ತದೆ ಎಂಬ ನಿರೀಕ್ಷೆ ಇದೆ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ’ ಎನ್ನುವುದು ಆಕಾಶ್‌ ಮಾತು. 

ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next